ನವದೆಹಲಿ 17: ನೂತನ ಮುಖ್ಯಮಂತ್ರಿ ಘೋಷಣೆ ಹಾಗೂ ಹೊಸ ಸರ್ಕಾರ ರಚನೆ ವಿಳಂಬ ಖಂಡಿಸಿ ಎಎಪಿ ನಾಯಕಿ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಆತಿಶಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಆತಿಶಿ, ಚುನಾವಣಾ ಫಲಿತಾಂಶ ಪ್ರಕಟವಾಗಿ 10 ದಿನವಾಗುತ್ತಿದೆ. ಬಿಜೆಪಿಯು ಫೆಬ್ರುವರಿ 9ರಂದೇ ಮುಖ್ಯಮಂತ್ರಿ ಹೆಸರು ಘೋಷಿಸಲಿದ್ದು, ಕ್ಯಾಬಿನೆಟ್ ರಚಿಸಿ, ತಕ್ಷಣವೇ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಲಿದೆ ಎಂದು ಜನರು ಭಾವಿಸಿದ್ದರು. ಆದರೆ, ಅವರ ಬಳಿ ದೆಹಲಿಯನ್ನು ಮುನ್ನಡೆಸುವ ಅಭ್ಯರ್ಥಿಯೇ ಇಲ್ಲ ಎಂಬುದು ಇದೀಗ ಸ್ಪಷ್ಟವಾಗಿದೆ' ಎಂದು ಟೀಕಿಸಿದ್ದಾರೆ.
ದೆಹಲಿ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿರುವ ಯಾರ ಮೇಲೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಂಬಿಕೆ ಇಲ್ಲ ಎಂದಿರುವ ಎಎಪಿ ನಾಯಕಿ, ಕೇಸರಿ ಪಕ್ಷವು ದೂರದೃಷ್ಟಿ ಹೊಂದಿಲ್ಲ ಎಂದು ದೂರಿದ್ದಾರೆ.