ಲೋಕದರ್ಶನ ವರದಿ
ಕೊಪ್ಪಳ 21: ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಅನೈತಿಕ ಒಳಒಪ್ಪಂದದಿಂದ ಕೂಡಿರುವ ಸರಕಾರವಾಗಿದ್ದು, ಇವರಿಗೆ ನಮ್ಮ ದೇಶದ ಸಂವಿಧಾನದ ಬಗ್ಗೆ ಗೌರವ ಮತ್ತು ನಂಬಿಕೆ ಇಲ್ಲ ಎಂದು ರಾಜ್ಯ ಸಭಾ ಸದಸ್ಯ ಬಳ್ಳಾರಿಯ ಡಾ.ಸಯ್ಯದ್ ನಾಸೀರ್ ಹುಸೇನರವರು ಆರೋಪಿಸಿದರು.
ಅವರು ಶನಿವಾರ ಇಲ್ಲಿನ ಈದ್ಗಾ ಮೈದಾನದಲ್ಲಿ ಮುಸ್ಲಿಂ ಮತ್ತು ದಲಿತ ಸಂಘಟನೆ ಸೇರಿ ವಿವಿಧ ಪ್ರಗತಿಪರ ಸಂಘಟನೆ ನಡೆಸಿದ ಪೌರತ್ವ ಕಾಯ್ದೆ ವಿರೋಧಿಸಿ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದೊಂದಿಗೆ ಮಾತನಾಡುತ್ತ, ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡರು. ಬಿಜೆಪಿಗರು ಕೋಮುವಾದ ಸೃಷ್ಠಿಸಿ ಅಧಿಕಾರಕ್ಕೆ ಬಂದಿದ್ದಾರೆ. ಇವರ ಆಟ ಬಹಳ ದಿವಸ ನಡೆಯುವುದಿಲ್ಲ ಎಂದರು.
ಸಿಎಎ ಮತ್ತು ಎನ್ಆರ್ಸಿ ಜಾರಿಗೊಳಿಸಿ ಮುಸ್ಲಿಂರನ್ನು ಟಾಗರ್ೆಟ್ ಮಾಡಿರುವ ಬಿಜೆಪಿಯಿಂದ ನಮ್ಮ ದೇಶದ ಸಾರ್ವಭೌಮತ್ವಕ್ಕೆ ಮತ್ತು ಸಂವಿಧಾನಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಇದನ್ನು ತಡೆಗಟ್ಟಲೇ ಬೇಕು ಎಂದರು. ಮಂಗಳೂರು ಪ್ರಕರಣಕ್ಕೆ ರಾಜ್ಯದ ಬಿಜೆಪಿ ಸರಕಾರವೇ ನೇರ ಹೊಣೆಯಾಗಿದೆ ಎಂದು ರಾಜ್ಯ ಸಭಾ ಸದಸ್ಯ ಬಳ್ಳಾರಿಯ ಡಾ. ಸಯ್ಯದ್ ನಾಸೀರ್ ಹುಸೇನರವರು ಆರೋಪಿಸಿದರು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಅಲ್ಪಸಂಖ್ಯಾತ ಮುಖಂಡ ಅಮ್ಜದ್ ಪಟೇಲ್, ಹೊಸಪೇಟೆಯ ಕಾಂಗ್ರೆಸ್ ಮುಖಂಡ ಫಹೀಮ್ ಬಾಷಾ ಭಾಗವಾನ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.