ಶಿಷ್ಟಾಚಾರ ಉಲ್ಲಂಘನೆ ಮಾಡಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಭಾಜಪ ಆಗ್ರಹ

BJP demands disciplinary action against officers who have violated etiquette

ಶಿಗ್ಗಾವಿ 02: ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಉದ್ಘಾಟನೆಯನ್ನು ಮಾಡಿ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಭಾಜಫ ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ ನೇತೃತ್ವದಲ್ಲಿ ಭಾಜಪ ಮುಖಂಡರು ತಾಲೂಕ ಪಂಚಾಯತ ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ ಮಾಡಿದರು. 

ಕ್ಷೇತ್ರಕ್ಕೆ ಸಂಬಂಧಿಸಿದ ಲೋಕಸಭಾ ಸದಸ್ಯರನ್ನು ಮತ್ತು ವಿಧಾನ ಪರಿಷತ್ ಸದಸ್ಯರನ್ನು ಪರಿಗಣಿಸದೇ ಕೇವಲ ಶಿಗ್ಗಾವಿ ಶಾಸಕ ಯಾಶೀರಖಾನ ಪಠಾಣ ಒಬ್ಬರನ್ನೇ ಆಹ್ವಾನಿಸುವ ಮೂಲಕ ತಾಲೂಕ ಅಧಿಕಾರಿಗಳು ಕಾರ್ಯಕ್ರಮ ನೇರವೇರಿಸುತ್ತಿದ್ದಾರೆ ಅಧಿಕಾರಿಗಳಿಗೆ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯ.  

ನರಹರಿ ಕಟ್ಟಿ          

ರಾಜ್ಯ ಯುವಮೋರ್ಚಾ ಕಾರ್ಯದರ್ಶಿ.

ಕ್ಷೇತ್ರದ ಸಂಸದರು ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ವಿಧಾನ ಪರಿಷತ್ ಸದಸ್ಯರನ್ನು ಕಡೆಗಣಿಸುವ ಮೂಲಕ ಅಧಿಕಾರಿಗಳು ಶಿಷ್ಟಾಚಾರದ ಉಲ್ಲಂಘನೆ ಮಾಡುವ ಮೂಲಕ ಕರ್ತವ್ಯ ಲೋಪ ಎಸುಗಿದ್ದು ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲು ಆಗ್ರಹ.

ವಿಶ್ವನಾಥ ಹರವಿ

ಭಾಜಪ ಅಧ್ಯಕ್ಷ್     

ಪಟ್ಟಣದ ತಾಲೂಕ ಪಂಚಾಯತಬೀಗ ಹಾಕುವುದು ಇದು ಎರಡನೇಯ ಭಾರಿ ಪ್ರಥಮ ಭಾರಿ ಬನ್ನೂರ ಹಾಗೂ ಹಳೆ ಬಂಕಾಪೂರ ಕಾಮಗಾರಿಗಳ ಅಡಿಗಲ್ಲು ಹಾಗೂ ಉದ್ಘಾಟನೆಯನ್ನು ಮಾಡಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳಲು ದಿ: 15-2-25 ರಂದು ಮನವಿ ನೀಡಿದ್ದರು ಸಹಿತ ಪುನಃ ಇಂದು ಎಸ್‌.ಸಿ.ಪಿ ಯೋಜನೆಯಡಿ ಸರಕಾರಿ ಮೆಟ್ರಿಕ್ ನಂತರ ವೃತ್ತಿಪರ ಬಾಲಕರ ಪರಿಶಿಷ್ಟ ಜಾತಿ ವಿದ್ಯಾರ್ಥಿನಿಲಯ 6.50 ಲಕ್ಷದ ಅನುಧಾನದಡಿಯಲ್ಲಿ ಕಟ್ಟಡ ನಿರ್ಮಾಣ ಭೂಮಿ ಪೂಜಾ ಕಾರ್ಯಕ್ರಮ ಶಿಷ್ಟಾಚಾರ ಪಾಲನೆ ಮಾಡದೇ ಅದೇ ತಪ್ಪು ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣಿಕರ್ತರಾಗಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ತಾಲೂಕ ಭಾಜಪ ಮಂಡಲ ಆಗ್ರಹಿಸಿದೆ. 

ಈ ಸಂದರ್ಭದಲ್ಲಿ ನಿಕಟಪೂರ್ವ ಅದ್ಯಕ್ಷ ಶಿವಾನಂದ ಮ್ಯಾಗೇರಿ, ಪುರಸಭೆ ಸದಸ್ಯ ಮಂಜುನಾಥ ಬ್ಯಾಹಟ್ಟಿ, ಕಾರ್ಯದರ್ಶಿ ರೇಣುಕನಗೌಡ ಪಾಟೀಲ, ಸಂತೋಷ ದೊಡ್ಡಮನಿ, ಪ್ರತೀಕ ಕೊಳೇಕರ, ಸಚಿನ ಮಡಿವಾಳರ, ಅನಿಲ ಸಾತಣ್ಣವರ, ಅರುಣ ಬನ್ನಿಕೊಪ್ಪ, ನಂದೀಶ ಕುಂಬಾರ, ಮಂಜುನಾಥ ಎಂ.ಸೇರಿದಂತೆ ಇತರರು ಉಪಸ್ಥಿತರಿದ್ದರು.