ಲೋಕದರ್ಶನ ವರದಿ
ಯಮಕನಮರಡಿ 13: ಮಹಾತ್ಮ ಗಾಂಧೀಜಿಯವರ ಕನಸಿನ ಸ್ವಚ್ಚ ಭಾರತ ಯೋಜನೆಯನ್ನು ಭಾರತೀಯ ಜನತಾ ಪಕ್ಷವು ರಾಷ್ಟ್ರ ವ್ಯಾಪ್ತಿ ಅನುಷ್ಠಾನಗೊಳಿಸುತ್ತಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು,
ಅವರು ದಿ. 12 ರಂದು ಯಮಕನಮರಡಿ ಮತಕ್ಷೇತ್ರ ವ್ಯಾಪ್ತಿಗೆ ಬರುವ ಹುದಲಿ, ಚಂದಗಡ, ಮುಚ್ಚಂಡಿ, ಕಲಕಾಂಬ, ಗ್ರಾಮಗಳಲ್ಲಿ ಮಹಾತ್ಮ ಗಾಂದಿಜೀಯವರು 150 ನೇ ಜನ್ಮ ದಿನಾಚರಣೆಯ ನಿಮಿತ್ಯ ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಕಾಲ್ನಡಿಗೆ ಸಂಚಾರ ಕೈಗೊಂಡು ಮಾತನಾಡಿ ಗಾಂದಿಜಿಯವರ ಕನಸಿನ ಗ್ರಾಮ ಸ್ವರಾಜ್ಯ ನೀತಿಯನ್ನು ಬಿಜೆಪಿಯು ಹೊಂದಿದ್ದು, ದೇಶಾದ್ಯಂತ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗಾಗಿ ಬಿಜೆಪಿ ಕಾರ್ಯ ನಿರ್ವಹಿಸುತ್ತಿದೆ, ಎಂದು ಚಿಕ್ಕೋಡಿಯ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಕಾಕತಿ ಗ್ರಾಮದ ರಾಣಿಚನ್ನಮ್ಮಾ ಪ್ರತಿಮೆಗೆ ಸಂಸದರು ಮಾಲಾರ್ಪನೆ ಮಾಡಿದರು,
ಯಮಕನಮರಡಿ, ಹತ್ತರಗಿ ಉಳ್ಳಾಗಡ್ಡಿ-ಖಾನಾಪೂರ,ಹೆಬ್ಬಾಳ ವಲಯಗಳಲ್ಲಿಯೂ ಸಂಸದರು ಕಾಲ್ನಡಿಗೆಯಿಂದ ಸಂಚಾರಿ ಸ್ವಚ್ಚತೆಯ ಅರಿವು ಮೂಡಿಸಿದರು, ಮಾರುತಿ ಅಷ್ಟಗಿ, ಬಿಜೆಪಿ ಯಮಕನಮರಡಿ ದಕ್ಷಿಣ ವಲಯ
ಅಧ್ಯಕ್ಷ ಶಿವಾನಂದ ಪಡಗೂರಿ, ಬಿಜೆಪಿ ಯಮಕನಮರಡಿ ಉತ್ತರ ವಲಯ ಅಧ್ಯಕ್ಷ ಶಶಿಕಾಂತ ಮಠಪತಿ, ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ ನಿರ್ದೇಶಕ ಅಶೋಕ ಚಂದಪ್ಪಗೋಳ, ಬಿಜೆಪಿ ಮಾಜಿ ಅದ್ಯಕ್ಷ ಮಹಾವೀರ ನಾಶಿಪುಡಿ, ರವಿ ಹಂಜಿ, ಸಿದ್ದಲಿಂಗ ಸಿದ್ದಗೌಡರ, ಅಡಿವೆಪ್ಪ ಜಿಂಡ್ರಾಳಿ, ಚಂದ್ರಕಾಂತ ಕಾಪಸಿ, ಬಿಜೆಪಿ ವಿಭಾಗೀಯ ಕಾರ್ಯದರ್ಶಿ ರವಿ ಹಿರೇಮಠ, ಶ್ರೀಶೈಲ ಯಮಕನಮರಡಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಂಡಪ್ಪ ಬೆನವಾಡಿ, ಶೇಖರಗೌಡ ಪಾಟೀಲ, ನಿಂಗಪ್ಪ ದಾಸ, ಅಯೂಬಖಾನ ಒಂಟಿಗಾರ, ಕೆ.ಡಿ.ಪಾಟೀಲ, ಅರ್ಜುನ ಪಾಟೀಲ, ಭೀಮಗೌಡ ಹೊಸಮನಿ, ಮುಂತಾದವರು ಉಪಸ್ಥಿತರಿದ್ದರು.