ಲೋಕಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ‘ದಂಡಾ’ ಜಟಾಪಟಿ : ಕಲಾಪ ಭಂಗ

ನವದೆಹಲಿ, ಫೆ 07 ,ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ  'ದಂಡಾ ಹೇಳಿಕೆ' ಕುರಿತು ಶುಕ್ರವಾರ ಲೋಕಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಘರ್ಷಣೆ ಭುಗಿಲೆದ್ದಿದ್ದು, ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಮಧ್ಯಾಹ್ನದವರೆಗೂ ಮುಂದೂಡುವ ಪ್ರಸಂಗ ಎದುರಾಯಿತು.

 ಪ್ರಶ್ನೋತ್ತರ ಕಲಾಪದಲ್ಲಿ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕುರಿತು ರಾಹುಲ್ ಗಾಂಧಿಯವರು ತಮ್ಮ ಪ್ರಶ್ನೆಯನ್ನು ಕೇಳಲು ಮುಂದಾಗುತ್ತಿದ್ದಂತೆ, ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಈ ವಿಲಕ್ಷಣ ಹೇಳಿಕೆಯನ್ನು ಸದನವು ಖಂಡಿಸಬೇಕು ಎಂದು ಹೇಳಿದರು.

  ಪ್ರಧಾನಿ ಮೋದಿ ನಿನ್ನೆ ರಾಷ್ಟ್ರಪತಿಯವರ ಭಾಷಣಕ್ಕೆ ವಂದನೆ ಸಲ್ಲಿಸುತ್ತಾ, ರಾಹುಲ್ ಗಾಂಧಿ ಅವರು. “ಆರು ತಿಂಗಳಲ್ಲಿ ಯುವಕರು ಮೋದಿಯನ್ನು ದಂಡಗಳಿಂದ ಹೊಡೆಯುತ್ತಾರೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದನ್ನು ನಾನು ಕೇಳಿದ್ದೇನೆ. ಸೂರ್ಯ ನಮಸ್ಕಾರವು ಶಕ್ತಿಯನ್ನು ಹೆಚ್ಚಿಸಿದೆ.  'ಆದ್ದರಿಂದ ನನ್ನ ಬೆನ್ನು ತುಂಬಾ ಬಲಶಾಲಿಯಾಗುವುದರಿಂದ ಅದು ಅನೇಕ ಕೋಲುಗಳ ಹೊಡೆತವನ್ನು ಸಹಿಸಿಕೊಳ್ಳಬಲ್ಲದು. " ಎಂದಿದ್ದರು.

 ರಾಹುಲ್ ಗಾಂಧಿ ಹೇಳಿಕೆಯನ್ನು  ಖಂಡಿಸುವಂತೆ ಡಾ ಹರ್ಷವರ್ಧನ್ ಮಾಡಿದ ಮನವಿಗೆ ಕಾಂಗ್ರೆಸ್ ಸದಸ್ಯರು ಕಿಡಿಕಾರುತ್ತಿದ್ದಂತೆ  ವಾಗ್ದಾದ ಆರಂಭಗೊಂಡಿತು. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಮತ್ತು ಸಂಸದೀಯ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಮಧ್ಯಪ್ರವೇಶಿಸಿ ಸದಸ್ಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.

 ದೇಶದ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸದಿದ್ದರೆ ಮುಂದಿನ ಆರು ತಿಂಗಳಲ್ಲಿ ಯುವಕರು  ಮೋದಿ ಅವರನ್ನು ದಂಡಗಳಿಂದ ಹೊಡೆಯುತ್ತಾರೆ ಎಂದು ರಾಹುಲ್ ಗಾಂಧಿ ಬುಧವಾರ ರ್ಯಾಲಿಯಲ್ಲಿ ತಿಳಿಸಿದ್ದರು. "ಪ್ರಧಾನಿ ಇದೀಗ ಭಾಷಣಗಳನ್ನು ಮಾಡುತ್ತಿದ್ದಾರೆ, ಆದರೆ ಆರು ತಿಂಗಳ ನಂತರ, ಅವರು ತಮ್ಮ ಮನೆಯಿಂದ ಹೊರಹೋಗಲು ಸಹ ಸಾಧ್ಯವಾಗುವುದಿಲ್ಲ" ಎಂದಿದ್ದರು.