ನವದೆಹಲಿ, ಅ 24: ಮಹಾರಾಷ್ಟ್ರದ 288 ವಿಧಾನಸಭಾ ಸ್ಥಾನಗಳ ಮತ ಎಣಿಕೆ ಪ್ರಗತಿಯಲ್ಲಿದ್ದು, ಲಭ್ಯವಿರುವ ಅಂಕಿಅಂಶಗಳ ಪ್ರಕಾರ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ, ಬಿಜೆಪಿ, ಶಿವಸೇನೆ ಮೈತ್ರಿಕೂಟ 164 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಮತ್ತು ಎನ್ಸಿಪಿ 95 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 29 ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಮುಂದಿದ್ದಾರೆ. ಮೊದಲ ಸುತ್ತಿನ ಎಣಿಕೆ ನಡೆದಾಗ, ಸತಾರಾ ಲೋಕಸಭಾ ಸ್ಥಾನದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಉದಯನ್ರಾಜೆ ಭೋಸಲೆ ಎನ್ಸಿಪಿ ಅಭ್ಯರ್ಥಿ ಶ್ರೀನಿವಾಸ್ ಪಾಟೀಲ್ ಅವರಿಗಿಂತ ಹಿಂದೆ 10 ಸಾವಿರ ಮತಗಳಿಂದ ಹಿಂದಿದ್ದರು. ಚುನಾವಣೆಗೆ ಚೊಚ್ಚಲ ಪ್ರವೇಶ ಮಾಡಿದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪುತ್ರ 29 ವರ್ಷ ವಯಸ್ಸಿನ ಆದಿತ್ಯ ಠಾಕ್ರೆ ವರ್ಲಿ ಅಸೆಂಬ್ಲಿ ಸ್ಥಾನದಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಅವರು ಎನ್ಸಿಪಿಯ ಸುರೇಶ್ ಮಾನೆ ವಿರುದ್ಧ ಸ್ಪರ್ಧಿಸಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ತಮ್ಮ ಬಿಜೆಪಿ ಪ್ರತಿಸ್ಪರ್ಧಿ ಗೋಪಿಚಂದ್ ಪಡಲ್ಕರ್ ಅವರ ವಿರುದ್ಧ ಬಾರಾಮತಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕ ಧನಂಜಯ್ ಮುಂಡೆ ಪಾಲರ್ಿಯಲ್ಲಿ ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಸಚಿವ ಪಂಕಜಾ ಮುಂಡೆ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. ನಿರ್ಗಮನ ಸಮೀಕ್ಷೆಗಳು ರಾಜ್ಯದ ಆಡಳಿತಾರೂಢ ಬಿಜೆಪಿ-ಶಿವಸೇನಾ ಮೈತ್ರಿ ಸರ್ಕಾರಕ್ಕೆ ಸುಲಲಿತ ಗೆಲುವಿನ ಮುನ್ಸೂಚನೆ ನೀಡಿವೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನಾಗ್ಪುರ ನೈಋತ್ಯ ವಿಧಾನಸಭಾ ಸ್ಥಾನದಿಂದ ಕಾಂಗ್ರೆಸ್ ವಿರುದ್ಧ ಆಶಿಶ್ ದೇಶ್ಮುಖ್ ವಿರುದ್ಧ ಮುನ್ನಡೆಯಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಚವಾಣ್ ಮತ್ತು ಪೃಥ್ವಿರಾಜ್ ಚವಾಣ್ ಕ್ರಮವಾಗಿ ನಾಂದೇಡ್ ಜಿಲ್ಲೆಯ ಭೋಕರ್ ಮತ್ತು ಸತಾರಾ ಜಿಲ್ಲೆಯ ಕರಾಡ್ ನಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಸೋಮವಾರ ನಡೆದ ಮತದಾನದಲ್ಲಿ ಶೇಕಡಾ 61.13 ರಷ್ಟು ಮತದಾನವಾಗಿದೆ, ಇದು 2014 ರಲ್ಲಿ ದಾಖಲಾದ ಶೇಕಡಾ 63.20 ರಷ್ಟು ಕಡಿಮೆಯಾಗಿದೆ.