ಚೆನ್ನೈ, ನ ೩೦- ಕನ್ನಡ ಸೇರಿದಂತೆ ದಕ್ಷಿಣ ಭಾರತ ಹಲವು ಚಿತ್ರಗಳಲ್ಲಿ ಪ್ರಮುಖ ನಾಯಕರ ಜತೆ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ನಟಿ ನಮಿತಾ ಶನಿವಾರ ಸಂಜೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯಾದ್ಯಕ್ಷ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ನಮಿತಾ ಬಿಜೆಪಿ ಸೇರ್ಪಡೆಗೊಂಡರು. ಕೇಸರಿ ಮೇಲು ವಸ್ತ್ರ ಹೊದಿಸಿ ನಮಿತಾ ಅವರನ್ನು ಜಗತ್ ಪ್ರಕಾಶ್ ನಡ್ಡಾ ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜತೆ ನಮಿತಾ ನಟಿಸಿದ್ದ “ನೀಲಕಂಠ” ಚಿತ್ರದಲ್ಲಿ ಆಕೆಯ ನಟನೆ, ಸೊಬಗನ್ನು ಕನ್ನಡ ಪ್ರೇಕ್ಷಕ ಎಂದೂ ಮರೆಯಲು ಸಾಧ್ಯವಿಲ್ಲ, ದರ್ಶನ್ ಜೊತೆಗೂ ಆಕೆ ನಟಿಸಿದ್ದಾರೆ. ತೆಲುಗು, ತಮಿಳು ಚಿತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಮಿತಾ ತೆಲುಗಿನಲ್ಲಿ ಬಾಲಕೃಷ್ಣ ಜೊತೆ “ಸಿಂಹ”, ವಿಕ್ಟರಿ ವೆಂಕಟೇಶ್ ಜೊತೆ “ ಜೆಮಿನಿ” ಚಿತ್ರದಲ್ಲಿ ನಟಿಸಿದ್ದರು.
ನಂತರ ೨೦೧೬ ರಲ್ಲಿ ಅಂದಿನ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸಮ್ಮುಖದಲ್ಲಿ ಏಐಎಡಿಎಂಕೆ ಪಕ್ಷ ಸೇರಿ, ರಾಜಕೀಯ ಪ್ರವೇಶಿಸಿದ್ದ ನಮಿತಾ. ಈಗ ಆ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರಿದ್ದಾರೆ.