ಬೆಂಗಳೂರು, ಏ.6, ಬಿಜೆಪಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ, ಪಕ್ಷದ ಕಟ್ಟುವಲ್ಲಿ ಶ್ರಮಿಸಿದ ಪಂಡಿತ ದೀನ ದಯಾಳ್ ಉಪಾಧ್ಯಾಯ ಮತ್ತು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಗಳಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಿಡಯೂರಪ್ಪ ಗೌರವ ಸಮರ್ಪಿಸಿದರು.ಪ್ರಜಾಸತ್ತಾತ್ಮಕ ಭಾರತದ ನಿಜವಾದ ವಕ್ತಾರನಾದ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನವಾದ ಇಂದು ಪಕ್ಷದ ಸಮಸ್ತ ಕಾರ್ಯಕರ್ತರಿಗೆ ಶುಭಾಶಯಗಳು. ಕೊರೊನ ಮಹಾಮಾರಿಯ ವಿರುದ್ಧ ಜಾಗೃತಿ ಮೂಡಿಸುವ ಮೂಲಕ ಸಂಸ್ಥಾಪನಾ ದಿನವನ್ನು ಅರ್ಥಪೂರ್ಣವಾಗಿಸೋಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ, ದೇಶ ಮೊದಲು, ನಂತರ ಪಕ್ಷ, ನಂತರ ತಾನು ಎನ್ನುವುದನ್ನು ಕಲಿಸಿದ ಬಿಜೆಪಿಯ ಪಕ್ಷದ ಸ್ಥಾಪನಾ ದಿನದಂದು, ಎಲ್ಲ ಕಾರ್ಯಕರ್ತರಿಗೆ, ಹಿರಿಯ ನಾಯಕರಿಗೆ ಹೆಮ್ಮೆಯ ಶುಭಕಾಮನೆಗಳು. ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವನ್ನಾಗಿ ಕಟ್ಟಿ ಬೆಳೆಸಿರುವ ಎಲ್ಲ ನಾಯಕರನ್ನೂ ಸ್ಮರಿಸೋಣ ಎಂದು ತಿಳಿಸಿದ್ದಾರೆ.ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿ, ನನ್ನ ಪಕ್ಷದ ಸಂಸ್ಥಾಪನಾ ದಿನಾಚರಣೆಯ ಶುಭಾಶಯಗಳು. ಕೋವಿಡ್ 19 ಸೋಂಕು ಹರಡುವ ಈ ಸಂಕಷ್ಟದ ಕಾಲದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕಾರ್ಯಕರ್ತರು ಸೇವಾ ಕಾರ್ಯಗಳಲ್ಲಿ ನಿರತರಾಗಿದ್ದಾರೆ ಅವರಿಗೆ ನನ್ನ ಕೋಟಿ ಪ್ರಣಾಮಗಳು ಎಂದು ತಿಳಿಸಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಟ್ವಿಟ್ ಮಾಡಿ, ಬಿಜೆಪಿ ಸಂಸ್ಥಾಪನಾ ದಿನದ ಶುಭಾಶಯಗಳು. ರಾಷ್ಟ್ರೀಯತೆಯ ದಾರಿಯಲ್ಲಿ ಮುನ್ನಡೆಯಲು ಯುವಜನತೆಗೆ ಮಾರ್ಗದರ್ಶನ ನೀಡಿಕೊಂಡು ಬಂದಿರುವ ನಮ್ಮೆಲ್ಲಾ ನಾಯಕರನ್ನು ಈ ದಿನ ಸ್ಮರಿಸುತ್ತೇನೆ ಎಂದು ತಿಳಿಸಿದ್ದಾರೆ.