ಕಡಬಿ: ಪ್ರಾಥಮಿಕ ಶಾಲೆಗೆ ಬಿಇಒ ಭೇಟಿ

ಲೋಕದರ್ಶನ ವರದಿ

ಕಡಬಿ 10: ಶೀಥಿಲಗೊಂಡ ಕಟ್ಟಡದಲ್ಲಿ ತರಗತಿಗಳನ್ನು ನಡೆಸಬಾರದು ಹಾಗೂ ವಿದ್ಯಾಥರ್ಿಗಳನ್ನು ಅಲ್ಲಿ ಆಟವಾಡಲು ಬಿಡಬಾರದು, ಮುಂದಿನ ದಿನಗಳಲ್ಲಿ ಯಾವುದೆ ಅನಾಹುತ ಸಂಭವಿಸದಂತೆ ನೋಡಿಕೊಳ್ಳಬೇಕು. ಆ ಕೊಠಡಿಗಳಲ್ಲಿ ಮಕ್ಕಳನ್ನು ಕುಳ್ಳಿಸಬಾರದು, ಶೀಥಿಲಗೊಂಡ ಕಟ್ಟಡದ ಸಮೀಪ ಮಕ್ಕಳು ಒಡಾಡದಂತ್ತೆ ಮುಂಜಾಗೃತೆ ಕ್ರಮ ಕೈಗೋಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರ ಪ್ರಧಾನಗುರುಗಳಿಗೆ ತಿಳಿಸಿದರು.

ಅವರು ಮಂಗಳವಾರ ದಿ.9 ರಂದು  ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೇಟಿಕೊಟ್ಟು ಬಿಸಿ ಊಟ ಪರಿಶೀಲಿಸಿ ಶೀಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಪರಿಶೀಲಿಸಿದರು.

ಸಂದರ್ಭದಲ್ಲಿ ಅಕ್ಷರ ದಾಸೋಹ ಅಧಿಕಾರಿ ಪಿ ವಿ ಪೂಜೇರಿ, ಗ್ರಾಪಂ ಅಬಿವೃದ್ಧಿ ಅಧಿಕಾರಿ ಸುವರ್ಣಗೌರಿ ಕೊಣ್ಣುರ, ಎಸ್ಡಿಎಮ್ಸಿ ಅಧ್ಯಕ್ಷ ಸಿದ್ದಪ್ಪ ಮಾಳಕ್ಕನವರ. ಉಪಾಧ್ಯಕ್ಷ ಗುರುನಾಥ ಹೂಗಾರ, ಸರ್ವಸದಸ್ಯರು, ಸಿಆರ್ಪಿ ಎ ಕೆ ಮುಳ್ಳೂರ, ಮತ್ತು ಶಾಲೆಯ ಶಿಕ್ಷಕರು ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದರು.