ಬಂಗಾಳಿ ನಟ, ರಾಜಕಾರಣಿ ತಪಸ್ ಪಾಲ್ ಮುಂಬೈನಲ್ಲಿ ನಿಧನ

ಕೊಲ್ಕತ್ತಾ, ಫೆ 18,   ಬಂಗಾಳಿ  ನಟ, ರಾಜಕಾರಣಿ  ತಪಸ್ ಪಾಲ್  ಮುಂಬೈನಲ್ಲಿಂದು  ಮುಂಜಾನೆ  ಹೃದಯಾಘಾತದಿಂದ  ನಿಧನರಾಗಿದ್ದಾರೆ.ಅವರಿಗೆ  61 ವರ್ಷ ವಯಸ್ಸಾಗಿತ್ತು, ದಾದರ್ ಕೀರ್ತಿ (1980)  ಚಿತ್ರದ ಮೂಲಕ   ಬಂಗಾಳಿ  ಸಿನಿಮಾ ಬದುಕು ಆರಂಭಿಸಿದ್ದ    ಬಂಗಾಳಿ  ಚಿತ್ರರಂಗದಲ್ಲಿ  ತಪಸ್ ಪಾಲ್ ಬಹು ಜನಪ್ರಿಯ ನಾಯಕ ನಟರಾಗಿದ್ದರು ಕೊಲ್ಕತ್ತಾಗೆ  ತೆರಳುವ ವೇಳೆತಪಸ್ ಪಾಲ್  ವಿಮಾನ ನಿಲ್ದಾಣದಲ್ಲಿ ಅವರು  ಹೃದಯಾ ಘಾತಕ್ಕೀಡಾಗಿದ್ದರು, ಕೂಡಲೇ  ಅವರನ್ನು    ಮುಂಬೈನ  ಜುಹು ಆಸ್ಪತ್ರೆಗೆ   ಸಾಗಿಸಲಾಯಿತು.  ಚಿಕಿತ್ಸೆ ವಿಫಲಗೊಂಡ ನಂತರ  ಇಂದು ಮುಂಜಾನೆ  ಅವರು  ಆಸ್ಪತ್ರೆಯಲ್ಲಿ   ಕೊನೆಯುಸಿರು  ಎಳೆದಿದ್ದಾರೆ   ಎಂದು ಕುಟುಂಬ ಮೂಲಗಳು ಹೇಳಿವೆ.

 ಬಂಗಾಳಿ  ಸಿನಿಮಾದ ಸೂಪರ್ ಸ್ಟಾರ್ ತಪಸಪಾಲ್ ಅವರ ನಿಧನಕ್ಕೆ     ಪಶ್ಚಿಮ ಬಂಗಾಳ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿ ತೀವ್ರ  ಸಂತಾಪ ಸೂಚಿಸಿದ್ದಾರೆ.   ತಪಸ್ ಪಾಲ್  ನಿಧನದ ಸುದ್ದಿ ಕೇಳಿ   ತಮಗೆ ತೀವ್ರ ಆಘಾತ,  ದುಃಖವಾಗಿದೆ. ತೃಣ ಮೂಲಕ ಕಾಂಗ್ರೆಸ್  ಕುಟುಂಬದ  ಸದಸ್ಯರಾಗಿದ್ದ  ತಪಸ್ ಪಾಲ್ ರಾಜಕಾರಣ ಪ್ರವೇಶಿಸಿ  ಎರಡು ಬಾರಿ ಶಾಸಕರೂ ಆಗಿದ್ದರು. ಪ್ರೀತಿ ಪಾತ್ರ ವ್ಯಕ್ತಿಯನ್ನು  ಕಳೆದುಕೊಂಡಿದ್ದೇವೆ.    ಅವರ ಪತ್ನಿ ನಂದಿನಿ, ಪುತ್ರಿ  ಸೋಹಿನಿ ಹಾಗೂ ಅವರ  ಅಪಾರ ಅಭಿಮಾನಿಗಳಿಗೆ  ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.