ಬಿಸಿಸಿಐ ಕೇಂದ್ರಿಯ ಒಪ್ಪಂದ: ಮಹಿಳಾ ಆಟಗಾರ್ತಿಯರ ಶ್ರೇಣಿ ಬಿಡುಗಡೆ

womence cricket

ನವದೆಹಲಿ, ಜ.1- ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ವಾರ್ಷಿಕ ಒಪ್ಪಂದದ ಪ್ರಕಾರ ಪುರುಷ ಆಟಗಾರರು ಕೋಟಿ ಕೋಟಿ ರೂಪಾಯಿಗೆ ಜೇಬಿಗೆ ಹಾಕಿಕೊಂಡರೆ, ಮಹಿಳಾ ಆಟಗಾರ್ತಿಯರು ಲಕ್ಷ ಲಕ್ಷ ರೂಪಾಯಿ ಪಡೆದು ಬೀಗಿದ್ದಾರೆ. 

ಅಕ್ಟೋಬರ್ 2019 ರಿಂದ 2020 ರ ಸೆಪ್ಟೆಂಬರ್ ವರೆಗೆ 22 ಮಹಿಳಾ ಆಟಗಾರ್ತಿಯರನ್ನು ಬಿಸಿಸಿಐ ಕೇಂದ್ರ ಗುತ್ತಿಗೆ ನೀಡಿದೆ. ಗ್ರೇಡ್‌ನಲ್ಲಿರುವ ಮಹಿಳಾ ಆಟಗಾರ್ತಿಯಾರಿಗೆ ಒಟ್ಟು ಐದು ಕೋಟಿ ರೂಪಾಯಿಗಳನ್ನು ವಿತರಿಸಲಾಗುವುದು. ಆದರೆ, ಟೀಮ್ ಇಂಡಿಯಾದ ನಾಯಕ ವಿರಾಟ್ ಒಬ್ಬರೇ ಏಳು ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ. ಗುರುವಾರ ಹೊರಡಿಸಲಾದ ಈ ಒಪ್ಪಂದದ ಪ್ರಕಾರ, ಮೂರು ಶ್ರೇಣಿಗಳಲ್ಲಿ ಮಹಿಳಾ ಆಟಗಾರ್ತಿಯರನ್ನು ವಿಂಗಡಿಸಲಾಗಿದೆ. ಇದರಲ್ಲಿ 50 ಲಕ್ಷ, 30 ಲಕ್ಷ ಮತ್ತು 10 ಲಕ್ಷ ರೂಪಾಯಿಗಳನ್ನು ವಾರ್ಷಿಕವಾಗಿ ನೀಡಲಾಗುತ್ತದೆ.

ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂದಾನ ಮತ್ತು ಪೂನಂ ಯಾದವ್ ಅವರನ್ನು ಎ ಲಕ್ಷ ರೂ.ಪಡೆದರೆ, ಮಿಥಾಲಿ ರಾಜ್, ಜುಲಾನ್ ಗೋಸ್ವಾಮಿ, ಏಕ್ತಾ ಬಿಶ್ತ್, ರಾಧಾ ಯಾದವ್, ಶಿಖಾ ಪಾಂಡೆ, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್ ಮತ್ತು ತಾನಿಯಾ ಭಾಟಿಯಾ 30 ಲಕ್ಷ ರೂ ಪಡೆಯಲಿದ್ದಾರೆ. ವೇದ ಕೃಷ್ಣಮೂರ್ತಿ, ಪೂನಂ ರೌತ್, ಅನುಜಾ ಪಾಟೀಲ್, ಮಾನ್ಸಿ ಜೋಶಿ, ಡಿ ಹೆಮಲತಾ, ಅರುಂಧತಿ ರೆಡ್ಡಿ, ರಾಜೇಶ್ವರಿ ಗಾಯಕವಾಡ್, ಪೂಜಾ ವಸ್ತ್ರಕರ್, ಹರ್ಲೀನ್ ಡಿಯೋಲ್, ಪ್ರಿಯಾ ಪೂನಿಯಾ ಮತ್ತು ಶೆಫಾಲಿ ವರ್ಮಾ 10 ಲಕ್ಷ ಪಡೆಯಲಿದ್ದಾರೆ.