ಮಾಂಜರಿ 23: ಗ್ರಾಮೀಣ ಭಾಗದ ಬಡ ಮಕ್ಕಳಿಗೆ ವೈದ್ಯಕೀಯ ಶಿಕ್ಷಣದ ಜೊತೆಗೆ ಇನ್ನಿತರ ವೃತ್ತಿಪರ ಶಿಕ್ಷಣ ಮತ್ತು ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಗೊಮ್ಮಟೇಶ್ ಶಿಕ್ಷಣ ಸಂಸ್ಥೆಯ ಡಾ ಏನ್ ಎ ಮಗುದುನ್ ಆಯುರ್ವೇದಿಕ್ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಮೂರನೇಯ ಬಿ ಎ ಎಂ ಎಸ್ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ಹಾಗೂ ನಸಿಂರ್ಗ್ ಮಹಾವಿದ್ಯಾಲಯದ ವಿದ್ಯಾರ್ಥಿಗಳ ದೀಪದಾನ ಸಮಾರಂಭ ಮತ್ತು ಗುಮ್ಮಟ್ ಉತ್ಸವ ಸಮಾರಂಭವನ್ನು ಇದೇ ತಿಂಗಳ 25 ಜನವರಿಯಿಂದ 27 ಜನವರಿವರೆಗೆ ಅಂಕಲಿಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಡಾ ಏನ್ ಎ ಮಗದುಮ್ ತಿಳಿಸಿದರು.
ಅವರು ಗುರುವಾರದಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಗೊಮ್ಮಟೇಶ್ ಶಿಕ್ಷಣ ಸಂಸ್ಥೆಯ ಸಭಾ ಗ್ರಹದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಖಜಾಂಚಿಯಾದ ಆಚಾರ್ಯರಾದ ಎನ್ ಎಸ್ ನಿಡುಗುಂದೆ ಬಿ ಆರ್ ಸಂಗಪ್ಪಗೊಳ್ ಡಾ ಪ್ರಸನ್ನ ಸವನೂರ್ ಹಾಜರಿದ್ದರು.
ಶನಿವಾರ 25ರಂದು ಜರಗಿಲಿರುವ ಡಾ ಎನ್ ಎ ಮಗುದುಮ್ ಆಯುರ್ವೇದಿಕ್ ಮಹಾವಿದ್ಯಾಲಯ ಮತ್ತು ಸಂಶೋಧನಾ ಘಟಕದ ಮೂರನೇ ವರ್ಷದ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭಕ್ಕೆ ಹೊಸ ದೆಹಲಿಯ ಡಾ ರಘುರಾಮ ಭಟ್, ಚಿಕ್ಕೋಡಿಯ ಸಂಸದರಾದ ಪ್ರಿಯಾಂಕ ಜಾರಕಿಹೊಳಿ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಡಾ ಎನ್ ಎ ಮಗುದುನ್, ಹರ್ಷವರ್ಧನ್ ಮಗದುಮ್ ಪಾಲ್ಗೊಳ್ಳುತ್ತಾರೆ.
ಜನವರಿ 26ರಂದು ಶಿಕ್ಷಣ ಸಂಸ್ಥೆಯ ನಸಿಂರ್ಗ್ ಮಹಾವಿದ್ಯಾಲಯದ ಪ್ರಮಾಣವಚನ ಮತ್ತು ಲ್ಯಾಂಪ್ ಲೈಟಿಂಗ್ ಸಮಾರಂಭ ಜರಗಲಿದ್ದು ಈ ಸಮಾರಂಭಕ್ಕೆ ಜಿಲ್ಲಾ ಶಲ್ಯ ಚಿಕಿತ್ಸಕರಾದ ಡಾಕ್ಟರ್ ವಿ ವಿ ಶಿಂಧೆ, ರಾಜೀವ್ ಗಾಂಧಿ ವೈದೀಕೀಯ್ ಸಂಸ್ಥೆ ಬೆಂಗಳೂರಿನ ಮುಖ್ಯಸ್ಥರಾದ ಡಾ ಸಂತೋಷ್ ಇಂಡಿ, ಚಿಕ್ಕೋಡಿ ತಾಲೂಕ ಆಸ್ಪತ್ರೆಯ ಮುಖ್ಯಸ್ಥರಾದ ಡಾ ಮಹೇಶ್ ನಾಗಾರ್ಬೆಟ್, ಡಾ ಎನ್ ಎ ಮಗುದುನ್, ಲಲಿತ ಮಗದುಮ್ ಹರ್ಷವರ್ಧನ್ ಮಗದೂಮ ಮತ್ತು ಸುರೇಶ್ ಚೌಗುಲಾ ಇವರು ಪಾಲ್ಗೊಳಲಿದ್ದಾರೆ
ಮಂಗಳವಾರ 25ರಂದು ಶಿಕ್ಷಣ ಸಂಸ್ಥೆಯ ಪಬ್ಲಿಕ್ ಸ್ಕೂಲ್ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ವಾರ್ಷಿಕ್ ಸಮ್ಮೇಳನ ಜರಗಲಿದ್ದು ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಕನ್ನಡ ಸಾಹಿತಿ ವ್ಹಿ ಎಸ್ ಮಾಳಿ, ಡಾ ಎನ್ ಎ ಮಗದುಮ್, ಸುರೇಶ್ ಚೌಗುಲಾ, ಲಲಿತಾ ಮಗದುಮ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.