ಗೋಕಾಕ, 19: ತಾಲೂಕಿನ ಮೂಲತಃ ಕೌಜಲಗಿ ಪಟ್ಟಣದ ಮಾರುತಿ ಮಹಾದೇವಪ್ಪ ಭೋವಿ ಅವರ ಸುಪುತ್ರಿ ಕು.ನಿಖಿತಾ ಮಾರುತಿ ಭೋವಿಯವರು ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ. (ಅಗ್ರಿಕಲ್ಚರ್) ಪದವಿ ಅಧ್ಯಯನ ಮಾಡುತ್ತಿದ್ದರು.
ಇತ್ತೀಚೆಗೆ ನಡೆದ ಕೃ.ವಿ.ವಿ. ಧಾರವಾಡದ ಘಟಿಕೋತ್ಸವದಲ್ಲಿ ಬಂಗಾರದ ಪದಕದೊಂದಿಗೆ ಬಿ.ಎಸ್ಸಿ.ಯಲ್ಲಿ ಮೊದಲ ಸ್ಥಾನ ಪಡೆದ ಕು. ನಿಖಿತಾ ಭೋವಿಗೆ ಪ್ರಶಸ್ತಿ ನೀಡಲಾಯಿತು. ಚಿನ್ನದ ಪದಕ ಪಡೆದ ವಿದ್ಯಾಥರ್ಿನಿಗೆ ಕೌಜಲಗಿ ಗ್ರಾಮಸ್ಥರು ಶುಭಹಾರೈಸಿದ್ದಾರೆ.