ಬಂಜಾರ ಆಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಬಿ.ಎಸ್‌.ಪುಷ್ಪ ಆಯ್ಕೆ

B.S. Pushpa selected for Banjara Academy's annual award

ಬಂಜಾರ ಆಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಬಿ.ಎಸ್‌.ಪುಷ್ಪ ಆಯ್ಕೆ  

  ಹೂವಿನ ಹಡಗಲಿ 24: ಬಂಜಾರ ಸಂಸ್ಕೃತಿಮತ್ತು ಭಾಷಾ ಅಕಾಡೆಮಿಯು 2023 ಮತ್ತು 2024ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದೆ ಬಂಜಾರ ಆಕಾಡೆಮಿಯ ವಾರ್ಷಿಕ ಪ್ರಶಸ್ತಿ’ಗೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೊಮಾರನಹಳ್ಳಿ ತಾಂಡಾದ ಶಿಕ್ಷಣ ’ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ಬಿ ಎಸ್ ಪುಷ್ಪ ಆಯ್ಕೆಯಾಗಿದ್ದಾರೆ.ಬಂಜಾರ ಸಮುದಾಯದಲ್ಲಿ ವಿಶೇಷ ಸಾಧನೆ ಮಾಡಿ. ಕಸೂತಿ ಕಲಿಕಾ ತರಬೇತಿಗೆ ವಿಶೇಷ ಕೊಡುಗೆ ನೀಡಿರುವ ಬಿ.ಎಸ್ ಪುಷ್ಪ ಅವರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬಂಜಾರ ಆಕಾಡೆಮಿಯ ವಾರ್ಷಿಕ ಪ್ರಶಸ್ತಿ ತಲಾ 25 ರೂಪಾಯಿ ನಗದು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿಗೆ ಭಾಜನರಾದ ಬಿ. ಎಸ್ ಪುಷ್ಪ ಅವರಿಗೆ ಹಡಗಲಿ ತಾಲೂಕು ರಾಜ್ಯ ಸರ್ಕಾರ ನೌಕರರ ಸಂಘ, ಭಾರತೀಯ ಸರ್ವಧರ್ಮ ರಕ್ಷಣಾ ವೇದಿಕೆ ಸೇರಿದಂತೆ ಇತರರು ಶುಭಹಾರೈಸಿ ಅಭಿನಂದಿಸಿದ್ದಾರೆ.