ದಿ.ಬಿ.ಆರ್.ಪಾಟೀಲರ ವ್ಯಕ್ತಿತ್ವ ಅನುಕರಣೀಯ: ಡಾ.ಅನೀಲ
B.R. Patil's personality is exemplary: Dr. Anil
ತಾಳಿಕೋಟಿ 04: ನಾವು ಈ ಜಗತ್ತಿಗೆ ಬಂದಾಗ ಏನನ್ನೂ ತರುವುದಿಲ್ಲ ಕೇವಲ ದೇಹವನ್ನು ಮಾತ್ರ ಪಡೆದುಕೊಂಡಿರುತ್ತೇವೆ. ಕೊನೆಗೆ ನಾವು ಈ ಜಗವನ್ನು ತೊರೆಯುವಾಗ ಎಲ್ಲವನ್ನೂ ಇಲ್ಲಿಯೇ ಬಿಟ್ಟು ಹೋಗುತ್ತೇವೆ, ಆದರೆ ನಾವು ಮಾಡಿದ ಒಳ್ಳೆಯ ಕಾರ್ಯಗಳು ಮಾತ್ರ ಇಲ್ಲಿ ಉಳಿಯುತ್ತವೆ. ಆದ್ದರಿಂದ ನಾವು ಜನರು ನಮ್ಮನ್ನು ಸದಾ ಸ್ಮರಿಸುವಂತಹ ಕಾರ್ಯಗಳನ್ನು ಮಾಡಬೇಕು ಎಂದು ಬೆಳಗಾವಿ ಲೋಟಸ್ ಆಸ್ಪತ್ರೆ ಮುಖ್ಯಸ್ಥ ಡಾ.ಅನೀಲ ಬಿ. ಪಾಟೀಲ ಹೇಳಿದರು. ತಾಲೂಕಿನ ಲಿಂಗದಳ್ಳಿ ಗ್ರಾಮದ ದಿ.ಬಿ. ಆರ್.ಪಾಟೀಲ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ದಿ.ಬಾಪುಗೌಡ ರಾಮನಗೌಡ ಪಾಟೀಲ ಅವರ 7ನೇ ಪುಣ್ಯಸ್ಮರಣೋತ್ಸವ ನಿಮಿತ್ಯ ಹಮ್ಮಿಕೊಂಡ ಉಚಿತ ಕಣ್ಣಿನ ಹಾಗೂ ಎಲಬು ಮತ್ತು ಕೀಲು ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ತಂದೆಯವರಾದ ದಿವಂಗತ ಬಿ.ಆರ್.ಪಾಟೀಲರು ಸದಾ ಸಮಾಜದ ಕುರಿತು ಚಿಂತಿಸುವ ವ್ಯಕ್ತಿಗಳಾಗಿದ್ದರು ಅವರಿಂದ ಪಡೆದ ಉತ್ತಮ ಸಂಸ್ಕಾರಗಳಿಂದಾಗಿ ಇಂದು ನಾವು ಈ ಸೇವಾ ಕಾರ್ಯಗಳನ್ನು ಮಾಡುತ್ತಿದ್ದೇವೆ, ಬರುವ ವರ್ಷ ಇನ್ನೂ ಹಲವಾರು ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದೇವೆ ಎಂದರು. ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿ ದಿ.ಬಿ.ಆರ್. ಪಾಟೀಲರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಧ್ಯೇಯವನ್ನು ಹೊಂದಿದವರಾಗಿದ್ದರು, ಅವರ ಇಡೀ ಜೀವನ ಸಮಾಜಕ್ಕೆ ಅರ್ಿತವಾಗಿತ್ತು ಇಂಥಹ ಮಹಾನುಭಾವರ ಜೀವನ ನಮಗೆ ಮಾದರಿಯಾಗಬೇಕಾಗಿದೆ ಎಂದರು.
ಪ್ರೊ.ಎಸ್.ಎಂ.ಕರೆಕಲ್ ಮಾತನಾಡಿದರು.ಬಿ.ಆರ್.ಪಾಟೀಲ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಆರಿ್ಬ.ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸನಗೌಡ ಪಾಟೀಲ ಲಿಂಗದಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ 2024- 25 ನೇ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ದಿವಂಗತ ಬಿ ಆರ್ ಪಾಟೀಲ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರಾದ ಕುಮಾರಿ ಮಧುರಾ ನಿಂಗನಗೌಡ ಬಿರಾದಾರ, ಅಮೃತ ಶಾಂತಗೌಡ ಬಿರಾದಾರ, ಮೇಘಾ ರುದ್ರಗೌಡ ಬಿರಾದಾರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಲುಬು ಮತ್ತು ಕೀಲು ರಾಜ್ಯ ಅಸೋಸಿಯೇಷನ್ ಇದರ ನೂತನ ರಾಜ್ಯಾಧ್ಯಕ್ಷರಾಗಿ ಇತ್ತೀಚಿಗೆ ಆಯ್ಕೆಯಾದ ಡಾ.ಅನೀಲ ಪಾಟೀಲ ಅವರನ್ನು ವೇದಿಕೆಯಿಂದ ಸನ್ಮಾನಿಸಲಾಯಿತು.
ನಂತರ ನಡೆದ ಆರೋಗ್ಯ ಶಿಬಿರದಲ್ಲಿ 150 ಜನರು ನೇತ್ರ ತಪಾಸಣೆಗೆ ಒಳಗಾದರು ಇದರಲ್ಲಿ 40 ಜನರನ್ನು ಶಸ್ತ್ರ ಚಿಕಿತ್ಸೆಗಾಗಿ ಆಯ್ಕೆ ಮಾಡಲಾಯಿತು. ಸುಮಾರು 180 ಜನರು ಎಲುಬು ಮತ್ತು ಕೀಲು ತಪಾಸಣೆ ಹಾಗೂ 250 ಜನರು ಬಿಪಿ ಮತ್ತು ಶುಗರ್ ತಪಾಸಣೆ ಮಾಡಿಸಿಕೊಂಡರು. ಈ ಸಂದರ್ಭದಲ್ಲಿ ಬಸನಗೌಡ ಪಾಟೀಲ, ಮಲ್ಲನಗೌಡ ನಾಡಗೌಡ, ಮಹಾಂತಗೌಡ ಪೊಲೀಸ ಪಾಟೀಲ, ಎಸ್.ಬಿ.ಪಾಟೀಲ ಚಬನೂರ, ಶಿವಕುಮಾರ ಎನ್ ಪಾಟೀಲ, ನಿಂಗನಗೌಡ ಪಾಟೀಲ, ರಾಮನಗೌಡ ಬೆಳ್ಳಿಹಾಳ, ಸಾಹೇಬಗೌಡ ಮೇಟಿ, ಎಸ್.ಎಂ.ಕರೆಕಲ್, ಎಸ್.ಬಿ. ಕೌಲಗಿ, ಸುನಂದಾ ಬಲನಂತರೆಡ್ಡಿ, ಬೆಳಗಾವಿ ಲೋಟಸ್ ಆಸ್ಪತ್ರೆ ಡಾ. ಅತ್ರೇಶ ಬಿರಾದಾರ ತುಂಬಗಿ, ಅನುಗ್ರಹ ಕಣ್ಣಿನ ಆಸ್ಪತ್ರೆ ನೇತ್ರಾಧಿಕಾರಿ ದತ್ತಾತ್ರೇಯ ಹೊಸಮಠ, ಶಾಲೆಯ ಶಿಕ್ಷಕ ವರ್ಗ ಹಾಗೂ ಸಿಬ್ಬಂದಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 