ಬಿ.ಮೇಘನಾಥ ಅಧ್ಯಕ್ಷರಾಗಿ ಆಯ್ಕೆ

B. Meghnath elected as President

ಹೊಸಪೇಟೆ 23: ನಗರದ ಅಮರಾವತಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಹಾಗು ಚಿತ್ತವಾಡ್ಗಿ ಪ್ರಾಥಮಿಕ ಕೃಷಿ ಸಹಕಾರ ಸಂಘಕ್ಕೆ ಆಯ್ಕೆಯಾದ ರೈತ ಮುಖಂಡರನ್ನು ಗಂಗಾಮತ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.  

ಅಮರಾವತಿ ಕೃಷಿ ಸಹಕಾರ ಸಂಘಕ್ಕೆ ಬಿ.ಮೇಘನಾಥ ಅಧ್ಯಕ್ಷರಾಗಿ ಹಾಗೂ ಎಂ.ಉಮೇಶ, ಬಿ.ಲೋಕೇಶ್, ಎ.ಗೀತ, ಅವರು ನಿರ್ದೇಶಕ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾದರೆ 1ನೇ ವಾರ್ಡ್‌, ಚಿತ್ತವಾಡ್ಗಿ ಕೃಷಿ ಸಹಕಾರ ಸಂಘಕ್ಕೆ ಕೂಡ್ಲಿಗಿ ಪಕ್ಕೀರ​‍್ಪ ಆಯ್ಕೆಯಾಗಿದ್ದಾರೆ. 

ಗಂಗಾ ಪರಮೇಶ್ವರಿ ಸಮುದಾಯ ಭವನದ ಆವರಣದಲ್ಲಿ ನಡೆದ ಸನ್ಮಾನ ಸಭೆಯಲ್ಲಿ ಸಮಾಜದ ಹಿರಿಯ ಮುಖಂಡ ವೈ.ಯಮುನೇಶ್ ಮಾತನಾಡಿ ಇವರು ತಮ್ಮ ಸಾಮರ್ಥ್ಯ ಮತ್ತು ರೈತರೊಂದಿಗೆ ನಿರಂತರ ಒಡನಾಟದಿಂದ ಸ್ಥಾನ ಪಡೆದಿದ್ದಾರೆ. ಸಮಾಜದ ಇತರ ಕ್ಷೇತ್ರಗಳಿಗಿಂತ ರೈತ ಕ್ಷೇತ್ರದಲ್ಲಿ ಸೇವೆಸಲ್ಲಿಕೆ ಅತ್ಯಂತ ಶ್ರೇಷ್ಠವಾದದ್ದು, ಏಕೆಂದರೆ ಕೃಷಿ ಕ್ಷೇತ್ರ ಹಾಗು ರೈತಪರ ಸಂಘ ಸಂಘಟನೆಗಳಲ್ಲಿ ಮಾಡುವ ಪ್ರಾಮಾಣಿಕ ಸೇವೆ ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಾಗದೆ ಸಮಾಜದ ಸಕಲ ಸಮುದಾಯಗಳಿಗೆ ಸಲ್ಲಿಕೆಯಾಗುತ್ತದೆ. “ರೈತರೆಲ್ಲದ್ದು ಒಂದೇ ಜಾತಿ ಧರ್ಮ” ಎಂದರು.  

ಈ ಸಂದಂರ್ಭದಲ್ಲಿ ಸಮಾಜದ ಮುಖಂಡರಾದ ಎಸ್‌.ಗಾಳೆಪ್ಪ, ಬಿ.ನಾಗರಾಜ, ಎಸ್‌.ವೆಂಕಪ್ಪ, ಕಂಪ್ಲಿ ಹನುಮಂತಪ್ಪ, ಮಡ್ಡೇರುವೆಂಕಪ್ಪ, ಮಡ್ಡಿಹನುಮಂತಪ್ಪ, ಎಸ್‌.ನಾಗರಾಜ ಎಂ.ಸಣ್ಣಕಪ್ಪ ನಂದಿಹಳ್ಳಿನಾಗರಾಜ, ಎ.ಅಂಜೀನಪ್ಪ, ಬೆಳಗೋಡುಹುಲುಗಪ್ಪ, ಎಂ.ರಮೇಶ್, ಉಮಾಪತಿ, ಎ.ಹುಲುಗಪ್ಪ, ಎಸ್‌.ಭರಮ್ಮಪ್ಪ ರೂಪನಗುಡಿಗಾಳೆಪ್ಪ, ಮುಂತಾದವರುಯಿದ್ದರು.