ಅಜುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಂಘದ ಸಭೆ
Azura Multipurpose Primary Rural Agriculture Association Meeting
ಸಂಬರಗಿ 19: ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ಒಟ್ಟು 3 ಕೋಟಿ 28 ಲಕ್ಷ 50ಸಾವಿರ 458 ಸಾಲಗಳನ್ನು ವಿತರಿಸಿದ್ದು, 3ಲಕ್ಷ 26 ಸಾವಿರ 458ರೂ. ಗಳನ್ನು ಲಾಭದಲ್ಲಿ ಇದ್ದು ಶಾಸಕರಾದ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಇವರು ನಮ್ಮ ಬೆನ್ನುಲವಾಗಿ ನಿಂತಿದ್ದಾರೆ. ಅವರ ಸತತ ಪ್ರಯತ್ನದಿಂದ ಸಂಘ ಲಾಭದಲ್ಲಿ ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ತಿಮ್ಮಾಜಿಗೌಡಾ ಕಲಗೌಡಾ ಪಾಟೀಲ ಹೇಳಿದರು.
ಅಜುರ ಗ್ರಾಮದ ಸಂಘದ ಸಭಾಭವನದಲ್ಲಿ ನಡೆದ ವಾರ್ಷಿಕ ಸರ್ವಸಾಧರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಡಿ ಪ್ರದೇಶಗಳ ಸಹಕಾರ ಸಂಘಗಳ ಪ್ರಯೋಜನಕ್ಕಾಗಿ ಮಾಜಿ ಉಪಮುಖ್ಯಮಂತ್ರಿ, ಹಾಲಿ ಶಾಸಕ ಲಕ್ಷ್ಮಣ್ ಸವದಿ, ಶಾಸಕ ರಾಜು ಕಾಗೆ ಅವರ ನಿರಂತರ ಪ್ರಯತ್ನಗಳು ಮುಖ್ಯವಾಗಿವೆ. ಅವರಿಂದ ಗಡಿ ಭಾಗದಲ್ಲಿ ಸಹಕಾರಿ ಸಂಘ ಜೀವಂತವಾಗಿವೆ. ಅವರ ಬಲವಾದ ಬೆಂಬಲ ಮುಖ್ಯವಾಗಿದೆ. ಗಡಿ ಪ್ರದೇಶಗಳ ಸಹಕಾರ ಸಂಘಗಳು ಅವರ ಆಶೀರ್ವಾದದೊಂದಿಗೆ ಒಂದು ಹೆಜ್ಜೆ ಮುಂದಿಡುತ್ತಿವೆ. ಸಂಘದ ಒಟ್ಟು ಶೇರು ಬಂಡವಾಳ 54 ಲಕ್ಷ 63 ಸಾವಿರ ಇದ್ದು ಸಂಘವು ಒಟ್ಟು 1060 ಸದಸ್ಯರನ್ನು ಹೊಂದಿದೆ. ಭವಿಷ್ಯದಲ್ಲಿ, ಸದಸ್ಯರ ಪ್ರಯೋಜನಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಈ ಸಹಕಾರ ಸಂಘವನ್ನು ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯಗಳಲ್ಲಿಯೂ ಮಾದರಿಯನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು.
ಸಂಘದ ಉಪಾಧ್ಯಕ್ಷ ಕೇಶವ ಹಣಮಂತ ನರುಟೇ, ನಿರ್ದೇಶಕರಾದ ರಾವಸಾಬ ದೊಡ್ಡನವರ, ಬಾಳಗೌಡಾ ಕಾಗವಾಡೆ, ಗುಂಡುರಾವ ದೊಡ್ಡನವರ, ಅಶೋಕ ಮಂಹಕಾಳೆ, ರಾಮು ಸಾವಂತ, ಮಹಾದೇವ ಹಿಡಕಲ, ಶಿವಾಜಿ ಉಗಾರೆ, ರವಿ ಹೊನಖಂಡೆ, ಶಾಲಾಬಾಯಿ ಮಂಹಕಾಳೆ, ಮಿನಷಿ ಪಾಟೀಲ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಚಿದಾನಂದ ದೊಡ್ಡನವರ, ವರದಿಯನ್ನು ಓದಿದರು ಮತ್ತು ಕೃತಜ್ಞತೆ ಸಲ್ಲಿಸಿದರು. ಸಂಘದ ಎಲ್ಲಾ ಸದಸ್ಯರು ಗಣ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 