ಅಯ್ಯಪ್ಪಸ್ವಾಮಿ, ದೇವಿ ಭಾವಚಿತ್ರ ಭವ್ಯ ಮೆರವಣಿಗೆ

ಲೋಕದರ್ಶನ ವರದಿ

ಬಾಗಲಕೋಟೆ 4: ನಗರದ ಬುಲರ್ಿ ಲೇಔಟ್ನಲ್ಲಿ ಶ್ರೀ ಬನ್ನಿಮಹಾಕಾಳಿ ದೇವಸ್ಥಾನದ ಕಾತರ್ಿಕೋತ್ಸವ ಹಾಗೂ ಅಯ್ಯಪ್ಪಸ್ವಾಮಿ ಮಹಾಪೂಜೆ ಅಂಗವಾಗಿ ಅಯ್ಯಪ್ಪಸ್ವಾಮಿ ಹಾಗೂ ದೇವಿ ಭಾವಚಿತ್ರ ಭವ್ಯ ಮೆರವಣಿಗೆ ಜರುಗಿತು.

   ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಧ್ಯಾಹ್ನ ದೇವಸ್ಥಾನಕ್ಕೆ ತಲುಪಿತು. ಮೆರವಣಿಗೆ ಅಯ್ಯಪ್ಪಸ್ವಾಮಿ ಮತ್ತು ಬನ್ನಿ ಮಹಾಕಾಳಿ ದೇವಿಯ ಭಾವಚಿತ್ರ ಹೊತ್ತದ ಆನೆ, 108 ಮಹಿಳೆಯರು ಕುಂಭ ಹೊತ್ತು ಮೆರವಣಿಗೆಗೆ ಮೆರಗು ತಂದರು. ಇದಕ್ಕೂ ಮುನ್ನ ಬೆಳ್ಳಿಗ್ಗೆ ಬನ್ನಿ ಮಹಾಕಾಳಿ ದೇವಿಗೆ ವಿಶೇಷ ಅಭಿಷೇಕ, ಗೋಮಾತೆ ಹಾಗೂ ಅಯ್ಯಪ್ಪಸ್ವಾಮಿ ಪೂಜೆ ನೆರವೇರಿತು. ನಂತರ ಮಧ್ಯಾಹ್ನ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಶ್ರೀಮಂತ ಬಸವಪ್ರಭು ಸರನಾಡಗೌಡ, ನಗರಸಭೆ ಮಾಜಿ ಸದಸ್ಯ ಬಸವರಾಜ ಕಟಗೇರಿ, ಆರ್ಎಸ್ಎಸ್ ನಗರ ಕಾರ್ಯವಾಹಕ ವಿಜಯ ಸುಲಾಖೆ, ಬಿಜೆಪಿ ನಗರ ಘಟಕ ಅಧ್ಯಕ್ಷ ರಾಜು ನಾಯ್ಕರ್ ಸೇರಿದಂತೆ ಅನೇಕ ಭಕ್ತರು, ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪಾಲ್ಗೊಂಡಿದ್ದರು.