ಆಯುಷ್ಮಾನ್ ಭಾರತ ಕಾರ್ಡ್ ಎಲ್ಲರಿಗೂ ಸಹಕಾರಿ: ಗ್ರಾ. ಪಂ ಸದಸ್ಯ ತಿಮ್ಮರಡ್ಡಿ

ಲೋಕದರ್ಶನ ವರದಿ

ಶಿರಹಟ್ಟಿ 22: ಪ್ರತಿಯೊಬ್ಬ ಬಡವರಿಗೂ 5 ಲಕ್ಷ ರೂ. ಆರೋಗ್ಯದ ಖರ್ಚು  ಸರಕಾರವೇ ಭರಿಸಲು ಆಯುಷ್ಮಾನ್ ಯೋಜನೆ ಮೂಲಕ ಪ್ರಧಾನಿಗಳ ಸಂಕಲ್ಪದಿಂದ ಸಾಕಾರವಾಗಿದೆ. ಇದು ಪ್ರತಿಯೊಬ್ಬರಿಗೂ ಉಪಕಾರಿಯಾಗಿದ್ದು, ಪ್ರತಿ ಬಡವರಿಗೂ ತಲುಪುವಂತಾಗಲಿ. ಸರಕಾರಿ ವೈದ್ಯರುಗಳೂ ಇದಕ್ಕೆ ಸಹಾಯ ನೀಡಬೇಕು ಎಂದು ಬೆಳ್ಳಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮರಡ್ಡಿ ಮರಡ್ಡಿ ಹೇಳಿದರು.

ಅವರು ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಬಡ ಕುಟುಂಬಗಳಿಗೆ ಬೆಳ್ಳಟ್ಟಿ ಭಾರತಿಯ ಜನತಾ ಪಕ್ಷದ ಘಟಕದಿಂದಾ ಉಚಿತ ಆಯುಷ್ಮನ್ ಭಾರತ ಅರೋಗ್ಯ ಕಾಡರ್್ಗಳನ್ನು ವಿತರಣೆ ಮಾಡಿ ಮಾತನಾಡುತ್ತಾ, ಈಗಾಗಲೇ ಸುಮಾರು 500ಕ್ಕೂ ಹೆಚ್ಚು ಕುಟುಂಬದ ಸದಸ್ಯರಿಗೆ ಈ ಕಾಡರ್್ಗಳನ್ನು ವಿತರಿಸಲಾಗಿದ್ದು, ಇನ್ನೂ ಅನೇಕ ಫಲಾನುಭವಿಗಳಿಗೆ ಸದ್ಯದಲ್ಲೇ ಕಾಡರ್ುಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮೋಹನ ಗುತ್ತೆಮ್ಮನವರ, ಕೊಟ್ರೇಶ ಸಜ್ಜನರ, ನಾಗರಾಜ ಅಕ್ಕೂರ, ಗಿರಿಶರಡ್ಡಿ ಮೆಕಳಿ, ಶಿವರಾಜ ಸಜ್ಜನರ, ರಾಜೀವ ಮಾಂಡ್ರೆ, ಚನ್ನು ಅಕ್ಕೂರ, ವಿಜಯರಡ್ಡಿ ಮೆಕಳಿ, ಶ್ರೀಕಾಂತ ಬಟ್ಟೂರ, ವಿನಾಯಕ ಅಳವಂಡಿ ರಬ್ಬಾನಿ ಚೌರಿ, ವೆಂಕಟೇಶ ಬಸವರಡ್ಡಿ, ಅಣ್ಣಪ್ಪ ಗುತ್ತೆಮ್ಮನವರ, ರಾಕೇಶ ಪಾಟೀಲ, ಮಹಾದೇವ ಕಲ್ಲವಡ್ಡರ, ಅವಿನಾಶ ಗುತ್ತೆಮ್ಮನವರ ಇನ್ನೂ ಅನೇಕರು ಹಾಜರಿದ್ದರು.