ನವದೆಹಲಿ, ಮಾ 20, ದೇಶದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಸಚಿವಾಲಯವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಸಹಕರಿಸುತ್ತಿದೆ ಎಂದು ಲೋಕಸಭೆಗೆ ಸರ್ಕಾರ ಶುಕ್ರವಾರ ತಿಳಿಸಿದೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ, ನಲಮಡ ಉತ್ತಮ್ ಕುಮಾರ್ ರೆಡ್ಡಿ, ಮಾರಕ ಕೊರೋನಾ ವೈರಸ್ ಸೋಂಕು ನಿವಾರಣೆಗೆ ಯಾವುದೇ ಚುಚ್ಚುಮದ್ದು ಅಥವಾ ಔಷಧಿ ಸದ್ಯ ಲಭ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ ಎಂದರು.ತೃಣಮೂಲ ಕಾಂಗ್ರೆಸ್ ಸದಸ್ಯ ಶತಾಬ್ದಿ ರೈ ಮಾತನಾಡಿ, ಹಲವು ಸಚಿವರು ಹಾಗೂ ಸಂಸದರು ಕೊರೋನಾ ನಿವಾರಣೆಗೆ ಗೋಮೂತ್ರ ಮದ್ದು ಎನ್ನುತ್ತಿದ್ದಾರಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಶ್ರೀಪಾದ್ ಯಸ್ಸೋ ನಾಯಕ್, ಕೊರೋನಾ ವೈರಾಣು ನಿಯಂತ್ರಣಕ್ಕೆಂದೇ ಯಾವುದೇ ನಿಗದಿತಚುಚ್ಚುಮದ್ದು ಅಥವಾ ಔಷಧ ಸದ್ಯಕ್ಕೆ ಲಭ್ಯವಿಲ್ಲ. ಆದಾಗ್ಯೂ, ಆಯುರ್ವೇದ, ಯುನಾನಿ, ಹೋಮಿಯೋಪಥಿ ಮೊದಲಾದ ಹಳೆಯ ಔಷಧ ಪದ್ಧತಿಯಿಂದ ಉಸಿರಾಟದ ವ್ಯವಸ್ಥೆ ಉತ್ತಮಗೊಳ್ಳುತ್ತಿರುವುದಂತೂ ಸತ್ಯ. ಕೊರೋನಾ ನಿಯಂತ್ರಿಸಲು ಆಯುಷ್ ಸಚಿವಾಲಯವೂ ಸಾಥ್ ಸಹಕರಿಸುತ್ತಿದೆ ಎಂದು ಹೇಳಿದರು. ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಮಾತನಾಡಿ, ದೇಶದಲ್ಲಿ ಕೊರೋನಾ ವೈರಸ್ ದೃಢೀಕರಣ ಪರೀಕ್ಷೆ ವೈಜ್ಞಾನಿಯಕ ರೀತಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.