ಆಯುಷ್ ವೈದ್ಯರ ಅನಿರ್ದಿಷ್ಟಾವಧಿ ಮುಷ್ಕರ : ತುರ್ತು ಸಭೆ ಕರೆದ ಆರೋಗ್ಯ ಸಚಿವರು

 ಬೆಂಗಳೂರು,ಮೇ 24,ಸಮಾನ ಕೆಲಸಕ್ಕಾಗಿ ಸಮಾನ ವೇತನ ನಿಯಮ ಜಾರಿಗೆ ತರುವಂತೆ ಒತ್ತಾಯಿಸಿ ಶನಿವಾರದಿಂದ ಆಯುಷ್ ಇಲಾಖೆ ವೈದ್ಯರು ಅನಿರ್ದಿಷ್ಟಾವಧಿ ಹೋರಾಟಕ್ಕೆ ಕೈಗೊಂಡಿದ್ದಾರೆ.ಆಯುಷ್ ವೈದ್ಯರ ಹೋರಾಟಕ್ಕೆ ರಾಜ್ಯದ 2000 ಸರ್ಕಾರಿ ವೈದ್ಯರು ಹಾಗೂ 27000 ಖಾಸಗಿ ವೈದ್ಯರು ಹಾಗೂ 570 ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿ ಗಳು,ಆಯುಷ್ ಫೆಡರೇಶನ್ ಆಫ್ ಇಂಡಿಯಾದ ಸಂಘಟನಯೂ ಬೆಂಬಲ ವ್ಯಕ್ತಪಡಿಸಿದೆ.ವೈದ್ಯರು ಹಿನ್ನಲೆಯಲ್ಲಿ ರೋಗಿಗಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಗೆ ಇಲಾಖೆ ಮುಂದಾಗಿದೆ.
ಎಂಬಿಬಿಎಸ್ ವೈದ್ಯರುಮತ್ತು ಆಯುಷ್ ವೈದ್ಯರಿಗೆ ನೀಡಲಾಗುತ್ತಿರುವ ವೇತನ,ಭತ್ಯೆಯಲ್ಲಿ ಭಾರೀ ತಾರತಮ್ಯವಿದ್ದು ಸರಿಪಡಿಸು ವಂತೆ ಒತ್ತಾಯಿಸಿ ಹೋರಾಟದ ಎಚ್ಚರಿಕೆ ನೀಡಿದರೂ ಆರೋಗ್ಯ ಇಲಾಖೆ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ.ಹೀಗಾಗಿ ನಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಬಿಗಿಪಟ್ಟು ಹಿಡಿದಿದ್ದಾರೆಆಯುಷ್ ವೈದ್ಯರನ್ನು ಕೋವಿಡ್ 19 ಫೀವರ್ ಕ್ಲಿನಕ್ ಗಳಲ್ಲಿ ಹಾಗೂ ರೋಗ ಪತ್ತೆ ತಪಾಸಣೆ ಮತ್ತು ಕಾರ್ಯಾಚರಣೆ ತಂಡಗಳಲ್ಲಿ ಸಾವಿರಾರು ವೈದ್ಯರು ಕೆಲಸ ನಿರ್ವಹಿಸುತ್ತಿದ್ದು,ವೈದ್ಯರ ಮುಷ್ಕರದಿಂದಾಗಿ ಫೀವರ್ ಕ್ಲಿನಿಕ್ ಗಳು ಹಾಗೂ ತಪಾಸಣಾ ಕಾರ್ಯಕ್ಕೆ ಅಡ್ಡಿಯುಂಟಾಗಲಿದೆ.ಇದರ ಪರಿಣಾಮ ಕೊರೋನಾ ಪತ್ತೆ ಹಾಗೂ ಚಿಕಿತ್ಸೆಗೆ ಅಡ್ಡಿಯುಂಟಾಗಲಿದೆ ಎಂದು ವೈದ್ಯಾಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರ ಇತ್ತೀಚಗೆ ಹೋಮಿಯೋಪತಿಕ್ ವೈದ್ಯರ ವೇತನ ಹೆಚ್ಚಳ,ಬಾಕಿ ಹಣ ಬಿಡುಗಡೆ,ಹಾಗೂ ಸ್ಟೈಫಂಡ್ ಹೆಚ್ಚಳ ಮಾಡಲು ತೀರ್ಮಾನಿಸಿದೆ.ಇದು ಆಯುಷ್ ಇಲಾಖೆ ವೈದ್ಯರು ಕೆರಳಿಸಿದೆ.ಹೀಗಾಗಿ ಸಮಾನ ದುಡಿಮೆಯಾಗಿ ಸಮಾನ ವೇತನಕ್ಕೆ ಪಟ್ಟು ಹಿಡಿ ದು ಮುಷ್ಕರ ನಡೆಸುತ್ತಿದ್ದಾರೆ. ಪ್ರಸಕ್ತ ಆಯುಷ್ ವೈದ್ಯರನ್ನು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ ಎಚ್ ಎಂ),ರಾಷ್ಟ್ರೀಯ ಬಾಲ ಸ್ವಾಸ್ತ್ ಕಾರ್ಯಕ್ರಮ(ಆರ್ ಬಿಎಸ್ಕೆ)ಎಂಬಿಬಿಎಸ್ ಹುದ್ದೆಗಳಿಗೆ ಪರ್ಯಾಯವಾಗಿ ಆಯುಷ್ ವೈದ್ಯರ ಬಳಕೆ ಮಾಡಿಕೊಳ್ಳಲಾಗುತ್ತಿದೆ.  

ಆಯುಷ್ ಫೆಡರೇಶನ್ ಆಫ್ ಇಂಡಿಯಾದ ವೈದ್ಯರ ಬೇಡಿಕೆಗಳು :
 1) 10-15 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಎನ್‌ಎಚ್‌ಎಂ ವೈದ್ಯರು 56,800 ವೇತನಕ್ಕೆ ಬದಲಾಗಿದೆ  20,300 ಪಡೆಯುತ್ತಿದ್ದಾರೆ
  2) 6-8 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಆರ್‌ಬಿಎಸ್‌ಕೆ ವೈದ್ಯರು   45,000-60,000 ಬದಲಾಗಿ  27,000 ವೇತನ ಪಡೆಯುತ್ತಿದ್ದಾರೆ
  3) ಎಂಬಿಬಿಎಸ್ ಹುದ್ದೆಗೆ ವಿರುದ್ಧವಾಗಿ 6 ​​ವರ್ಷಗಳ ಸೇವೆಯನ್ನು ಪೂರೈಸಿದ 300 ವೈದ್ಯರು 70,000 ಬದಲಾಗಿ 26,000 ವೇತನ ಪಡೆಯುತ್ತಿದ್ದಾರೆ 
  4) ಎಂಬಿಬಿಎಸ್  ಸ್ನಾತಕೋತ್ತರ ವಿದ್ಯಾರ್ಥಿಗಳು   40,000 ಸ್ಟೈಪಂಡ್ ಪಡೆಯುತ್ತಿದ್ದರೆ,ಆಯುಷ್ ಸ್ನಾತಕೋತ್ತರ ವಿದ್ಯಾರ್ಥಿಗಳು ಕೇವಲ  25,000 ಸ್ಟೈಫಂಡ್ ನೀಡಲಾಗುತ್ತಿದೆ. 
  5) ಎಂಬಿಬಿಎಸ್ ತರಬೇತಿ ಪಡೆಯುತ್ತಿರುವವರು  30,000 ಪಡೆಯುತ್ತಿದ್ದರೆ,ಆಯುಷ್ ತರಬೇತಿ ಪಡೆಯುತ್ತಿರುವವರು   15,000 ಸ್ಟೈಪಂಡ್ ಪಡೆಯುತ್ತಿದ್ದಾರೆ
  6) ಸರ್ಕಾರಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಆಯುಷ್ ವೈದ್ಯರಿಗೆ ಅಲೋಪತಿ  ಪದ್ದತಿಯನ್ನು ಅಭ್ಯಾಸ ಮಾಡಲು ಅನುಮತಿ ಇದೆ ಆದರೆ ಖಾಸಗಿ ಆಯುಷ್ ವೈದ್ಯರಿಗೆ ಅವಕಾಶ ನೀಡಲಾಗಿಲ್ಲ.
  7) ಒಪ್ಪಂದದ (ಗುತ್ತಿಗೆ)ಆಧಾರದ ಮೇಲೆ ಕೆಲಸ ಮಾಡುವ ಆಯುಷ್ ವೈದ್ಯರನ್ನು ಪೂರ್ವ ಸೂಚನೆ ನೀಡದೆ ಕೆಲಸದಿಂದ ವಜಾಗೊಳಿಸಲಾಗುತ್ತಿದೆ.
  8) ಕೋವಿಡ್ -19 ಸಂಬಂಧಿತ  ಯೋಜನೆಗೂ ಶೇ 70% ಕ್ಕಿಂತ ಹೆಚ್ಚು ಆಯುಷ್ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ ಆದರೆ ಅವರಿಗೆ ಅಗತ್ಯವಾದ ರಕ್ಷಣಾ ಪರಿಕರಗಳನ್ನು ಒದಗಿಸಲಾ ಗಿಲ್ಲ ಮತ್ತು ಕೆಲವು ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರು ವ ವೈದ್ಯರಿಗೆ ಪಿಪಿಇ ಕಿಟ್‌ಗಳನ್ನು ಒದಗಿಸಿಲ್ಲವೆಂದು ಬೇಡಿಯಲ್ಲಿ ಆರೋಪಿಸಿದ್ದಾರೆ. ಆಯುಷ್ ವೈದ್ಯರ ಅನಿರ್ದಿಷ್ಟ ಹೋರಾಟದ ಹಿನ್ನಲೆಯಲ್ಲಿ ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಆಯುಷ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ತುರ್ತು ಸಭೆಯನ್ನು ಸಚಿವ ಶ್ರೀರಾಮುಲು ಕರೆದಿದ್ದಾರೆ. ಸಚಿವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಆಯುಷ್ ವೈದ್ಯರ ಬೇಡಿಕೆಗಳನ್ನು ಸರ್ಕಾರ ಈಡೇರಿಸವ ಭರವಸೆ ಇದೆ.ನಮ್ಮ ಬೇಡಿಕೆ ನ್ಯಾಯಯುತವಾಗಿದ್ದು ಸರ್ಕಾರ  ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ದೇಶವ್ಯಾಪಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಆಯುಷ್ ಸಂಘಟನೆ ಎಚ್ಚರಿಕೆ ನೀಡಿದೆ.