ನವದೆಹಲಿ 29: ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರದೇಶವನ್ನು ಮೂರು ಭಾಗಗಳಾಗಿ ವಿಭಾಗಿಸಿ ಹಂಚುವ ಅಲಹಾಬಾದ್ ಹೈಕೋರ್ಟ್‌ನ 2010ರ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಜನವರಿ 2019ರ ಮೊದಲ ವಾರಕ್ಕೆ ಸುಪ್ರೀಂ ಕೋರ್ಟ್ ಮುಂದೂಡಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಕೆ.ಎಂ. ಜೋಸೆಫ್ ಅವರನ್ನೊಳಗೊಂಡ ನೂತನ ಪೀಠ ವಿಚಾರಣೆ ನಡೆಸಿ ಪ್ರಕರಣವನ್ನು ಮುಂದೂಡಿದೆ.
'ಮಸೀದಿ ಇಸ್ಲಾಂನ ಅವಿಭಾಜ್ಯ ಭಾಗವಲ್ಲ' ಎಂಬ 1994ರ ತೀರ್ಪನ್ನು ಪಂಚಪೀಠಕ್ಕೆ ವಹಿಸಬೇಕೆಂಬ ಮನವಿಯನ್ನು ಸೆಪ್ಟೆಂಬರ್ 27ರಂದು ತಳ್ಳಿ ಹಾಕಿದ್ದ ಸುಪ್ರೀಂಕೋರ್ಟ್, ಅಯೋಧ್ಯೆಯ ಜಾಗದ ವಿವಾದದ ವಿಚಾರಣೆಗೆ ಹಾದಿ ಸುಗಮಗೊಳಿಸಿತ್ತು. ಮತ್ತು ಅಯೋಧ್ಯೆಯ ಜಾಗದ ಕುರಿತಾದ ಸಿವಿಲ್ ದಾವೆಯ ವಿಚಾರಣೆಯನ್ನು ತ್ರಿಸದಸ್ಯ ಪೀಠ ಅಕ್ಟೋಬರ್ 29ರಂದು ಇಂದಿನಿಂದ ಕೈಗೆತ್ತಿಕೊಳ್ಳಲಿದೆ ಎಂದು ಹೇಳಿತ್ತು. ಆದರೆ ಇಂದು ಸುಪ್ರೀಂ ಕೋರ್ಟ್ ವಿಚಾರಣೆಯನ್ನು 2019ರ ಜನವರಿ ತಿಂಗಳಿಗೆ ಮುಂದೂಡಿದೆ