ಸ್ವೀಪ್ ಕಾರ್ಯಕ್ರಮದ ಮೂಲಕ ಮತದಾರರಿಗೆ ಜಾಗೃತಿ
ಕೊಪ್ಪಳ 24: ಮತದಾರರ ಪಟ್ಟಿಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗವು ಪ್ರತಿ ಬೂತ್ ಗಳಿಗೆ ಒಬ್ಬರಂತೆ ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಿದೆ. ಇದರಿಂದ ಗ್ರಾಮಗಳಲ್ಲಿ ಹೊಸದಾಗಿ ಯುವ ಮತದಾರರ ನೊಂದಣಿ, ತಿದ್ದುಪಡಿ, ಹೆಸರು ರದ್ದತಿ ಸೇರಿದಂತೆ ಹಲವು ರೀತಿಯ ಕೆಲಸಗಳನ್ನು ಈ ಬೂತ್ ಮಟ್ಟದ ಅಧಿಕಾರಿಗಳು ನಿಭಾಯಿಸಲಿದ್ದಾರೆ. ಇದರಿಂದ ಚುನಾವಣೆ ಆಯೋಗಕ್ಕೂ ಹಾಗೂ ಜನರ ನಡುವೆ ಇವರು ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಿದೆ.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಮಾಹಿತಿ: ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 289 ಬೂತ್ ಗಳಿವೆ ಇದರಲ್ಲಿ 84 ನಗರ ಪ್ರದೇಶದಲ್ಲಿದ್ದು,205 ಗ್ರಾಮೀಣ ಭಾಗದಲ್ಲಿವೆ. ಈ ಎಲ್ಲಾ ಬೂತ್ ಗಳಲ್ಲಿ ಚುನಾವಣಾ ಆಯೋಗ ಬಿ.ಎಲ್.ಓ.ಗಳನ್ನು ನೇಮಕ ಮಾಡಿ ಕಾಲಕಾಲಕ್ಕೆ ಮತದಾರರ ಪಟ್ಟಿ ಪರಿಷ್ಕರಣೆಗೆ ಹೆಚ್ಚಿನ ಒತ್ತು ನೀಡಿದೆ. ಇದರಿಂದ ಹೊಸ ಮತದಾರರ ಸೇರೆ್ಡ, ತಿದ್ದುಪಡಿ, ಹೆಸರು ರದ್ದುಪಡಿಸುವದು ಸೇರಿದಂತೆ ಜಾಗೃತಿ ಮೂಡಿಸುವ ಕೆಲಸವನ್ನು ಇವರು ನಿಭಾಯಿಸುತ್ತಿದ್ದಾರೆ.
ಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಘಟ್ಟರಡ್ಡಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಹಮ್ಮದ ರಫಿ ಮುಲ್ಲಾ ಅವರು ಕಳೆದ 2 ವರ್ಷದಿಂದ ಬೂತ್ ಮಟ್ಟದ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲ ಕಾಲಕ್ಕೆ ಸರ್ಕಾರದ ಆದೇಶಗಳನ್ನು ಪಾಲನೆ ಮಾಡುವ ಮೂಲಕ 871 ಮತದಾರರ ಹೆಸರುಗಳನ್ನು ಸೇರೆ್ಡ ಮಾಡಿರುವ ಇವರು ಎಲ್ಲಾ ಮತದಾರರ ಕಾರ್ಡ್‌ಗೆ ಆಧಾರ ಜೋಡಣೆ ಶೇ.97.10ರಷ್ಟು ಮಾಡಿಸಿದ್ದಾರೆ. ಒಟ್ಟಾರೆ ಪ್ರತಿ ಮನೆ-ಮನೆಗೂ ತೆರಳಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಹೊಸ ಮತದಾರರನ್ನು ಗುರುತಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಒಟ್ಟಾರೆ ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಬೂತ್ ಮಟ್ಟದ ಅಧಿಕಾರಿಗಳು ಚುನಾವಣಾ ಆಯೋಗದ ಪ್ರಮುಖ ಆಧಾರ ಸ್ತಂಭಗಳಾಗಿದ್ದಾರೆ.
ಒಟ್ಟು ಮತದಾರರು 897(ಪುರುಷ-435 ಹಾಗೂ ಮಹಿಳೆ-468), 2024ರಲ್ಲಿ ನೊಂದಣಿಯಾದ ಯುವ ಮತದಾರರು 25 (ಪುರುಷ-19 ್ಘ ಮಹಿಳೆ-6), ರದ್ದುಪಡಿಸಲಾದ ಒಟ್ಟು ಮತದಾರರು 47 (ಪುರುಷ-38 ್ಘ ಮಹಿಳೆ-09), ತಿದ್ದುಪಡಿಯಾದ ಒಟ್ಟು ಮತದಾರರು 64(ಪುರುಷ-52 ್ಘ ಮಹಿಳೆ-12), ಆಧಾರ್ ಜೊಡಣೆಯಾದ ಒಟ್ಟು 871 ಮತದಾರರು ಶೇ.97.10 ರಷ್ಟು.
ಜನವರಿ 25ರಂದು ಜರುಗುವ ರಾಷ್ಟ್ರೀಯ ಮತದಾರರ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮವು ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜರುಗಲಿದ್ದು, ಜಿಲ್ಲಾ ಚುನಾವಣಾಧಿಕಾರಿಗಳಿಂದ ಅಭಿನಂದನಾ ಪತ್ರವನ್ನು ಸ್ವೀಕರಿಸಲಿದ್ದಾರೆ.
ಘಟ್ಟರಡ್ಡಿಹಾಳ ಚಿಕ್ಕ ಗ್ರಾಮವಾಗಿದ್ದು, ಮತದಾರರ ಪಟ್ಟಿಯ ಕುರಿತು ಬೂತ್ ಮಟ್ಟದ ಅಧಿಕಾರಿಯಾಗಿ ನಿಯೋಜಿಸಿದ ಮೇಲೆ ಪ್ರತಿ ಮನೆಗೆ ಭೇಟಿ ನೀಡಿ 18 ವರ್ಷ ತುಂಬಿದ ಕುಟುಂಬ ಸದಸ್ಯರ ಹೆಸರು ಇರುವ ಬಗ್ಗೆ ್ಘ ಇಲ್ಲದಿರುವ ಬಗ್ಗೆ ಮಾಹಿತಿ ಪಡೆದು ಹೆಸರು ಇಲ್ಲದ ಸದಸ್ಯರ ಅಗತ್ಯ ದಾಖಲಾತಿ ಪಡೆದು ಸ್ಥಳದಲ್ಲಿಯೇ ಸ್ವೀಕೃತಿ ನೀಡಲಾಯಿತು. ಬಿಎಲ್‌ಓ ಕೆಲಸ ನನಗೆ ತೃಪ್ತಿ ತಂದಿದೆ ಎನ್ನುತ್ತಾರೆ ಬಿಎಲ್‌ಓ ಆಗಿರುವ ಹಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯ ಘಟ್ಟರಡ್ಡಿಹಾಳ ಗ್ರಾಮದ ಸ.ಹಿ.ಪ್ರಾ.ಶಾಲೆ ಶಿಕ್ಷಕ ಮಹಮ್ಮದ ರಪಿ ಅವರು.
ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮವು ತಾಲೂಕಿನಾದ್ಯಂತ ಪರಿಣಾಮಕಾರಿಯಾಗಿ ಜರುಗಿರುವುದರಿಂದ 18 ವರ್ಷ ತುಂಬಿದ ಯುವಕರು, ಯುವತಿಯರು ತಮ್ಮ ಅಗತ್ಯವಾದ ದಾಖಲಾತಿಗಳನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರೆ್ಡ ಮಾಡಿಕೊಂಡಿದ್ದಾರೆ. ಈ ಬಾರಿಯೂ ಸ್ವೀಪ್ ಕಾರ್ಯಕ್ರಮವನ್ನು ಜರುಗಿಸಿ ಅರಿವು ಮೂಡಿಸಲಾಗಿದೆ ಎಂದಿದ್ದಾರೆ ವಿಶೇಷ ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ಕೊಪ್ಪಳ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಅವರು.