ಲೋಕದರ್ಶನ ವರದಿ
ಬೆಟಗೇರಿ 6: ಗ್ರಾಮಸ್ಥರು ಯಾವಾಗಲೂ ಐಎಸ್ಐ ಅಂಗೀಕೃತ ಗುಣಮಟ್ಟದ ವಿದ್ಯುತ್ ಸಾಮಗ್ರಿಗಳನ್ನೇ ಉಪಯೋಗಿಸಿ ವಿದ್ಯುತ್ ಉಳಿಸಿ ನಾಡು ಬೆಳೆಸಿ ಎಂದು ಹೆಸ್ಕಾಂ ಘಟಪ್ರಭಾ ವಿಭಾಗದ ಕಾರ್ಯನಿವರ್ಾಹಕ ಅಭಿಯಂತರರಾದ ಕಿರಣ ಸಣ್ಣಕ್ಕಿ ಹೇಳಿದರು.
ಹೆಸ್ಕಾಂ ಘಟಪ್ರಭಾ ವಿಭಾಗದ ಸಹಯೋಗದಲ್ಲಿ ಗ್ರಾಮದ ವಿವಿಡಿ ಸಕರ್ಾರಿ ಪ್ರೌಢ ಶಾಲೆ ಹಾಗೂ ಗ್ರಾಮ ಪಂಚಾಯತಿ ಕಾಯರ್ಾಲಯದಲ್ಲಿ ಬುಧವಾರ ಫೆ.5ರಂದು ಸ್ಥಳೀಯ ವಿದ್ಯುತ್ ಬಳಕೆ ಗ್ರಾಹಕ ಹಾಗೂ ಶಾಲಾ ವಿದ್ಯಾಥರ್ಿಗಳೊಂದಿಗೆ ವಿದ್ಯುತ ಬಳಕೆಯ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಪಾಯವಾಗುವಂತ ಸಂದರ್ಭದಲ್ಲಿ ಹೆಸ್ಕಾಂ ಕಛೇರಿಗೆ ತಕ್ಷಣ ತಿಳಿಸಿದರೆ ನಮ್ಮ ನಿಗಮದ ಲೈನಮನ್ ಆಗಮಿಸಿ ಅಪಾಯವಾಗದಂತೆ ತಡೆಯುತ್ತಾರೆ. ವಿದ್ಯುತ್ತಿನ ಅಪವ್ಯಯ, ವಿದ್ಯುತ್ನಿಂದ ಅಪಾಯವಾಗದಂತೆ ಹೇಗೆ ಬಳಸಬೇಕು, ಎಲ್ಇಡಿ ಹಾಗೂ ಸೌರಶಕ್ತಿಯಿಂದ ವಿದ್ಯುತ್ ಉಳಿತಾಯ, ವಿದ್ಯುತ್ನಿಂದ ಆಗುವ ಅನಾಹುತ ಹಾಗೂ ಸುಲಭವಾಗಿ ಬಳಸುವ ವಿಧಾನಗಳ ಮಾಹಿತಿಯನ್ನು ಮನ ಮುಟ್ಟುವಂತೆ ಸಾರ್ವಜನಿಕರಿಗೆ ವಿವರಿಸಿದರು.
ಹೆಸ್ಕಾಂ ಘಟಪ್ರಭಾ ವಿಭಾಗ, ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿದ್ಯುತ್ ಬಳಕೆಯಲ್ಲಿ ಸುರಕ್ಷತೆಯ ಸಲಹೆಗಳು, ಉಳಿತಾಯದ ಕ್ರಮಗಳು, ಎಲ್ಇಡಿ ಬಳಕೆಯ ಪ್ರಯೋಜನಗಳು, ಸೌರಶಕ್ತಿ ಬಳಕೆ ಸ್ಭೆರಿದಂತೆ ಹಲವಾರು ವಿಷಯಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿಯನ್ನು ಮೂಡಿಸಿದರು.
ಹೆಸ್ಕಾಂ ಮಮದಾಪೂರ ಶಾಖಾಧಿಕಾರಿ ಕೆ.ಸಿ.ಧಮರ್ಾ ಮಾತನಾಡಿ, ಪೋಸ್ಟ್ ಆಪೀಸನಲ್ಲಿ ಆಧಾರ ಕಾರ್ಡದ ಝರಾಕ್ಸ ಕೊಟ್ಟರೆ ಒಂದು ಎಲ್ಇಡಿ ಬಲ್ಬವನ್ನು 70ರೂ ಕೊಡಲಾಗುವದು.
ಬ್ಯಾನರ್ ಇತರೆ ಪ್ರಚಾರದ ವಸ್ತುಗಳನ್ನು ವಿದ್ಯುತ್ ಕಂಬಗಳಿಗೆ ಕಟ್ಟಬಾರದು. ವಿದ್ಯುತ್ ಮಾರ್ಗಗಳ ಹತ್ತಿರ ಇರುವ ಮರದ ರೆಂಬೆಗಳನ್ನು ಕತ್ತರಿಸದೇ ಮಾಹಿತಿಯನ್ನು 1912 ಕರೆ ಮಾಡಿ ತಿಳಿಸಿರಿ ಎಂದರು.
ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ, ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ, ಸೋಮಶೇಖರ ಮಗದುಮ್ಮ, ವೆಂಕಟೇಶ ತೆರದಾಳ, ಕೆ.ಎಸ್.ರಂಜನಗಿ, ಬಸು ಕರೆಪ್ಪನ್ನವರ, ಶಿವಾನಂದ ಮಠದ, ಶಂಕರ ತಿರಕನ್ನವರ, ಗ್ರಾಪಂ ಸದಸ್ಯರು, ಪ್ರೌಢ ಶಾಲೆಯ ಶಿಕ್ಷಕರು, ವಿದ್ಯಾಥರ್ಿಗಳು, ಕಾರ್ಯಕ್ರಮದಲ್ಲಿ ನೂರಾರು ಗ್ರಾಹಕರು ಹಾಗೂ ರೈತರು ಸೇರಿದಂತೆ ಇತರರು ಇದ್ದರು.