ರೈಲು ನಿಲ್ದಾಣದ ಸ್ವಚ್ಚತೆಯ ಅರಿವು ಇನ್ನೂ ಇಲ್ಲಿ ಅಸ್ಪಷ್ಟ !

ಲೋಕದರ್ಶನವರದಿ

ಗುಳೇದಗುಡ್ಡ: ದೇಶದ ಎಲ್ಲ ಭಾಗಗಳಲ್ಲಿ ರೈಲು ನಿಲ್ದಾಣಗಳು ಸುಂದರವಾಗಿ ನಿಮರ್ಾಣವಾಗುತ್ತಿವೆ. ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದೆಲ್ಲ ಕೇಳುತ್ತೇವೆ. ಆದರೆ ತಾಲೂಕಾ ಕೇಂದ್ರವಾಗಿರುವ ಗುಳೇದಗುಡ್ಡ ರೈಲು ನಿಲ್ದಾಣಕ್ಕೆ ಒಮ್ಮೆ ಬಂದು ನೋಡಿ.ಅದು ಗ್ರಾಮೀಣ ರೈಲು ನಿಲ್ದಾಣವನ್ನು ನೆನಪಿಸುವಂತಿದೆ. ನಿಲ್ದಾಣದಲ್ಲಿ ಅಕ್ಕ ಪಕ್ಕ ಪ್ರಯಾಣಿರು ಕೂಡುವ ಸ್ಥಳವನ್ನು ಹೋರತು ಪಡಿಸಿದರೆ ಉಳಿದ ಕಡೆಗಳೆಲ್ಲ ಕಸಕಡ್ಡಿ ಮುಳ್ಳು  ಬೆಳೆದಿದೆ. ಕುಡುಕರು ಎಲ್ಲೆಂದರಲ್ಲಿ ಸಾರಾಯಿ ಬಾಟಲಿ, ಡಬ್ಬಿ ಬೀಸಾಡಿದ್ದಾರೆ. ಅದನ್ನು ನಿತ್ಯ ಸಪಾಯಿ ಸಿಬ್ಬಂದಿಯ ಗಮನಕ್ಕೂ ಬರುವುದಿಲ್ಲವೇ ಎಂದು ಪ್ರಯಾಣಿಕರು ಕೇಳುವಂತಾಗಿದೆ.

    ರೈಲು ನಿಲ್ದಾಣದಲ್ಲಿ ಅರ್ಧ ಗಂಟೆ ಕೂಡಲು ಮನಸ್ಸಗುವುದಿಲ್ಲ. ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ಶೌಚಾಯಗಳು ಗಬ್ಬು ವಾಸನೆಯಿಂದ ಕೂಡಿವೆ. ಅಲ್ಲಲ್ಲಿ ಕುಡುಕರು ಬೀಸಾಡಿದ ಸಾರಾಯಿ ಬಾಟಲಿಗಳು ಅಲ್ಲಿಯೇ ಬಿದ್ದರೂ ಸಿಬ್ಬಂದಿ ಗಮನಕ್ಕಿಲ್ಲ. ದಿನದಲ್ಲಿ ಎಲ್ಲ ರೈಲುಗಳು ನಿಲ್ಲುವ ನಿಲ್ದಾಣ ಇದಾಗಿದ್ದರೂ ಇಲಾಖೆ ಮಾತ್ರ ಪ್ರಧಾನಿಗಳ ಸ್ವಚ್ಚ ಭಾರತ ಅಭಿಯಾನವನ್ನು ಗಮನಕ್ಕೆ ತಂದುಕೊಂಡಿಲ್ಲ. 

    ಈ ಕುರಿತು ಸಾಕಷ್ಟು ಬಾರಿ ಸಂಸದರಿಗೆ ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲವೆಂದು ಸ್ಥಳೀಕರು ಹೇಳುತ್ತಾರೆ. ಸಿಬ್ಬಂದಿಗಳು ಪ್ರಯಾಣಿಕರ ಅನುಕೂಲಕ್ಕಾಗಿ ಯಾವುದೇ ಕೆಲಸ ಮಾಡುವುದಿಲ್ಲ. ಬದಲಾಗಿ ರೈಲು ಸುರಕ್ಷಿತವಾಗಿ ಬಂದು ಹೋಗುವ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತಾರಷ್ಟೇ ಎಂದು ಈ ನಿಲ್ದಾಣದಿಂದ ನಿತ್ಯ ಪ್ರಯಾಣಿಸುವ ಪ್ರಯಾಣಿಕರು ಬೇಸರದಿಂದ ಹೇಳುವ ಮಾತಿದು.

    ಸಾರ್ವಜನಿಕರ ಆಗ್ರಹ: ಬಾದಾಮಿಯಲ್ಲಿ ನೆಲೆಸಿರುವ, ಜಿಲ್ಲಾ ಕೇಂದ್ರದಲ್ಲಿ ಕಚೇರಿ ಮಾಡಿರುವ ಸಂಸದರು ವಾರದಲ್ಲಿ ಒಂದು ಸಲವಾದರೂ ರೈಲು ಮಾರ್ಗವಾಗಿ ಸಂಚರಿಸಿದರೆ ಈ ಭಾಗದ ರೈಲು ನಿಲ್ದಾಣಗಳು ಶುಚಿಯಾಗಿರುತ್ತವೆ. ಸಾರಾಯಿ ಬಾಟಲಿ ಬೀಳದಂತೆ ಕ್ರಮ ಜರುಗಿಸಬೇಕು. ನಿಲ್ದಾಣವನ್ನು ಕಸಕಡ್ಡಿಯಿಂದ ಮುಕ್ತ ಮಾಡಬೇಕು. ನಿತ್ಯ ಶೌಚಾಲಯ ಸ್ವಚ್ಚವಾಗಿಡಬೇಕು. ಇದು ಕಾರ್ಯಗತವಾಗಲು  ಸಂಸದರು ಈ ರೈಲು ನಿಲ್ದಾಣದ ಬಗ್ಗೆ ಕಾಳಜಿ ಮತ್ತು ಆಸಕ್ತಿವಹಿಸಲಿ ಎಂದು ಈ ಭಾಗದ ಗ್ರಾಮಸ್ಥರು ಹಾಗೂ ಗುಳೇದಗುಡ್ಡದ ಸಾರ್ವಜನಿಕರು ಆಗ್ರಹಿಸಿದ್ದಾರೆ.