ಹೊಸ ಮತದಾರರ ನೊಂದಣಿ, ಪರಿಷ್ಕರಣೆ ಬಗ್ಗೆ ಅರಿವು

ಬಾಗಲಕೋಟೆ25: ನವನಗರದ ಸರಕಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಬುಧವಾರ ಮತದಾರರ ಪರಿಶೀಲನಾ (ಇವಿಪಿ) ಕಾರ್ಯಕ್ರಮ ಜರುಗಿತು. 

ಜಿಲ್ಲೆಯ ಎಲ್ಲ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳ ಪ್ರಾಚಾರ್ಯರುಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದ್ದು, ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರು ಉದ್ಘಾಟಿಸಿ ಮಾತನಾಡಿದ ಅವರು ಮತದಾರರ ಪರಿಷ್ಕರಣ ಕಾರ್ಯಕ್ರಮದ ಯಶಸ್ಸಿಗೆ ಕಾಲೇಜುಗಳ ಹಾಗೂ ವಿದ್ಯಾಥರ್ಿಗಳ ಪಾತ್ರ ಮಹತ್ವವಿದ್ದು, ಇದರ ಅರಿವು ವಿದ್ಯಾಥರ್ಿಗಳಲ್ಲಿ ಮೂಡಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಂದು ಕಾಲೇಜಿನ ಪ್ರಾಚಾರ್ಯರು ವಿದ್ಯಾಥರ್ಿಗಳಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಸಿದ್ದು ಹುಲ್ಲೊಳ್ಳಿ ಮಾತನಾಡಿ ಯುವಕರು ಹಾಗೂ ನೂತನ ಮತದಾರರು ತಮ್ಮ ಮೊಬೈಲ್ನಲ್ಲಿ ಓಟರ್ ಹೆಲ್ಪಲೈನ್ ಬಳಕೆ ಕುರಿತು ವಿದ್ಯಾಥರ್ಿಗಳಿಗೆ ಹೇಗೆ ಮನವರಿಕೆ ಮಾಡಿಕೊಡಬೇಕೆಂಬುದನ್ನು ಪ್ರಾತ್ಯಕ್ಷಿತೆಯ ಮೂಲಕ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಲೀಡ್ ಕಾಲೇಜಿನ ಪ್ರಾಚಾರ್ಯ ಅರುಣಕುಮಾರ ಗಾಳಿ ಸ್ವಾಗತಿಸಿದರು. ಡಿಎಲ್ಎಂಟಿ ಸಂಪತ್ ಲಮಾಣಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಚಾರ್ಯರು ಪಾಲ್ಗೊಂಡಿದ್ದರು.