ಯೋಗದ ಅರಿವು- ಆರೋಗ್ಯದ ಉಳಿವು: ಡಾ. ಯೋಗಿ ದೇವರಾಜ ಗುರೂಜಿ

Awareness of Yoga - Maintaining Health: Dr. Yogi Devaraj Guruji

ಬೆಳಗಾವಿ17:  ಪ್ರಸ್ತುತ ದಿನಮಾನದಲ್ಲಿ ಯೋಗ ಅಂದರೆ ಬರಿ ಆಸನವಲ್ಲ ಇದು ಪ್ರತಿಯೊಬ್ಬ ವ್ಯಕ್ತಿಯ ಇಡೀ ದೇಹದ ಭೌತಿಕ ಹಾಗೂ ಭೌಧ್ಧಿಕ ಚಟುವಟಿಕೆಗಳ ಚಲನಾ ಶಕ್ತಿಯನ್ನು ಹೊಂದಿರುವ ಅನೇಕ ರೋಗಗಳ ಮದ್ದು ಯೋಗಾ ಆಗಿದೆ ಎಂದು ತಿಳಿಸಿದರು. ಯೋಗದ ಅರಿವು - ಆರೋಗ್ಯದ ಉಳಿವು ಹಿನ್ನೆಲೆಯಲ್ಲಿ ನಮ್ಮಲಿ ಇರುವ ಶಕ್ತಿಯನ್ನು ಮನಸ್ಸಿನ ಚಿತ್ತತೆಯನ್ನು ಸರಿಯಾದ ದಾರಿಯಲ್ಲಿ ಸಾಗಿಸಲು ಸಮಯ ಮತ್ತು ಆಸಕ್ತಿ ತುಂಬಾ ಮಹತ್ವದಾಗಿದೆ. ಮುಂದುವರೆದು, ಯೋಗದಿಂದ ಮನಸ್ಸು ಬುದ್ದಿಶಕ್ತಿ ಮತ್ತು ಭಾವನಾತ್ಮಕ ಶಕ್ತಿಗಳನ್ನು ಬೆಳೆಸುವುದಾಗಿದೆ ಎಂದು ಡಾ. ಯೋಗಿ ದೇವರಾಜ ಗುರೂಜಿ, ಉಪಾಧ್ಯಕ್ಷರು, ಅಮೇರಿಕಾದ ಯೋಗ ವಿಶ್ವವಿದ್ಯಾಲಯ ಹೇಳಿದರು. 

ಅವರು ದಿ. 16ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ನಡೆದ ಯೋಗಾ - ಯುವ 2025 ಸಂಬಂಧಿಸಿದಂತೆ ಒಂದು ದಿನದ ಪರಿಚಯಾತ್ಮಕ ಕಾರ್ಯಕ್ರಮವನ್ನು ಸ್ಕೋಲ್ ಆಫ್ ಎಜ್ಯುಕೇಶನ, ಎನ್‌.ಎಸ್‌.ಎಸ್ ಕೋಶ, ಕ್ರೀಡಾ ವಿಭಾಗ ಮತ್ತು ಅಮೇರಿಕಾದ ಯೋಗಾ ವಿಶ್ವವಿದ್ಯಾಲಯ ಪ್ಲೋರಿಡಾ ಇವರ ಸಹಯೋಗದೊಂದಿಗೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಂಡ ಕುಲಸಚಿವರಾದ ಸಂತೋಷ ಕಾಮಗೌಡ ಅವರು ಯೋಗದಿಂದ ಯೋಗಿಗಳಾಗಿ ಯುವಕರಾಗಬೇಕೆಂದು ಈ ಸಂದರ್ಭದಲ್ಲಿ ಮಾತನಾಡಿದರು. ಬದಲಾದ ಪರಿಸ್ಥಿತಿಯಲ್ಲಿ ಯೋಗದಿಂದ ಯಶಸ್ವಿ ದಾರಿಯನ್ನು ಕಂಡುಕೊಳ್ಳಬಹುದು.  

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಕುಲಪತಿ ಪ್ರೊ. ತ್ಯಾಗರಾಜ ಅವರು ಮಾತನಾಡಿ ಪ್ರಸ್ತುತ ಬದಲಾವಣೆಯ ಈ ಕಾಲದಲ್ಲಿ ಶಿಕ್ಷಣದಲ್ಲಿ ಸಾಧನೆ ಬರವಣಿಗೆಗಳು ಉತ್ತಮವಾಗಬೇಕಾಗಿದೆ. ಯೋಗದಿಂದ ಪ್ರತಿಯೊಬ್ಬರು ತಮ್ಮ ಬದುಕನ್ನೆ ಬದಲಾಯಿಸಿಕೊಳ್ಳಬಹುದು. ಆಧಾರ, ಸಂಪನ್ಮೂಲ ಹಾಗೂ ಸಾರ್ವತ್ರಿಕರಣ ಈ ಮೂರು ಅಂಶಗಳು ಶ್ರೇಷ್ಟ ದಾರಿಗೆ ತಮ್ಮನ್ನು ತೆಗೆದುಕೊಂಡು ಹೋಗುತ್ತವೆ. ವೇದಿಕೆ ಮೇಲೆ ಡಾ, ಎಸ್ ಎಸ್ ಹಿರೇಮಠ, ಅಮೇರಿಕಾ ಯೋಗ ವಿಶ್ವವಿದ್ಯಾಲಯ ಡೀನರು, ಪ್ರೊ. ಎಂ.ಸಿ ಯರ್ರಿಸ್ವಾಮಿ. ಶಿಕ್ಷಣ ನಿಕಾಯ, ಡಾ. ಜಗದೀಶ ಘಸ್ತಿ , ದೈಹಿಕ ಶಿಕ್ಷಣ ನಿರ್ದೇಶಕರು, ಕನಕಪ್ಪ ಪೂಜಾರ, ಎನ್‌.ಎಸ್‌.ಎಸ್ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಡಾ ರವಿ ಗೋಳ, ಅವರು ಉಪಸ್ಥಿತರಿದ್ದರು.   

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ಪ್ರಾಚಾರ್ಯರು, ದೈಹಿಕ ನಿರ್ದೇಶಕರು, ಎನ್‌.ಎಸ್‌.ಎಸ್ ಕಾರ್ಯಕ್ರಮ ಅಧಿಕಾರಿಗಳು ಬಿ.ಇಡಿ ಕಾಲೇಜಿನ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು. ಬೋಧಕ ಬೋಧಕೇತರ ಸಿಬ್ಬಂಧಿಗಳು ಭಾಗವಹಿಸಿದ್ದರು. ಡಾ ರವಿ ಗೋಳ ನಿರೂಪಿಸಿದರು. ಕುಮಾರ ಆಕಾಶ ಪಾಟೀಲ ಪ್ರಾರ್ಥನೆ ಮಾಡಿದರು, ಪ್ರೊ. ಎಂ.ಸಿ ಯರ್ರಿಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಡಾ. ಸುಷ್ಮಾ ಆರ್ ವಂದಿಸಿದರು.