ಧಾರವಾಡ 31: ನಮ್ಮ ಅರಿವಿಗೆ ನಾವು ತೃಪ್ತಿ ಪಡಿಸುತ್ತಾ ಇಲ್ಲ. ಅದಕ್ಕೆ ಶಾಶ್ವತವಾಗಿ ಸಂಕಟಪಡುತ್ತಾ ಇದ್ದೇವೆ ಎಂದು ಕನರ್ಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಶಂಭುಹೆಗಡಾಳ ಇಂದಿಲ್ಲಿ ಅಭಿಪ್ರಾಯ ಪಟ್ಟರು.
ಕನರ್ಾಟಕ ವಿದ್ಯಾವರ್ಧಕ ಸಂಘದಲ್ಲಿ ಶತಾಯುಷಿ ದಿ. ಜಿ.ಜಿ. ದೊಡವಾಡ ಅವರ ತಂದೆ ದಿ. ಗುರುಪಾದಪ್ಪ ದುಂಡಪ್ಪ ದೊಡವಾಡ ದತ್ತಿ ಕಾರ್ಯಕ್ರಮದಲ್ಲಿ ಅವರು ಬಯಲು ಬಯಲಾಯಿತ್ತಯ್ಯಾ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಿದ್ದರು.
'ಬಯಲು ಬಯಲವೇ ಭಿತ್ತಿ, ಬಯಲು ಬಯಲವೇ ಬೆಳೆದು, ಬಯಲು ಬಯಲಾಗಿ ಬಯಲಾಯಿತ್ತಯ್ಯಾ, ಬಯಲು ಜೀವನ ಬಯಲು ಭಾವನೆ, ನಿಮ್ಮ ಪೂಜಿಸಿದವರು ಮುನ್ನವೇ ಬಯಲಾದರು ಗುಹೇಶ್ವರಾ ನಾ ನಿಮ್ಮ ನಂಬಿ ಬಯಲಾದೆನಯ್ಯಾ ಎಂಬ ಅಲ್ಲಮಪ್ರಭುಗಳ ವಚನವನ್ನು ಅವರು ಸ್ಮರಿಸಿ ಅದರ ವಿಶ್ಲೇಷಣೆಯನ್ನು ಮಾಡಿದರು.
ಶಾಶ್ವತ ತೃಪ್ತಿ ಇಂದ್ರಿಯಗಳಿಗೆ ಇಲ್ಲ. ಬೆಳಗಿನ ಅನ್ನ ಸಿಕ್ಕರೆ ಅಲ್ಪ ತೃಪ್ತಿ ಮಧ್ಯಾಹ್ನದವರೆಗೆ ಇರುತ್ತದೆ. ನಂತರ ಅದರದೇ ಪುನರಾವರ್ತನೆ. ಇಂದ್ರಿಯಗಳ ಕ್ಷಣಕ್ಷಣದ ತೃಪ್ತಿಯನ್ನು ಪರಿಹರಿಸುವುದೇ 'ಸಂತೃಪ್ತಿ' ಅಲ್ಲ. ಇದು ಒಂದು ರೀತಿಯ ಬಯಕೆಗಳಿಗೆ ಸಂಕಟ ತರುವ ಸ್ಥಿತಿಯೇ ಹೌದು. ಇನ್ನು ಧ್ಯಾನ, ಯೋಗ ಮತ್ತು ಪ್ರಾಣವಾಯು ನಿಯಂತ್ರಣದಿಂದ ಸಂತೃಪ್ತಿ ಸಿಗುತ್ತದೆ ಎನ್ನುತ್ತಾರೆ. ಇದು ಭಗವಂತನನ್ನು ನೆನೆಯುವ ಕ್ರಿಯೆ ಎಂದು ಅನ್ನಬಹುದೇನೋ, ಆದರೆ, 'ಅಂತರಂಗದಲ್ಲಿ ಬಯಲಾಗಬೇಕು, ವಿಚಾರಗಳಿಂದ ಬಯಲಾಗಬೇಕು. ಹೀಗಾದರೆ ಧ್ಯಾನ ಸ್ಥಿತಿಗೆ ಬರುತ್ತೇವೆ. ನಾವು ನಮ್ಮನ್ನು ಬಯಲು ಇಲ್ಲವೇ "ಖಾಲಿ ಮಾಡಿಕೊಳ್ಳುವ" ಪರಿಸ್ಥಿತಿಗೆ ಬಂದರೆ ಮಾತ್ರ ತೃಪ್ತಿಯ ಮೆಟ್ಟಿಲುಗಳನ್ನು ಏರಲು ಸಾಧ್ಯ. ಇಂತಹ ಶೂನ್ಯ ಸ್ಥಿತಿಯನ್ನು ಕೆಲವರು ದೇವರು. ಗಾಡ್, ಅಲ್ಲಾ ಎಂದು ಕರೆದರು. ಆದರೆ ಬುದ್ಧ ಮಾತ್ರ 'ಶೂನ್ಯ ಎಂಬ ಶಬ್ದವನ್ನೆ ದೇವರ ಬದಲು ಬಳಸಿದ. ಶೂನ್ಯತ್ವ ಸರಿ. ದೇವರೆಂಬ ವ್ಯಕ್ತಿವಾಚಕವನ್ನು ರೂಢಿಗೊಳಿಸಿದ್ದರಿಂದ ಶೂನ್ಯಕ್ಕೆ ವ್ಯಕ್ತಿ ಬೇರೆ ನಾನು ಬೇರೆ ಎಂಬ ವಿಶ್ಲೇಷಣೆ ಬರುತ್ತದೆ ಎಂದವರು ಅಭಿಪ್ರಾಯಪಟ್ಟರು.
ಶಾಶ್ವತ ತೃಪ್ತಿಬೇಕಾದಲ್ಲಿ 'ಅರಿವಿಗೆ ತೃಪ್ತಿ' ಬರಬೇಕಾಗುತ್ತದೆ. ಅದರ ಬದಲು ಅಹಂ ಭಾವಕ್ಕೆ ನಾವು ಅಗ್ರಮಣೆ ಹಾಕುತ್ತಾ ಅದು ಖುಷಿಪಟ್ಟರೆ ನಾವು ಶಾಶ್ವತ ತೃಪ್ತಿ ಪಟ್ಟುಕೊಳ್ಳುತ್ತೇವೆಂಬ ಭ್ರಮೆಯಿಂದಲೇ ಸಂಕಟ ಪಡುತ್ತಿದ್ದೇವೆ ಎಂದು ಡಾ. ಶಂಭು ಹೆಗಡಾಳ ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರು ಡಾ. ಶಂಭು ಹೆಗಡಾಳ ಅವರ ಉಪನ್ಯಾಸವನ್ನು ಶ್ಲಾಘಿಸಿದರಲ್ಲದೇ ಅದರಲ್ಲಿಯ ಒಳ ಧನಿಯನ್ನು ಅರ್ಥಮಾಡಿಕೊಳ್ಳಬೇಕೆಂದರು.
ದೊಡವಾಡ ಕುಟುಂಬಕ್ಕೆ ಸೇರಿದ ಜನಪ್ರಿಯ ವೈದ್ಯ ಡಾ. ನಿತಿನಚಂದ್ರ ಹತ್ತೀಕಾಳ ಹಾಗೂ ಖ್ಯಾತ ಕೃಷಿ ವಿಜ್ಞಾನಿ ಡಾ. ಶ್ರೀಕಾಂತ ಪಾಟೀಲ ದಂಪತಿಗಳನ್ನು ಸನ್ಮಾನಿಸಲಾಯಿತು. ತಮ್ಮ ಸನ್ಮಾನಕ್ಕೆ ಉತ್ತರಿಸಿದ ಡಾ. ನಿತಿನ್ಚಂದ್ರ ಹತ್ತೀಕಾಳ ಅವರು ಈ ಸನ್ಮಾನ ನನ್ನನ್ನು ಪುನೀತಗೊಳಿಸಿದ್ದು, ಬಡವರ ಮತ್ತು ದಲಿತರ ಸೇವೆಗಾಗಿ ಇನ್ನಷ್ಟು ಹುಮ್ಮಸು ತಂದಿದೆ ಎಂದು ಹೇಳಿದರು. ಕೃಷಿ ವಿಜ್ಞಾನಿ ಡಾ. ಶ್ರೀಕಾಂತ ಪಾಟೀಲ ಮಾತನಾಡಿ, ಬಿ.ಟಿ. ಹತ್ತಿಯ ಬಗ್ಗೆ ತಾವು ಕೈಕೊಂಡ ಸಂಶೋಧನೆಗಳನ್ನು ವಿವರಿಸಿದರು.
ಪ್ರಾರಂಭದಲ್ಲಿ 93 ವರ್ಷದ ತರುಣ ಚನಬಸಪ್ಪ ಅವರಾದಿ ವಚನವನ್ನು ಸುಶ್ರಾವ್ಯವಾಗಿ ಹಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ದತ್ತಿ ಕಾರ್ಯಕ್ರಮ ಸಂಯೋಜಕ ಮನೋಜ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನಕಾರ್ಯದಶರ್ಿ ಪ್ರಕಾಶ ಉಡಿಕೇರಿ ಸ್ವಾಗತಿಸಿದರು. ಕೋಶಾಧ್ಯಕ್ಷ ಕೃಷ್ಣ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಸಹ ಕಾರ್ಯದಶರ್ಿ ಸದಾನಂದ ಶಿವಳ್ಳಿ ಆಭಾರ ಮನ್ನಿಸಿದರು.
ಸಂಘದ ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ. ಗೌರವ ಉಪಾಧ್ಯಕ್ಷ ಸೇತುರಾಮ ಹುನಗುಂದ, ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಬಿ. ಗಾಮನಗಟ್ಟಿ, ದತ್ತಿದಾನಿ ಸರಸಾನಂದ ದೊಡವಾಡ, ಗಂಗಮ್ಮ ದೊಡವಾಡ, ಕರಣ ದೊಡವಾಡ, ದಯಾನಂದ ದೊಡವಾಡ, ಸುಮಂಗಲಾ ಪಾಟೀಲ. ರಾಜೇಶ್ವರಿ ಹತ್ತೀಕಾಳ, ಸಿದ್ಧರಾಮಣ್ಣ ಹತ್ತೀಕಾಳ, ವೀರಯ್ಯ ಪತ್ರಿಮಠ, ಇತರರು ಉಪಸ್ಥಿತರಿದ್ದರು.