ಬಳ್ಳಾರಿಯಲ್ಲಿ ನಾಯಿ ಕಡಿತ-ಹಾವು ಕಡಿತದ ಜನ ಜಾಗೃತಿ: ಡಾ.ಮರಿಯಂಬಿ
Awareness campaign on dog bites and snake bites in Bellary: Dr. Mariambi
ಬಳ್ಳಾರಿಯಲ್ಲಿ ನಾಯಿ ಕಡಿತ-ಹಾವು ಕಡಿತದ ಜನ ಜಾಗೃತಿ: ಡಾ.ಮರಿಯಂಬಿ
ಬಳ್ಳಾರಿ, 05: ನಾಯಿ ಕಚ್ಚಿದ ದಿನವೇ ಹತ್ತಿರದ ಸರ್ಕಾರಿಆಸ್ಪತ್ರೆಗೆ ಭೇಟಿ ನೀಡಿರೇಬಿಸ್ ರೋಗತಡೆಯುವ ಲಸಿಕೆ ಹಾಕಿಸಬೇಕು ಎಂದುಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ಸಲಹೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾಘಟಕ, ಮಹಾನಗರ ಪಾಲಿಕೆ, ನಗರ ಪ್ರಾಥಮಿಕಆರೋಗ್ಯಕೇಂದ್ರ ಬಂಡಿಹಟ್ಟಿ- ಆಶ್ರಯ ಕಾಲೋನಿ ಇವರ ಸಂಯುಕ್ತಾಶ್ರಯದಲ್ಲಿ ಕೌಲ್‌ಬಜಾರ್‌ನದಾನಪ್ಪ ಸ್ಟ್ರೀಟ್‌ನಲ್ಲಿ ನಾಯಿ ಕಡಿತ ಹಾಗೂ ಹಾವು ಕಡಿತಕುರಿತು ಬುಧವಾರ ಏರಿ್ಡಸಿದ್ದ ಜನಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು. ಸಾಕಿದ ಅಥವಾ ಬೀದಿ ನಾಯಿ ಕಚ್ಚಿದರೆ, ಉಗುರಿನಿಂದಗಿರಿದರೆಅಥವಾ ನಮ್ಮ ಮೈಮೇಲೆ ಈಗಾಗಲೇ ಇರುವಗಾಯವನ್ನು ನಾಲಿಗೆಯಿಂದ ನೆಕ್ಕಿದರೆಅದನ್ನುನಿರ್ಲಕ್ಷ್ಯ ವಹಿಸುವಂತಿಲ್ಲ. ಹತ್ತಿರದ ಸರ್ಕಾರಿಆಸ್ಪತ್ರೆಯಲ್ಲಿವೈದ್ಯರ ಸಲಹೆಯಂತೆಲಸಿಕೆ ಪಡೆಯಬೇಕೆಂದರು. ಹಾವು ಕಚ್ಚಿದಾಗ ಗಾಬರಿಗೊಳ್ಳದೇ, ಕಚ್ಚಿರುವ ಭಾಗವು ಹೃದಯದ ಕೆಳಗೆ ಬರುವ ಹಾಗೆ ನಿಗಾವಹಿಸಿ ವ್ಯಕ್ತಿಯನ್ನು ಯಾವುದೇ ವಾಹನ ಅಥವಾ 108 ಅಂಬುಲೆನ್ಸ್ ಮೂಲಕ ಹತ್ತಿರದಆಸ್ಪತ್ರೆಗೆಕರೆದುಕೊಂಡು ಹೋಗಲು ಮೊದಲಆದ್ಯತೆ ನೀಡಬೇಕು. ವ್ಯಕ್ತಿಯ ರಕ್ತಪರಿಚಲನೆಗೆ ತಡೆಯಾಗುವಂತಹ ಕೈ ಗಡಿಯಾರ, ಬಳೆ, ಉಂಗುರ ಮುಂತಾದವುಗಳನ್ನು ತೆಗೆಯಬೇಕು. ಕಚ್ಚಿದಭಾಗವು ಅಲುಗಾಡದಂತೆ ನೋಡಿಕೊಳ್ಳಬೇಕು ಎಂದು ಆಶ್ರಯ ಕಾಲೋನಿ ವೈದ್ಯಾಧಿಕಾರಿ ಡಾ.ಕಾಶೀಪ್ರಸಾದ್ ಅವರುಜಾಗೃತಿ ಮೂಡಿಸಿದರು. ಹಾವು ಕಚ್ಚಿದಾಗಕಚ್ಚಿದಜಾಗದ ಪಕ್ಕದಲ್ಲಿ ಬಟ್ಟೆಯನ್ನುಕಟ್ಟುವುದು, ಬ್ಲೇಡ್‌ಅಥವಾ ಚಾಕುವಿನಿಂದಗಾಯ ಮಾಡುವುದು, ಗಾಯವನ್ನು ಸುಡುವುದು, ನಾಟಿ ಓಷಧಿಗಳನ್ನು ನೀಡುವುದು ಮುಂತಾದವುಗಳನ್ನು ಮಾಡಬಾರದುಎಂದು ವಿನಂತಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಸಾಂಕ್ರಾಮಿಕರೋಗತಜ್ಞರಾದಡಾ.ವಿಶಾಲಾಕ್ಷಿ, ತಂಬಾಕು ನಿಯಂತ್ರಣ ವಿಭಾಗದ ಸರಸ್ವತಿ, ಜಿಲ್ಲಾಕಾಲರಾನಿಯಂತ್ರಣತಂಡದ ಕೆ.ಎಮ್.ಶಿವಕುಮಾರ್, ತಿಪ್ಪೇಸ್ವಾಮಿ, ಉಮಾದೇವಿ, ಸವಿತಾ, ಖಾಸಿಂ ವಲಿ, ಹೆಚ್‌ಐಓ ಮಹಾಲಿಂಗ, ದುರ್ಗಾಪ್ರಸಾದ್, ಪಿಹೆಚ್‌ಸಿಓ ದಾನಕುಮಾರಿ, ಕೌಸರ್, ವಿಜಯಲಕ್ಷ್ಮೀ, ಸುಮಿತ್ರಾ, ರಾಧಿಕಾ ಸೇರಿದಂತೆ ಆಶಾ ಕಾರ್ಯಕರ್ತೆಯರು, ತಾಯಂದಿರು, ಸಾರ್ವಜನಿಕರು ಹಾಜರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 