ಲೋಕದರ್ಶನ ವರದಿ
ಬೆಳಗಾವಿ.ನ.21: ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದಲ್ಲಿನ ದೇವೇಂದ್ರ ಜಿನಗೌಡ ಶಾಲೆಯಲ್ಲಿ ರೋಟರಿ ಸೆಟ್ಲೈಟ ಕ್ಲಬ್ ಬೆಳಗಾವಿ ಇವರ ವತಿಯಿಂದ ತಂಬಾಕು ಸೇವೆನೆಯಿಂದಾಗಿ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಇತ್ತಿಚಿಗೆ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಶಿರೀಶ ಶಹಾ ಅವರು ಮಾತನಾಡಿ, ತಂಬಾಕು ಸೇವೆನೆಯಿಂದ ಇಂದು ದೇಶದಲ್ಲಿ ಕ್ಯಾನ್ಸರ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದರೂ ಸಹ ಜನರು ಅದನ್ನು ಸೇವನೆ ಮಾಡುತ್ತಿರುವುದು ದುರದುಷ್ಟಕರ ಸಂಗತಿಯಾಗಿದೆ. ತಂಬಾಕು ಜಗಿಯುವುದರಿಂದ ಬಾಯಿ ಕ್ಯಾನ್ಸರ , ಕರುಳಿನ ಕ್ಯಾನ್ಸರದಂತಹ ಮಾರಕ ರೋಗಗಳು ಉಂಟಾಗುತ್ತವೆ. ಆದ್ದರಿಂದ ಯುವಕರು ಮತ್ತು ದೊಡ್ಡವರು ತಂಬಾಕು ಜಗಿಯುವುದು ಮತ್ತು ಸಿಗರೇಟ ಬೀಡಿ ಸೇದುವುದು ಸೇರಿದಂತೆ ತಂಬಾಕು ಸೇವನೆಯಿಂದ ದೂರ ಉಳಿದು ಸದೃಢ ಆರೋಗ್ಯದತ್ತ ಹೆಚ್ಚಿನ ಗಮನ ನೀಡಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಗೋಪಾಲ ಜಿನಗೌಡ ಅವರು ಮಾತನಾಡಿ, ಸರಕಾರದ ನಿಯಮದಂತೆ ಶಾಲೆಯ 100 ಮೀ ವ್ಯಾಪ್ತಿಯಲ್ಲಿ ತಂಬಾಕು, ಗುಟ್ಕಾ ಸೇರಿದಂತೆ ತಂಬಾಕು ಉತ್ಪಾದನೆಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದಲ್ಲದೇ ಶಾಲಾ ಮಕ್ಕಳಲ್ಲಿ ತಂಬಾಕು ಸೇವೆನೆಯಿಂದ ಉಂಟಾಗುವ ದುಷ್ಪರಿಣಾಮ ಕುರಿತು ಮೇಲಿಂದ ಮೇಲೆ ಮಾಹಿತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದಶರ್ಿ ಶರದ್ ಬಾಳಿಕಾಯಿ, ವಿಕ್ರಮ್ ಲೇಂಗಡೆ ಶಿಕ್ಷಕರು, ಪಾಲಕರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಮೊದಲಾದವರು ಉಪಸ್ಥಿತರಿದ್ದರು. ಶಾಲೆಯ ಪ್ರಾಚಾರ್ಯ ವಿಜಯಲಕ್ಷ್ಮೀ ಪಾಟೀಲ ಅತಿಥಿಗಳನ್ನು ಸ್ವಾಗತಿಸಿದರು.