ಬೆಳಗಾವಿ 23: ರಂದು ಬೆಳಗಾವಿ ತಲೂಕಿನ ಹೊಸವಂಟಮೂರಿ ಗ್ರಾಮ ಪಂಚಯತಿಯ ವ್ಯಾಪ್ತಿಯಲ್ಲಿ ಬರುವ ಪರಶ್ಯಾನಟ್ಟಿ ಗ್ರಾಮದಲ್ಲಿ ನವ್ಯದಿಶಾ ಟ್ರಸ್ಟ್ ಮತ್ತು ಗ್ರಾಮೀಣ ಕೂಟ ಸಂಸ್ಥೆಯ ಸಹಯೋಗದೊಂದಿಗೆ ವೈಯಕ್ತಿಕ ನೈರ್ಮಲ್ಯ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಒಂದು ತರಬೇತಿಯಲ್ಲಿ ನವ್ಯದಿಶ ಟ್ರಸ್ಟ್ನ ಅಭಿವೃದ್ಧಿ ಅಧಿಕಾರಿಗಳು ನವ್ಯದಿಶ ಪರಿಚಯ ಮತ್ತು ಕಾರ್ಯಕ್ರಮದ ಮುಖ್ಯ ಉದ್ದೇಶ ಏನು ಎಂಬುದನ್ನು ತಿಳಿಸಲಾಯಿತು ಹಾಗೆ ಕಾರ್ಯಕ್ರಮದ ಮುಖ್ಯ ಘಟ್ಟವಾದ ವೈಯಕ್ತಿಕ ನೈರ್ಮಲ್ಯದ ಅರ್ಥ, ಪ್ರಾಮುಖ್ಯತೆ ಮತ್ತು ವೈಯಕ್ತಿಕ ನೈರ್ಮಲ್ಯದ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಉತ್ತಮ ಕ್ರಮಗಳು ಮತ್ತು ಅನೈರ್ಮಲ್ಯದ ತೊಂದರೆಗಳನ್ನು ತಿಳಿಸುವ ಮುಖಾಂತರ ಕಾರ್ಯಕ್ರಮ ನೆಡಸಲಾಯಿತು.
ಕಾರ್ಯಕ್ರಮದಲ್ಲಿ ಜನರಿಗೆ ನಮ್ಮ ಶರೀರವನ್ನು ಸದಾ ಶುದ್ಧವಾಗಿಟ್ಟುಕ್ಕೊಳ್ಳಲು ಆರೈಕೆ ಮಾಡಿಕೊಳ್ಳುವುದೇ ವೈಯಕ್ತಿಕ ನೈರ್ಮಲ್ಯ. ಒಂದು ವೇಳೆ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳದೆ ಇದ್ದ ಪಕ್ಷದಲ್ಲಿ - ಕೊಳೆ, ಆಹಾರ ಪದಾರ್ಥಗಳು, ದೇಹ ಸ್ರವಿಸುವಿಕೆ ಮತ್ತು ಸೂಕ್ಷ್ಮ ಜೀವಿಗಳು ನಮ್ಮ ದೇಹದಲ್ಲಿ ಹೆಚ್ಚಾಗಿ, ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ನೈರ್ಮಲ್ಯ ಕಾಪಾಡಿಕೊಳ್ಳುವುದರಿಂದ ಆರೋಗ್ಯ,ಆಥರ್ಿಕತೆ ಮತ್ತು ಸಾಮಾಜಿಕವಾಗಿ ನಮಗೆ ಲಾಭವಾಗುತ್ತದೆ ಎಂದು ಅರ್ಥ ಮಾಡಿಸಿ ನಂತರ ತರಬೇತಿ ಯಲ್ಲಿ ಜನರಿಗೆ ಪ್ರತಿಯೋಬ್ಬರು ಪ್ರತಿನಿತ್ಯ ತಪ್ಪದೆ ಜಳಕ ಮಾಡುವುದು ಹಾಗೂ ನೀರಿನ ಕೊರತೆಯಿದ್ದರೆ ಅಥವಾ ಬೇರೆ ಕಾರಣದಿಂದ ಸ್ನಾನ ಮಾಡುವುದು ಸಾಧ್ಯವಾಗದಿದ್ದಲ್ಲಿ ಆ ಸಮಯದಲ್ಲಿ ಶುದ್ಧವಾದ ಹಸಿ ಬಟ್ಟೆಯಿಂದ ದೇಹವನ್ನು ಒರೆಸಿಕೊಳ್ಳುವುದು, ಪ್ರತಿನಿತ್ಯ ಹಲ್ಲುಜ್ಜುವುದು, ಕೂದಲನ್ನು ಶಾಂಪೊ ಅಥವಾ ಸೊಪು ಮುಖಾತಂರ ತೊಳೆಯುವುದು, ಪ್ರತಿ ಮಲವಿಸರ್ಜನೆ ನಂತರ ಸಾಬೂನಿನಿಂದ ಕೈ ತೊಳೆಯುವುದು, ಊಟ ತಯಾರು ಮಾಡುವ ಮುನ್ನ ಮತ್ತು ಊಟ ಮಾಡುವ ಮುಂಚೆ ಸಾಬೂನಿನಿಂದ ಕೈ ತೊಳೆಯುವುದು, ಒಗೆದ ಬಟ್ಟೆಯನ್ನು ಬಿಸಿಲಿನಲ್ಲಿ ಒಣಗಿಸುವುದರ ಮಹತ್ವ, ನವು ಕೆಮ್ಮುತ್ತಿರುವಾಗ ಅಥವಾ ಸೀನುತ್ತಿರುವಾಗ ಬಾಯಿ ಮತ್ತು ಮೂಗನ್ನು ಕೈಯಿಂದ ಅಥವಾ ಬಟ್ಟೆಯ ಮುಲಕ ಮುಚ್ಚಿಕೊಂಡಿರುವುದು, ಸದಾ ಪಾದರಕ್ಷೆಗಳನ್ನು ಧರಿಸುವುದು, ಒಬ್ಬರು ಬಳಸಿದ ಟವಲ್ನ್ನು ಇನ್ನೊಬ್ಬರು ಬಳಸಿದಾಗ ಆಗುವಂತಹ ರೋಗಗಳು, ಕಿವಿಗಳನ್ನು ಶುದ್ಧವಾಗಿಟ್ಟುಕೊಳ್ಳದು,ಉಗುರುಗಳನ್ನು ತೆಗೆಯದಿದ್ದಾಗ ಮಲದಲ್ಲಿರುವ ಜೀವಾಣುಗಳು ದೇಹವನ್ನು ಹೊಕ್ಕು ಬೇಧಿಯಂತಹ ಭಯಾನಕ ಕಾಯಿಲೆ ಬರುವುದರ ಬಗ್ಗೆ ತಿಳಿಸಲಾಯಿತು.
ಮತ್ತು ಇದರ ಜೊತೆಗೆ ಅನೈರ್ಮಲ್ಯದಿಂದಾಗಿ ಅನುಭವಿಸವ ತೊಂದರೆಗಳಾದ ಬಾಯಿ ಮತ್ತು ದೇಹ ವಾಸನೆ, ದಂತ ಸಂಭಂದಿ ಕಾಯಿಲೆಗಳು, ಶೀತ, ನೆಗಡಿ, ಕೆಮ್ಮು ಸಾಮಾನ್ಯ ಕಾಯಿಲೆಗಳು, ಬೇಧಿ, ಟೈಪಯಿಡ್, ಕ್ಷಯ, ಕಜ್ಜಿ, ಚರ್ಮ ರೋಗಗಳು, ಕಾಲು, ತೊಡೆ ಸಂದಿ ಮತ್ತು ಇತರೆ ಸೋಂಕು ರೋಗಗಳ ಬಗ್ಗೆ ಜನರಿಗೆ ತಿಳಿಸಲಾಯಿತ್ತು ಮುಖ್ಯವಾಗಿ ಅನೈರ್ಮಲ್ಯದಿಂದಾಗಿ ಅನುಭವಿಸವ ಕೀಳಿರಿಮೆ, ಸಕಾರಾತ್ಮಕ ಚಿಂತನೆ ಕೊರತೆ ಬಗ್ಗೆ ತರಬೇತಿಯಲ್ಲಿ ಈ ಮೇಲಿನ ವಿಷಯಗಳನ್ನು ತಿಳಿಸಲಾಯಿತ್ತು. ತರಬೇತಿಯ ಕೋನೆಯ ಹಂತದಲ್ಲಿ ಉಪಸ್ಥಿತರಿದ್ದ ಜನರು ತಾವು ಇವುಗಳ ಮಾಹಿತಿ ನಮಗೆ ಗೊತ್ತಿರಲಿಲ್ಲಾ ನಾವು ಪಾಲಿಸುವುದಾಗಿ ತಿಳಿಸಿದರು. ಈ ತರಬೇತಿಯಲ್ಲಿ ಗ್ರಾಮದ ಜನರು ಕಾಯ್ರಕ್ರಮದಲ್ಲಿ ಉಪಸ್ಥಿತರಿದ್ದು ತರಬೇತಿಯನ್ನು ಯಶಸ್ವಿಗೊಳಿಸಲಾಯಿತು. ಈ ತರಬೇತಿಯಲ್ಲಿ ಉಪಸ್ಥಿತ ಗ್ರಾಮದ ಜನರು ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಶಿವಕುಮಾರ.ರ.ಹಲ್ಯಾಳಿ ಇವರು ಕಾರ್ಯಕ್ರಮವನ್ನು ಸಂಘಟಿಸಿ ಉಪನ್ಯಾಸ ನೀಡಿದರು.