ಬ್ಯಾಂಕ್ ಸಾಲ ಮರು ಪಾವತಿ ಕುರಿತು ಜಾಗೃತಿ ಕಾರ್ಯಕ್ರಮ

ಬ್ಯಾಡಗಿ07: ಹಲವಾರು ವರ್ಷಗಳಿಂದ ಬ್ಯಾಂಕುಗಳಲ್ಲಿ ಸಾಲದ ಅಸಲು, ಬಡ್ಡಿಯನ್ನು ಮರು ಪಾವತಿಸದೇ ಬೇಬಾಕಿ ಉಳಿಸಿಕೊಂಡಿರುವ ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳು ಸಾಲವನ್ನು ಮರು ಪಾವತಿ ಮಾಡಿದರೆ ಅದರ ಬಡ್ಡಿಯ ಹಣಕ್ಕೆ ಸಂಪೂರ್ಣ ರಿಯಾಯ್ತಿ  ನೀಡಲಾಗುವುದು ಕಬ್ಬೂರ ಕಾಪರ್ೊರೇಶನ್ ಬ್ಯಾಂಕ್ ಮ್ಯಾನೇಜರ್ ಉಮಾಶಂಕರ ಹೇಳಿದರು. 

     ತಾಲೂಕಿನ ದುಮ್ಮಿಹಾಳ ಗ್ರಾಮದಲ್ಲಿ ಕರುನಾಡ ಯುವ ಕೇಸರಿ ಸಂಸ್ಥೆಯ ಆಶ್ರಯದಲ್ಲಿ ಸ್ತ್ರೀ ಶಕ್ತಿ ಮತ್ತು ಸ್ವ ಸಹಾಯ ಸಂಘಗಳ ಸದಸ್ಯೆಯರಿಗಾಗಿ ಏರ್ಪಡಿಸಲಾಗಿದ್ದ ಬ್ಯಾಂಕ್ ಸಾಲ ಮರು ಪಾವತಿ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕಬ್ಬೂರ ಕಾಪರ್ೊರೇಶನ್ ಬ್ಯಾಂಕ್'ನಿಂದ ಸಾಲ ಪಡೆದುಕೊಂಡು ಈವರೆಗೂ ಅಸಲು, ಬಡ್ಡಿಯನ್ನು ಕಟ್ಟದೆ ಬಾಕಿ ಉಳಿಸಿಕೊಂಡಿರುವ ಎಲ್ಲ ಮಹಿಳಾ ಸಂಘಗಳು ಸಾಲವನ್ನು ಪೂತರ್ಿಯಾಗಿ ಕಟ್ಟಿದರೆ ಅದರ ಬಡ್ಡಿಯ ಹಣಕ್ಕೆ ಸಂಪೂರ್ಣ ರಿಯಾಯತಿ ನೀಡಲು ಬ್ಯಾಂಕ್'ನಿಂದ ನಿರ್ಣಯ ಕೈಗೊಂಡಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು. 

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕಾ ಯುವ ಕೇಸರಿ ಸಂಸ್ಥೆಯ ಅಧ್ಯಕ್ಷ ಹುಚ್ಚನಗೌಡ್ರ ಮಾತನಾಡಿ, ಬ್ಯಾಂಕಿನ ಸಾಲವನ್ನು ಸಕಾಲಕ್ಕೆ ಮರು ಪಾವತಿ ಮಾಡಿದರೆ ಬ್ಯಾಂಕುಗಳ ವ್ಯವಹಾರಕ್ಕೂ ಬಹಳಷ್ಟು ಅನುಕೂಲವಾಗುತ್ತದೆ. ಬ್ಯಾಂಕುಗಳು ಸಹ ಮತ್ತೆ ಸಾಲವನ್ನು ನೀಡಲು ಮುಂದಾಗುವ ಮೂಲಕ ಜನರ ಹಾಗೂ ಸಂಘ,ಸಂಸ್ಥೆಗಳ ಆರ್ಥಿಕ  ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶಂಭು ಪೂಜಾರ, ಅಜ್ಜಯ್ಯ ಹಿರೇಮಠ, ಶ್ಯಾಮಸುಂದರ ಹಾಗೂ ಸ್ತ್ರೀ ಶಕ್ತಿ ಸಂಘದ ಮಹಿಳಾ ಸದಸ್ಯರು ಮತ್ತು ಕರುನಾಡ ಕೇಸರಿ ಸಂಸ್ಥೆಯ ಕಾರ್ಯಕರ್ತರು ಉಪಸ್ಥಿತರಿದ್ದರು.