ಪೌರತ್ವ ತಿದ್ದುಪಡಿ ಕಾಯ್ದೆಯ ಅರಿವು ಕಾರ್ಯಕ್ರಮ

ಲೋಕದರ್ಶನ ವರದಿ

ರಾಮದುರ್ಗ 10: ಪೌರತ್ವ ತಿದ್ದುಪಡಿ ಕಾಯ್ದೆಯು ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನಗಳಲ್ಲಿ ಧಾಮರ್ಿಕ ದೌರ್ಜನ್ಯಕ್ಕೊಳಗಾಗಿ ಆಶ್ರಯ ಬೇಡಿ ಭಾರತಕ್ಕೆ ಬಂದಿರುವ ಹಿಂದೂ, ಸಿಖ್, ಬೌದ್ದ, ಜೈನ್ ಮತ್ತು ಪಾಸರ್ಿ ಕ್ರಿಶ್ಚಿಯನ್ ಧರ್ಮದವರಿಗೆ ಭಾರತದ ಪೌರತ್ವವನ್ನು ನೀಡಿ ಅವರಿಗೆ ಸಮಾಜದಲ್ಲಿ ಗೌರವದಿಂದ ಬದುಕಲು ಸಕಲ ವ್ಯವಸ್ಥೆಯನ್ನು ನೀಡುವ ಕಾಯ್ದೆಯಾಗಿದೆ, ಪೌರತ್ವ ತಿದ್ದುಪಡಿ ಕಾಯ್ದೆಯು ಭಾರತೀಯ ಮುಸ್ಲಿಮರಿಗೆ ಹಾನಿಯುಂಟು ಮಡುವದಿಲ್ಲಾ ಎಂದು ರಾಜ್ಯ ಅಲ್ಪ ಸಂಖ್ಯಾತರ ನಿಗಮದ ಅಧ್ಯಕ್ಷ ಮಕ್ತಾರ ಪಠಾಣ ಹೇಳಿದರು.  

ನಗರದ ಮರಾಠ ಕಲ್ಯಾಣ ಮಂಟಪದಲ್ಲಿ ತಾಲೂಕ ಬಿಜೆಪಿ ಘಟಕ ಏರ್ಪಡಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಕುಡಚಿಯಲ್ಲಿ ದರಗಾಕ್ಕೆ 500 ಎಕರೆ ಜಮೀನ ನೀಡಿದ ಬಿಜಿಪಿ ಪಕ್ಷ ಮುಸ್ಲಿಂ ಧಮರ್ಿಯರ ಇತರ ಧರ್ಮದ ಕಾರ್ಯಗಳಿಗೆ ಅದರ ಹಣ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು. ಮುಸ್ಲಿಂ ಧಮರ್ಿಯರ ಏಳಿಗೆಗೆ ಹಲವಾರು ಯೋಜನೆ ರೂಪಿಸಲಾಗಿದೆ ಅದರಲ್ಲೊಂದು ತ್ರಿವಳಿ ತಲಾಖ ನಿಶೇಧ ಬಹು ಮುಖ್ಯವಾಗಿದೆ ಎಂದು ನುಡಿದರು.  

ಜಮಖಂಡಿಯ ಮಾಜಿ ಶಾಸಕ ಕುಲಕಣರ್ಿ ಮಾತನಾಡುತ್ತಾ ಕಾಂಗ್ರೆಸ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಇನ್ನು ಆಗಿಲ್ಲ ಹಾಗಾಗಿ ಕಾಂಗ್ರೆಸ್ ಪಕ್ಷ ಮುಳಿಗಿದ ಹಡಗದಂತಾಗಿದೆ, ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಮತಬ್ಯಾಂಕ್ ರಕ್ಷಿಸಿಕೊಳ್ಳುವ ಉದ್ದೇಶದಿಂದ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಸಮಾಜದಲ್ಲಿ ಆತಂಕ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ ತಾಲೂಕಿನಲ್ಲಿ ಮುಸ್ಲಿಂ ಧಮರ್ಿಯರಿಗೆ ಬೇಕಾದ ಸೌಲಭ್ಯಗಳನ್ನು ನೀಡಲು ಬಿಜೆಪಿ ಪಕ್ಷ ಬದ್ದವಾಗಿದೆ ಸುಳ್ಳು ವದಂತಿಗಳಿಗೆ ಕಿವಿ ಕೊಡಬಾರದು, ತಾಲೂಕಿ ಅಂಜುಮನ ಶಾಲೆ ಅನುಧಾನಕ್ಕೆ ಒಳಪಡಿಸಿದ್ದಲ್ಲದೆ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗಿದೆ, ಹಾಗಾಗಿ ಪೌರತ್ವ ಕಾಯ್ದೆಯ ಬಗ್ಗೆ ಮೆನೆ ಮನೆ ತೆರಳಿ ತಿಳುವಳಿಕೆ ನೀಡಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು  

ಬಿಜೆಪಿ ತಾಲೂಕ ಘಟಕದ ಅಧ್ಯಕ್ಷ ಜಿ ಜಿ ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡರಾದ ಮಲ್ಲಣ್ಣಾ ಯಾದವಾಡ,  ಜಿಲ್ಲಾ ಪಂಚಾಯತ ಸದಸ್ಯರಾದ ಮಾರುತಿ ತುಪ್ಪದ, ಶಿವಕ್ಕಾ ಬೆಳವಡಿ,  ಹಾಗೂ ಇತರರು ವೇದಿಕೆಯ ಮೇಲೆ ಇದ್ದರು. ವಿಜಯ ನಾಯ್ಕ ನಿರೂಪಿಸಿದರು, ಗಂಗಾಧರ ಬೋಸಲೆ ವಂದಿಸಿದರು.