ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಶಾಲಾ ಮಕ್ಕಳಿಂದ ಅರಿವು ಕಾರ್ಯಕ್ರಮ

ಲೋಕದರ್ಶನ ವರದಿ

ಶಿರಹಟ್ಟಿ: ಸಧೃಢವಾದ ಶರೀರದಲ್ಲಿ ಸಧೃಢವಾದ ಮನಸ್ಸು ಇರುತ್ತದೆ ಎಂಬ ನಾಣ್ಣುಡಿಯಂತೆ ಮುದ್ದು ಮಕ್ಕಳ ಮನಸ್ಸಿನಲ್ಲಿ ಯಾವುದೇ ಕಲ್ಮಶ ಇರುವುದಿಲ್ಲ, ಮಕ್ಕಳ ಮನಸ್ಸಿನಂತೆಯೇ ನಾವೆಲ್ಲರೂ ವಾಸಿಸುವ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿಟ್ಟುವಂತೆ ಪುಟ್ಟ ಕಂದಮ್ಮಗಳು ಸ್ವಚ್ಚ ಭಾರತದ ಕನಸನ್ನು ಹೊತ್ತು ಬೀದಿ ಬೀದಿಗಳಲ್ಲಿ ಪ್ಲಾಸ್ಟಿಕ್ ಉಪಯೋಗದಿಂದ ಆರೋಗ್ಯದ ಮೇಲೆ ಹಾನಿಯಾಗುವುದನ್ನು ತಪ್ಪಿಸುವದಕ್ಕಾಗಿ ಮುಕ್ತ ಭಾರತಕ್ಕಾಗಿ ಸಾರ್ವಜನಿಕರಲ್ಲಿ ಸ್ವಚ್ಚ ಹಾಗೂ ಸುಂದರ ಪರಿಸರ ನಿರ್ಮಾಣಕ್ಕಾಗಿ ಬಿಸಿನಲ್ಲಿಯೇ ಅರಿವು ಮೂಡಿಸುವ ಪ್ರಯತ್ನ ಮಾಡಿದರು.

ಈ ಕಾರ್ಯಕ್ರಮ ನಡೆದದ್ದು ತಾಲೂಕಿನ ಬೆಳ್ಳಟ್ಟಿ ಗ್ರಾಮದ ಅವತಾರ ಕಾನ್ವೆಂಟ್ ಶಾಲೆಯ ಪುಟ್ಟ ಪುಟ್ಟ ಕಂದಮ್ಮಗಳೊಂದಿಗೆ ಶಾಲಾ ಸಿಬ್ಬಂದಿಗಳು ಹಾಗೂ ಊರಿನ ಯುವಕರು ಸೇರಿ ಗ್ರಾಮ ಪಂಚಾಯಿತಿಯ ಸಹಯೋಗದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ಲಾಸ್ಟಿಕ್ ತ್ಯಜಿಸಿ ಆರೋಗ್ಯ ವೃದ್ಧಿಸಿ ಎಂದ ಘೋಷಣೆಯೊಂದಿಗೆ ಅರುವು ಮೂಡಿಸಿದ್ದಲ್ಲದೇ, ಮಕ್ಕಳೇ ಸೇರಿ ಕಾಗದದಿಂದ ತಯಾರಿಸಿದ ಬ್ಯಾಗುಗಳನ್ನು ತಾವೇ ಅವುಗಳನ್ನು ಜನರಿಗೆ ತೋರಿಸಿ ಅವುಗಳ ಉಪಯೋಗ ಹಾಗೂ ಧನಾತ್ಮಕ ಉಪಯೋಗಗಳ ಬಗ್ಗೆ ತಿಳಿಸಿಕೊಟ್ಟರು.

ಈ ಜಾಥಾದಲ್ಲಿ ಶಾಲೆಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತಿಮ್ಮರಡ್ಡಿ ಮರಡ್ಡಿ, ಸದಸ್ಯ ಮೋಹನ ಗುತ್ತೆಮ್ಮನವರ, ಅವತಾರ ಶಾಲೆಯ ಅಧ್ಯಕ್ಷ ನಾಗರಾಜ ಅಕ್ಕೂರ, ಶಾಲೆಯ ಮುಖ್ಯೋಪಾದ್ಯಾಯಿನಿ ಶ್ವೇತಾ ಯಳವತ್ತಿ ಹಾಗೂ ಶಾಲೆಯ ಸರ್ವ ಸಿಬ್ಬಂದಿ ಹಾಗೂ ನೂರಾರು ಮುದ್ದು ಮಕ್ಕಳು ಪಾಲ್ಗೊಂಡಿದ್ದರು.