ಬಾಗಲಕೋಟೆ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘಗಳ ಸಹಯೋಗದಲ್ಲಿ ಬಾಗಲಕೋಟೆ ಜಿಲ್ಲಾ ಕಾರಾಗೃಹದಲ್ಲಿ ಇತ್ತೀಚೆಗೆ ವಿಚಾರಾಧೀನ ಖೈದಿಗಳಿಗಾಗಿ ಮೂಲಭೂತ ಕರ್ತವ್ಯಗಳ ಜಾಗೃತಿ ಅಭಿಯಾನ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಹೇಮಲತಾ ಹುಲ್ಲೂರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರು ಹಲವಾರು ಕಾನೂನು ಪಂಡಿತರೊಡನೆ ಸೇರಿ ನಮ್ಮ ಭಾರತ ಸಂವಿಧಾನವನ್ನು ರಚಿಸಿದ್ದಾರೆ. ಸಂವಿಧಾನದಲ್ಲಿ ಹೇಳಿರುವ ಕರ್ತವ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಾಕಷ್ಟು ಸುಧಾರಣೆ ಕಾಣಬಹುದು ಎಂದರು. ಭಾರತದ ದಂಡ ಪ್ರಕ್ರಿಯಾ ಸಂಹಿತೆಯಲ್ಲಿ ಆಪಾದನೆ ರಾಜೀ ವಿಷಯ ಕುರಿತು ಸಹ ತಿಳಿ ಹೇಳಿವುದರ ಜೊತೆಗೆ ಖೈದಿಗಳಿಗೆ ಸಂವಿಧಾನ ಕುರಿತು ಪ್ರಮಾಣವಚನ ಭೋಧಿಸಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ವಕೀಲರಾದ ಆರ್.ಎಸ್.ಹಾವರಗಿ ಮಾತನಾಡಿ ಸಂವಿಧಾನದ ಮೂಲಭೂತ ಹಕ್ಕುಗಳು ಕುರಿತು ಹಾಗೂ ಅದರ ಅವಶ್ಯಕತೆ ಕುರಿತು ತಿಳಿಸಿದರು. ಸಂವಿಧಾನ ಇರುವದರಿಂದ ನಮಗೆಲ್ಲ ಚಚರ್ೆಗೆ ಅವಕಾಶವಿದೆ. ಸಂವಿಧಾನ ನಮಗೆ ಬದುಕುವ ಒಂದು ವಿಧಾನವನ್ನು ಕಲಿಸುತ್ತದೆ. ಹಿರಿಯರು ನಮಗೆ ಹೇಳಿರುವ ಕರ್ತವ್ಯಗಳೇ ನಮ್ಮ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳಾಗಿವೆ ಎಂದು ತಿಳಿಸಿದರು. ಇನ್ನೋರ್ವ ಉಪನ್ಯಾಸಕರಾಗಿ ಆಗಮಿಸಿದ್ದ ವಕೀಲ ಪಿ.ವಿ.ಶಿವನಗೌಡರ ಆಪಾಧನೆಯ ರಾಜೀ ದಂಡ ಪ್ರಕ್ರಿಯೆ ಸಂಹಿತೆ 1973ರ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರಾಗೃಹದ ಎಸ್.ವೈ.ಕಬ್ಬೂರ, ವಕೀಲರ ಸಂಘದ ಅಧ್ಯಕ್ಷ ವಿ.ಬಿ.ಚೌಕಿಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.