ಮಕ್ಕಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ

ಲೋಕದರ್ಶನ ವರದಿ

ಶಿರಹಟ್ಟಿ: ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಪಿಯುಸಿ ದ್ವಿತೀಯ ವರ್ಗದಿಂದ ಪ್ರಥಮ ಸ್ಥಾನದಲ್ಲಿ ಕುಮಾರಿ ಪಿಸಿ ಹವಾಲ್ದಾರ ಹಾಗೂ ದ್ವಿತೀಯ ಸ್ಥಾನದಲ್ಲಿ ಕುಮಾರ ಎಎಂ ಲೋಹಾರ ಹಾಗೂ ತೃತೀಯ ಸ್ಥಾನದಲ್ಲಿ ಎಂಎಸ್ ಬೆಳವಟಿಗಿ ಆಯ್ಕೆಗೊಂಡರು.

ಅದೇ ಪಿಯುಸಿ ಪ್ರಥಮ ವರ್ಗದ ವಿದ್ಯಾರ್ಥಿಗಳಾದ ಆರ್ಆರ್ ಹೆಗಡೆ ಪ್ರಥಮ, ಎಲ್ಎಸ್ ಗದುಗಿನ ದ್ವಿತೀಯ ಹಾಗೂ ಎಸ್ಎಂ ರಡ್ಡೇರ ತೃತೀಯ ಸ್ಥಾನಗಳನ್ನು ಗಳಿಸಿದರು. ಕಾಲೇಜು ಸಾಹಿತ್ಯ ಕಲರವ ಕಾರ್ಯಕ್ರಮದಲ್ಲಿ ಈ ಎಲ್ಲ ಪ್ರಶಸ್ತಿಯನ್ನು ಪಡೆದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.   

ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಹಾಂತೇಶ ಭಜಂತ್ರಿ, ಉಪನ್ಯಾಸಕಿ ಸುಧಾ ಹುಚ್ಚಣ್ಣವರ, ಪಿಎನ್ ಕುಲಕರ್ಣಿ , ಎಫ್ಎ ಬಾಬುಖಾನವರ, ಎಸ್ಎಸ್ ಕಾಳಗಿ, ಆರ್ಎಸ್ ಕಾಳಗಿ ಮತ್ತು ಎಲ್ಲ ಉಪನ್ಯಾಸಕ ವೃಂದ ಹಾಜರಿದ್ದರು.