ಪಿಡಿಓ ಜಮೀಲ್ ಅಹ್ಮದಗೆ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ

ಕೊಪ್ಪಳ 13: ಡಾ. ಸರ್.ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ ಹಾಗೂ ಸುರ್ವೆ  ಕಲ್ಚರಲ್ ಅಕಾಡಮಿ ವತಿಯಿಂದ ಬೆಂಗಳೂರಿನ ನಯನ ಕಲಾ ಭವನದಲ್ಲಿ ಜರುಗಿದ ರಾಜ್ಯ ಮಟ್ಟದ ಡಾ.ವಿ.ಕೃ.ಗೋಕಾಕ್ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಗೋಕಾಕ್ ವರದಿ ಒಂದು ಚಿಂತನೆ ಎಂಬ ವಿಚಾರ ಸಂಕೀರ್ಣದಲ್ಲಿ ಅವರ ಗ್ರಾಮೀಣ ಜನರ ಉತ್ತಮ ಸೇವೆಗಾಗಿ ಕರ್ನಾಟಕ  ವಿಕಾಶ ರತ್ನ ಪ್ರಶಸ್ತಿಯನ್ನು ಪಿಡಿಓ ಜಮೀಲ್ ಅಹ್ಮದಗೆ ಪ್ರದಾನ ಮಾಡಲಾಯಿತು. 

ಪಿಡಿಓ ಜಮೀಲ್ ಅಹ್ಮದ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಖೆಡಾ ಗ್ರಾಮ ಪಂಚಾಯತ್ಯಲ್ಲಿ ಪಿಡಿಓ ಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಇವರ ಕಾರ್ಯ ಮತ್ತು ಉತ್ತಮ ಸೇವೆ ಹಾಗೂ ಗ್ರಾಮೀಣಾಭಿವೃದ್ಧಿಗಾಗಿ ಕ್ಷೇತ್ರದಲ್ಲಿನ ಸೇವೆಗಾಗಿ ಸದರಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಘಟಕ ರಮೇಶ್ ಸುವರ್ೆ ಸಹಕಾರಿ ಮುಖಂಡ ಶೇಖರಗೌಡ ಮಾಲಿ ಪಾಟೀಲ್, ಚಲನಚಿತ್ರ ನಟರಾದ ಚಿಕ್ಕಮಾದು, ಚಿಕ್ಕಜಾಜುರು, ಮೀನಾ ಹಾಗೂ ಬ್ಯಾಂಕ್ ಜನಾರ್ಧನ್ ಮತ್ತು ನಿವೃತ್ತ ಅಧಿಕಾರಿ ಕೆ.ಮಲ್ಲಿನಾಥ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.