ನವ್ಯ ದಿಶಾ ಬಜ್ ಇಂಡಿಯಾ ಸಂಸ್ಥೆಯಿಂದ ಆಥರ್ಿಕ ಸಾಕ್ಷರತೆ ಮತ್ತು ವೃತ್ತಿ ಕೌಶಲ್ಯ ತರಬೇತಿ

ಲೋಕದರ್ಶನ ವರದಿ

ಬೆಳಗಾವಿ 15: ತಾಲೂಕಿನ ಹೊಸವಂಟಮುರಿ ಗ್ರಾಮ ಪಂಚಾಯತ ಅಧಿನದಲ್ಲಿ ಬರುವ ಗ್ರಾಮಗಳಲ್ಲಿ ನವ್ಯ ದಿಶಾ ಸಂಸ್ಥೆಯ ಸುಗ್ರಾಮ ಯೋಜನೆಯಡಿಯಲ್ಲಿ ಬಜ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹಣಕಾಸು ನಿರ್ವಹಣೆ, ಉದ್ಯಮ ಕೌಶಲ್ಯಗಳು, ಮತ್ತು ವಯಕ್ತಿಕ ಬೆಳವಣಿಗೆ ಕುರಿತಾದ ಆಥರ್ಿಕ ಸ್ವಾವಲಂಬನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಮಹಿಳಿಯರಿಗೆ ಹಣಕಾಸು ನಿರ್ವಹಣೆ ಬಗ್ಗೆ, ಪಯರ್ಾಯ ಆದಾಯ ಮೂಲವನ್ನು ಕಂಡಕೊಳ್ಳಲು, ಭವಷ್ಯತಿನಲ್ಲಿ ಉಧ್ಯಮ ಮತ್ತು ಸಣ್ಣ ಅಂಗಡಿ ವ್ಯಾಪಾರವನ್ನು ಮಾಡಲು ಬಜ್ ಇಂಡಿಯಾ ಸಂಸ್ಥೆಯ ತರಬೇತಿ ಕಾರ್ಯಕ್ರಮವು ಉಪಯುಕ್ತವಾಗಿದೆ. ಕಳೆದ ಒಂದು ವಾರಗಳಿಂದ ಹೊಸವಂಟಮುರಿ ಗ್ರಾಮ ಪಂಚಾಯತ ಅಧಿನದಲ್ಲಿ ಬರುವ ಗ್ರಾಮಗಳಾದ ಸುತಗಟ್ಟಿ, ಹೊಸವಂಟಮುರಿ, ಮಳ್ಳೊಳಿ,  ಉಕ್ಕಡ/ರಾಮದುರ್ಗ, ಮರಣಹೊಳಿ, ಹಾಲಬಾವಿ ಮತ್ತು  ಗ್ರಾಮಗಳ ಸ್ವ-ಸಹಾಯ ಸಂಘಗಳು, ಮಹಿಳಾ ಸಂಘಗಳು, ಸ್ತ್ರೀ ಶಕ್ತಿ ಸಂಘಗಳು ಮತ್ತು ಗ್ರಾಮ ಪಂಚಾಯತಿಯ ಮಹಿಳಾ ಸದಸ್ಯರುಗಳು ತರಬೇತಿಯ ಲಾಭವನ್ನು ಪಡೆದುಕೊಂಡರು ಈ ತರಬೇತಿಯಲ್ಲಿ 280 ಕ್ಕೂ ಅಧಿಕ ಮಹಿಳೆಯರು ತರಬೇತಿ ಪಡೆದಕೊಂಡರು. ಬಜ್ ಇಂಡಿಯಾ ಸಂಸ್ಥೆಯ ತರಬೇತುದಾರರಾದ ಗೋವರ್ದನ ಕೆ ಎಮ್, ನವ್ಯ ದಿಶಾ ಸಂಸ್ಥೆಯಿಂದ ನವ್ಯ ದಿಶಾ ಸುಗ್ರಾಮ ಯೋಜನಾ ವ್ಯವಸ್ಥಾಪಕ ಮಹಾದೇವ ಎಸ್ ಪಾಟೀಲ, ನವ್ಯ ದಿಶಾ ಸುಗ್ರಾಮ ಯೋಜನೆ ಅಭಿವೃದ್ಧಿ ಅಧಿಕಾರಿ ರಾಜಶೇಖರ ಮಠ ಮತ್ತು ನವ್ಯ ದಿಶಾ ಸುಗ್ರಾಮ ಯೋಜನೆ ಅಭಿವೃದ್ಧಿ ಅಧಿಕಾರಿ ಶಿವುಕುಮಾರ ಹಲ್ಯಾಳಿ, ಈ ವೇಳೆಯಲ್ಲಿ  ತರಬೇತಿ ಪಡೆದ ಸಂಘದ ಮಹಿಳಾ ಸದಸ್ಯರುಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಹೊಸವಂಟಮುರಿ ಗ್ರಾಮ ಪಂಚಾಯತ ಸದಸ್ಯರು ಈ ತರಬೇತಿಯಲ್ಲಿ ಉಸಸ್ಥಿತರಿದ್ದರು.