ಐದು ದಿನಗಳಾದರೂ ಬಾರದ ಕರೆಂಟ್‌..! ಕೇಳುವವರಿಲ್ಲ ನದಿ ತೀರದ ರೈತರ ಪರದಾಟ..!!

ಐದು ದಿನಗಳಾದರೂ ಬಾರದ ಕರೆಂಟ್‌..! ಕೇಳುವವರಿಲ್ಲ ನದಿ ತೀರದ ರೈತರ ಪರದಾಟ..!! Authorities are not responding; Arun Ganeshwadi alleges..!!!

ಅಧಿಕಾರಿಗಳು ಸ್ಪಂದಿಸುತ್ತಿಲ್ಲ; ಅರುಣ ಗಣೇಶವಾಡಿ ಆರೋಪ..!!! 

ಕಾಗವಾಡ 17 : ತಾಲೂಕಿನ ಜುಗೂಳ ಗ್ರಾಮದ ನದಿ ತೀರದ ವಿದ್ಯುತ್ ಸಂಪರ್ಕ ಕಳೆದ 5 ದಿನಗಳ ಹಿಂದೆ ಸುರಿದ ಭಾರಿ ಗಾಳಿ ಮಳೆಗೆ ಕಡಿದು ಹೋಗಿದ್ದು, ಇನ್ನೂವರೆಗೆ ರೀಪೆರಿಯಾದಗೇ ನದಿ ತೀರದ ರೈತರು ನಿತ್ಯ ಪರದಾಡುವಂತಾಗಿದೆ.

ಈ ಕುರಿತು ಹೆಸ್ಕಾಂ ಅಧಿಕಾರಿಗಳನ್ನು ಕೇಳಿದರೇ ಕೆಲಸಗಾರರು ಸಿಗುತ್ತಿಲ್ಲ. ಇಂದು ಬರುತ್ತೇವೆ. ನಾಳೆ ಬರುತ್ತೇವೆ. ಎಂದು ಸಬೂಬು ನೀಡಿ, ನುಣಚಿಕೊಳ್ಳುತ್ತಿದ್ದಾರೆ. ಅಲ್ಲದೇ ಕೆಲಸಗಾರರು ಸಿಗದೇ ಇದ್ದರೇ ನಾವು ಏನು ಮಾಡಲಿಕ್ಕಾಗುತ್ತದೆ. ಬಿದ್ದ ಕಂಬಗಳನ್ನು ನಾನೋಬ್ಬನೇ ನಿಲ್ಲಸಲು ಸಾಧ್ಯವೇ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆಂದು ಕಾಗವಾಡ ಬಿಜೆಪಿ ಮಂಡಲ ಅಧ್ಯಕ್ಷ ಅರುಣ ಗಣೇಶವಾಡಿ ಹೆಸ್ಕಾಂ ಅಧಿಕಾರಿಗಳ ನಡೆಗೆ ತೀವೃ ಕಳವಳ ವ್ಯಕ್ತಪಡಿಸಿದ್ದಾರೆ.ಅವರು, ರವಿವಾರ ದಿ. 17 ರಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಕಳೆದ 5 ದಿನಗಳಿಂದ ದಿನಾಲೂ ಸಂಬಂಧಪಟ್ಟ ಕಾಗವಾಡ ಹೆಸ್ಕಾಂ ಅಧಿಕಾರಿಗಳಿಗೆ ನಿರಂತರವಾಗಿ ಫೋನ್ ಮುಖಾಂತರ ಸಂಪರ್ಕಿಸಿ, ರೈತರ ಕಷ್ಟಗಳನ್ನು ವಿವರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲೂ ಕೂಡಾ ಫೋನ್ ಮಾಡಿದರೇ ಅದೇ ಉತ್ತರ ನೀಡುತ್ತಿದ್ದಾರೆ.

ಇದರಿಂದ ನದಿ ತೀರದಲ್ಲಿ ವಾಸವಾಗಿರುವ ಅನೇಕ ಕುಟಂಬಗಳಿಗೆ ವಿದ್ಯುತ್ ಇಲ್ಲದೇ ರಾತ್ರಿಗಳನ್ನು ಕತ್ತಲಯಲ್ಲೇ ಕಳೆಬೇಕಾಗಿದ್ದು, ವಿದ್ಯುತ್ ಇಲ್ಲದ ಕಾರಣ ನದಿ ದಡದ ನೀರಾವರಿ ಮೋಟಾರುಗಳು ಪ್ರಾರಂಭಗೊಳ್ಳದೇ ರೈತರು ತಮ್ಮ ಬೆಳೆಗಳಿಗೆ ನೀರು ಉಣಿಸಲು ಸಾಧ್ಯವಾಗದೇ ಬೆಳೆದ ಬೆಳೆಗಳು ಒಣಗುತ್ತಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ, ಸಮಸ್ಯೆಯನ್ನು ಕೂಡಲೇ ಇತ್ಯರ್ಥ ಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.ಈ ವೇಳೆ ಅನೇಕ ರೈತರು, ಜುಗೂಳ ಗ್ರಾಮಸ್ಥರು ಉಪಸ್ಥಿತರಿದ್ದರು