ಲೋಕದರ್ಶನ ವರದಿ
ಶಿರಹಟ್ಟಿ 12: ದೇಶದಲ್ಲಿ ತಲೆದೋರಿರುವ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಹಾಗೂ ರಾಜ್ಯ ಸಕರ್ಾರ ಎಷ್ಟೇ ಶ್ರಮ ವಹಿಸಿದರೂ ತಡೆಯಲಿಕ್ಕೆ ಆಗುತ್ತಿಲ್ಲ. ಈಗಿನ ಕಾಲದಲ್ಲಿ ಎಷ್ಟೇ ಉನ್ನತ ಪದವಿ ಹೊಂದಿದರೂ ಸಹ ನಿರುದ್ಯೋಗವನ್ನು ತಡೆಯಲು ಸಾಧ್ಯವಾಗದ ಕಾರಣ ಸ್ವಾವಲಂಬಿ ಜೀವನ ಹಾಗೂ ನಿರುದ್ಯೋಗ ನಿರ್ಮೂಲನೆ ಮಾಡಲು ಪ್ರತಿಯೊಬ್ಬರಿಗೂ ಆರ್ಥಿಕ ಸಾಕ್ಷರತೆಯ ಅರಿವು ಹೊಂದುವುದು ಮುಖ್ಯವಾಗಿದೆ ಎಂದು ತಾಲೂಕಾ ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಹಿರಿಯ ಸಮಾಲೋಚಕ ಎಲ್.ಬಿ ಪಾಟೀಲ ಕರೆ ನೀಡಿದರು.
ಅವರು ಸ್ಥಳೀಯ ಆಸರೆ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯಲ್ಲಿ ಕರ್ನಾಟಕ ವಿಕಾಸ ಬ್ಯಾಂಕ್ ಅವರವತಿಯಿಂದ ಎಮ್ಎಸ್ಎಂಇ ಯೋಜನೆಯಡಿ ಆರ್ಥಿಕ ಸಾಕ್ಷರತಾ ತಿಳುವಳಿಕಾ ಶಿಬಿರದ ಬಗ್ಗೆ ವಿವರಿಸಿ ಮಾತನಾಡುತ್ತಾ, ನಿರುದ್ಯೋಗ ನಿಮರ್ೂಲನೆಗೆ ಆರ್ಬಿಐ ವತಿಯಿಂದ ಅತೀ ಸಣ್ಣ ಮತ್ತು ಮಧ್ಯಮ ಗಾತ್ರ ಸಂಸ್ಥೆಗಳಿಗೆ ಎಮ್ಎಸ್ಇ ಯೋಜನೆಯಡಿ 10ಲಕ್ಷರೂಗಳವರೆಗೆ ಜಾಮೀನು ರಹಿತ ಸಾಲ ಸೌಲಭ್ಯ ಹಾಗೂ ಭಾರತ ಸರ್ಕಾರದಿಂದ ಅತೀ ಸಣ್ಣ ಮತ್ತು ಮಧ್ಯಮ ಗಾತ್ರ ಸಂಸ್ಥೆಗಳಿಗೆ ಎಮ್ಎಸ್ಇ ಯೋಜನೆಯಡಿ 2 ಕೋಟಿ ರೂಗಳವರೆಗೆ ಸಾಲ ಖಾತ್ರಿ ನೀಡಲಾಗುವುದು ಎಂದು ತಿಳಿಸಿದರು.
ಕನರ್ಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಫೀಲ್ಡ್ ಆಫೀಸರ್ ಎ.ಎನ್.ಗುಡಿಮನಿ ಮಾತನಾಡಿ, ಆಸರೆ ಸಂಸ್ಥೆಯು ನಿರುದ್ಯೋಗಿ ಯುವಕ ಯುವತಿಯರಿಗಾಗಿ ಉಚಿತ ತರಬೇತಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಷಯವಾಗಿದೆ, ಈ ಸಂಸ್ಥೆಯಡಿ ತರಬೇತಿ ಪಡೆದ ನಂತರ ಮಷೀನ್ ಖರೀದಿಸಲು ಅವಶ್ಯಕತೆ ಇರುವ ಎಲ್ಲರಿಗೂ ನಮ್ಮ ಬ್ಯಾಂಕಿನಿಂದ ಸಾಲ ಸೌಲಭ್ಯವನ್ನು ಕಲ್ಪಿಸಿ ನಿರುದ್ಯೋಗಿಗಳನ್ನು ಸ್ವಾವಲಂಬಿಗಳನ್ನಾಗಿಸಲು ಅವರಿಗೆ ಒಂದು ಉದ್ಯೋಗ ಮಾಡಿಕೊಂಡು ಹೋಗುವಂತೆ ಕಾರ್ಯ ನಿರ್ವಹಿಸುತ್ತೇನೆ ಎಂದು ಶಿಬಿರಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿದರು.
ಈ ಕಾರ್ಯಕ್ರಮದಲ್ಲಿ ತಾಲೂಕಾ ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕಿರಿಯ ಸಮಾಲೋಚಕ ವೀರನಗೌಡ ಅಯ್ಯನಗೌಡ್ರ, ಆಸರೆ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಶಿರಸಂಗಿ, ಶಿಕ್ಷಕರಾದ ಹಸನಸಾಬ ಕಿಲ್ಲೇದಾರ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ವ್ಯವಹಾರ ಪ್ರತಿನಿಧಿಗಳಾದ ಪ್ರಕಾಶ ಮಾಂಡ್ರೆ, ಪ್ರಭುಗೌಡ ಪಾಟೀಲ, ವಿನಾಯಕ ಕುಲಕರ್ಣಿ, ಡಿ.ಸಿ ಪಾಟೀಲ, ಮೃತ್ಯುಂಜಯ ಕಪ್ಪತ್ತನವರ ಹಾಗೂ ಸಂಸ್ಥೆಯ ಶಿಬಿರಾಥರ್ಿಗಳು ಉಪಸ್ಥಿತರಿದ್ದರು.