ಲೋಕದರ್ಶನ ವರದಿ
ಬಾಗಲಕೋಟೆ 9: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಆಯುಷ್ಮಾನ ಭಾರತ-ಆರೋಗ್ಯ ಕನರ್ಾಟಕ ಯೋಜನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಂಗಳವಾರ ಚಾಲನೆ ನೀಡಿದರು.
ನಂತರ ಜಿಲ್ಲಾ ಆಸ್ಪತ್ರೆಗೆ ನೀಡಿದ ಹೊಸ ಅಂಬುಲೇನ್ಸ್ ವಾಹನವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಆಯುಷ್ಮಾನ ಭಾರತ ಆರೋಗ್ಯ ಯೋಜನೆಯಿಂದ ಪ್ರಾಥಮಿಕ, ಸಾಮಾನ್ಯ ದ್ವೀತಿಯ, ಸಂಕೀರ್ಣ ದ್ವಿತೀಯ, ತೃತೀಯ ಹಾಗೂ ತುತರ್ು ಹಂತದ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ರೋಗಿಗಳನ್ನು ಅರ್ಹತಾ ರೋಗಿಗಳು ಮತ್ತು ಸಾಮಾನ್ಯ ರೋಗಿಗಳು ಎಂದು ವರ್ಗಗಳಾಗಿ ವಿಂಗಡಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಬಿಪಿಎಲ್ ಕಾರ್ಡ ಹೊಂದಿದ ಅರ್ಹತಾ ರೋಗಿಗಳಿಗೆ ವರ್ಷಕ್ಕೆ 5 ಲಕ್ಷಗಳ ವರೆಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಎಪಿಎಲ್ ಕಾರ್ಡ ಹೊಂದಿದ ಸಾಮಾನ್ಯ ರೋಗಿಗಳಿಗೆ ಪ್ಯಾಕೇಜ ದರದ ಶೇ.30 ರಷ್ಟು ಇದ್ದು, ಸಹ ಪಾವತಿ ಆಧಾರದ ಮೇಲೆ ಒಟ್ಟಾರೆ ವಾಷರ್ಿಕ ಪ್ರತಿ ಕುಟುಂಬಕ್ಕೆ ರೂ.1.50 ಲಕ್ಷ ಹಾಗೂ ಒಂದು ಕುಟುಂಬದಲ್ಲಿ 5 ಜನರಿಗೆ ಮಾತ್ರ ಸೌಲಭ್ಯ ಪಡೆಯಲು ಅವಕಾಶವಿದ್ದು, ಸಾರ್ವಜನಿಕರುಗೀ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ಆರೋಗ್ಯ ಮಿತ್ರದ ಜಿಲ್ಲಾ ಸಂಚಾಲಕ ಸಂಗಮೇಶ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು