ಆಸ್ಟ್ರೇಲಿಯನ್ ಓಪನ್: ಹಲೆಪ್, ಮುಗುರುಜಾ ಸೆಮೀಸ್ ಗೆ

ಮೆಲ್ಬೊರ್ನ್, ಜ.29 :     ವಿಶ್ವದ ಸ್ಟಾರ್ ಆಟಗಾರ ಸಿಮೋನ್ ಹಲೆಪ್ ಹಾಗೂ ಜರ್ಮನಿಯ ಗಾರ್ಬಿನ್ ಮುಗುರುಜಾ ಅವರು ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲ್ಯಾಮ್ ಟೆನಿಸ್ ಟೂರ್ನಿ ಸೆಮಿಫೈನಲ್ಸ್ ಗೆ ಅರ್ಹತೆ ಪಡೆದಿದ್ದಾರೆ.  

ಬುಧವಾರ ರೇಡ್ ಲಾವೇರ್ ಅರೇನಾದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಹಾಲೆಪ್ 6-1, 6-1 ರಿಂದ ಆನೆಟ್ ಕೊಂಟಾವಿಟ್ ಅವರನ್ನು 53 ನಿಮಿಷದ ಕಾದಾಟದಲ್ಲಿ ಮಣಿಸಿ ಉಪಾಂತ್ಯ ಪ್ರವೇಶಿಸಿದರು. ಎರಡು ನೇರ ಸೆಟ್ ಗಳಲ್ಲಿ ಮಣಿಸಿದ ಹಾಲೆಪ್ ಅಬ್ಬರಿಸಿದರು. 

ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಓಪನ್ ಗೆದ್ದಿರುವ ಹಲೆಪ್ ಮೊದಲ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಚಾಂಪಿಯನ್ ಪಟ್ಟಕ್ಕೆ ಏರುವ ಕನಸು ಕಾಣುತ್ತಿದ್ದಾರೆ. 

ಜರ್ಮನಿಯ ಸ್ಟಾರ್ ಆಟಗಾರ್ತಿ ಗಾರ್ಬಿನ್ ಮುಗುರುಜಾ 7-5, 6-3 ರಿಂದ ರಷ್ಯಾದ ಅನಸ್ತಾಸಿಯಾ ಅವರನ್ನು ಸೋಲಿಸಿದರು. 2016ರಲ್ಲಿ ಫ್ರೆಂಚ್ ಓಪನ್, 2017ರಲ್ಲಿ ವಿಂಬಲ್ಡನ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ಮುಗುರುಜಾ ಇದೇ ಮೊದಲ ಬಾರಿಗೆ ಟೂರ್ನಿಯ ಸೆಮಿಫೈನಲ್ಸ್ ಗೆ ಲಗ್ಗೆ ಇಟ್ಟಿದ್ದಾರೆ.