ಭಾರತ ವಿರುದ್ಧದ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಮಾರ್ನಸ್‌ ಲಾಬುಶೇನ್‌ಗೆ ಚೊಚ್ಚಲ ಅವಕಾಶ

ಮೆಲ್ಬೋರ್ನ್, ಡಿ 17 ಟೆಸ್ಟ್ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರುತ್ತಿರುವ ಮಾರ್ನಸ್‌ ಲಾಬುಶೇನ್‌ ಅವರು ಮುಂದಿನ ತಿಂಗಳ ನಡೆಯುವ ಭಾರತ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೆ 14 ಸದಸ್ಯರ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.25ರ ಹರೆಯದ ಮಾರ್ನಸ್‌ ಲಾಬುಶೇನ್ ಅವರು ಆಸ್ಟ್ರೇಲಿಯಾ ಪರ ಇದುವರೆಗೂ ಸೀಮಿತ ಓವರ್‌ ಗಳ ಮಾದರಿಯಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ ನಲ್ಲಿ ರನ್ ಹೊಳೆ ಹರಿಸುತ್ತಿದ್ದಾರೆ. ಟೆಸ್ಟ್ ಇನಿಂಗ್ಸ್‌ಗಳಲ್ಲಿ ಸತತ ಮೂರು 150 ರನ್‌ ಗಳಿಸಿರುವ ಪಾಕಿಸ್ತಾನದ ಜಹೀರ್ ಅಬ್ಬಾಸ್‌ ಹಾಗೂ ಮುದಾಸರ್ ನಝರ್ ಅವರ ಎಲೈಟ್‌ ಕ್ಲಬ್‌ ಸೇರಿವಲ್ಲಿ ಲಾಬುಸೇನ್‌ ಕೊದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದ್ದರು. ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 296 ರನ್‌ ಗಳಿಂದ ಜಯ ಸಾಧಿಸಿತ್ತು.ಅನುಭವಿಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್‌ ಸ್ಟಾರ್ಕ್ ಹಾಗೂ ಜೋಶ್ ಹೇಜಲ್‌ವುಡ್ ಅವರೊಂದಿಗೆ ಯುವ ವೇಗಿಗಳಾದ ಸೀನ್ ಅಬ್ಬಾಟ್ ಮತ್ತು ಕೇನ್ ರಿಚರ್ಡ್‌ಸನ್‌ ಅವರು ಸೇರ್ಪಡೆಯಾಗಲಿದ್ದಾರೆ. ಆ್ಯಡಂ ಝಂಪಾ ಹಾಗೂ ಆ್ಯಸ್ಟನ್‌ ಅಗರ್ ಸ್ಪಿನ್‌ ಜವಾಬ್ದಾರಿ ತೆಗೆದುಕೊಳ್ಳಲ್ಲಿದ್ದಾರೆ. ಐಸಿಸಿ ವಿಶ್ವಕಪ್‌ ಮುಗಿದಾಗಿನಿಂದಲೂ ಇವರಿಬ್ಬರೇ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಸ್ಪಿನ್‌ ಹೊಣೆ ಹೊತ್ತಿದ್ದಾರೆ.ಮೊದಲನೇ ಏಕದಿನ ಪಂದ್ಯ ಜನವರಿ 14 ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜನವರಿ 17 ಮತ್ತು 19 ರಂದು ರಾಜ್‌ಕೋಟ್‌ ಹಾಗೂ ಬೆಂಗಳೂರಿನಲ್ಲಿ ನಡೆಯಿದೆ.ಆಸ್ಟ್ರೇಲಿಯಾ ಏಕದಿನ ತಂಡ: ಆ್ಯರೋನ್ ಪಿಂಚ್ (ನಾಯಕ), ಸೀನ್ ಅಬ್ಬಾಟ್, ಆಸ್ಟನ್ ಅಗರ್, ಅಲೆಕ್ಸ್ ಕ್ಯಾರಿ(ಉಪ ನಾಯಕ), ಪ್ಯಾಟ್ ಕಮಿನ್ಸ್(ಉಪ ನಾಯಕ), ಪೀಟರ್ ಹ್ಯಾಂಡ್ಸ್‌ಕೊಂಬ್, ಜೋಶ್ ಹೇಜಲ್‌ವುಡ್, ಮಾರ್ನಸ್ ಲಾಬುಶೇನ್, ಕೇನ್‌ ರಿಚರ್ಡ್‌ಸನ್‌, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಆ್ಯಸ್ಟನ್ ಟರ್ನರ್‌, ಡೇವಿಡ್ ವಾರ್ನರ್‌, ಆ್ಯಡಂ ಝಂಪಾ.ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯಕ್ಕೆ ಗಾಯಾಳು ಜೋಶ್‌ ಹೇಜಲ್‌ವುಡ್ ಬದಲಿಗೆ ಪೀಟರ್ ಸಿಡ್ಲೆ ಅವರಿಗೆ ಅವಕಾಶ ನೀಡಲಾಗಿದೆ.ಆಸ್ಟ್ರೇಲಿಯಾ ಟೆಸ್ಟ್‌ ತಂಡ: ಟಿಮ್ ಪೈನ್ (ನಾಯಕ), ಜೋ ಬರ್ನ್ಸ್, ಪ್ಯಾಟ್‌ ಕಮಿನ್ಸ್‌(ಉಪ ನಾಯಕ), ಪೀಟರ್‌ ಸಿಡ್ಲೆ, ಟ್ರಾವಿಸ್ ಹೆಡ್(ಉಪ ನಾಯಕ), ಮಾರ್ನಸ್‌ ಲಾಬುಶೇನ್, ನಥಾನ್ ಲಿಯಾನ್, ಮಿಚೆಲ್‌ ನೇಸರ್, ಜೇಮಸ್‌ ಪ್ಯಾಟಿನ್ಸನ್, ಸ್ಟೀವನ್ ಸ್ಮಿತ್, ಮಿಚೆಲ್‌ ಸ್ಟಾರ್ಕ್‌, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್.