ಮಹಿಳಾ ಐಸಿಸಿ ಟಿ -20 ವಿಶ್ವಕಪ್ ಪ್ರಶಸ್ತಿ ಮೊತ್ತ ಹೆಚ್ಚಿಸಿದ ಆಸ್ಟ್ರೇಲಿಯಾ

ಮೆಲ್ಬೋನರ್್ , ಅ 15:       ಮುಂದಿನ ಆಸ್ಟ್ರೇಲಿಯಾದಲ್ಲಿ ನಡೆಯುವ ಮಹಿಳಾ ಟಿ-20 ವಿಶ್ವಕಪ್ನ ಪ್ರಶಸ್ತಿ ನಗದು ಬಹುಮಾನದ ಮೊತ್ತವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ. 

ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ಜರುಗುವ ಮಹಿಳೆಯರ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ನಗದು ಬಹುಮಾನದ ಮೊತ್ತವನ್ನು ಶೇ. 320 ರಷ್ಟು ಏರಿಕೆ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಪ್ರಕಟಿಸಿದೆ. ಇದರೊಂದಿಗೆ ಚಾಂಪಿಯನ್ ತಂಡ ಒಂದು ದಶಲಕ್ಷ ಯುಎಸ್ ಡಾಲರ್ ಮೊತ್ತವನ್ನು ಪಡೆಯಲಿದೆ. 

ಪುರುಷರ ಐಸಿಸಿ ಟಿ-20 ವಿಶ್ವಕಪ್ ಚಾಂಪಿಯನ್ ತಂಡ ಯುಎಸ್ ಡಾಲರ್ 1.6 ದಶಲಕ್ಷ ಯುಎಸ್ ಡಾಲರ್ ಮೊತ್ತವನ್ನು ಪಡೆಯಲಿದೆ. ಮುಂದಿನ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವನಿತೆಯರು ಚಾಂಪಿಯನ್ನಾದರೆ ತಂಡಕ್ಕೆ ಯುಎಸ್ ಡಾಲರ್ 600.000 ನೀಡಲಾಗುವುದು ಎಂದು ಪ್ರಕಟಿಸಿದೆ. 

ಮುಂದಿನ ವರ್ಷ ನಡೆಯುವ ಐಸಿಸಿ ಟಿ-20 ವಿಶ್ವಕಪ್ ನಿಂದ ಪುರುಷರ ಹಾಗೂ ಮಹಿಳೆಯರ ಎರಡೂ ತಂಡಗಳಿಗೂ ಪ್ರಶಸ್ತಿ ಮೊತ್ತವನ್ನು ಸಮನಾಗಿ ವಿತರಿಸಲು ನಿರ್ಧರಿಸಲಾಗಿದೆ. ಗುಂಪು ಹಂತದ, ಸೆಮಿಫೈನಲ್ ಹಾಗೂ ಫೈನಲ್ ಸೇರಿ ಪ್ರಶಸ್ತಿ ಮೊತ್ತದಲ್ಲಿ ಎರಡೂ ತಂಡಗಳಿಗೂ ಸಮನಾಗಿ ಹಂಚಿ ಮಾಡಲಾಗುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸಿಇಓ ಕೆವಿನ್ ರಾಬಟ್ರ್ಸ ತಿಳಿಸಿದ್ದಾರೆ.