ಆಸ್ಟ್ರೇಲಿಯಾ ಓಪನ್: ಶರಪೋವಾಗೆ ವೈಲ್ಡ್ ಕಾರ್ಡ್

ಸಿಡ್ನಿ, ಜ.8 2008ರಲ್ಲಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ರಷ್ಯಾದ ಮಾರಿಯಾ ಶರಪೋವಾ ಅವರಿಗೆ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾಮ್ ಟೆನಿಸ್ ಟೂನರ್ಿಯಲ್ಲಿ ವೈಲ್ಡ್ ಕಾರ್ಡ್ ನೀಡಲಾಗಿದೆ. 2019 ರಲ್ಲಿ ಗಾಯ ಹಾಗೂ ಕಳಪೆ ಫಾರ್ಮಿಕ್ನ್ದ ಬಳಲಿದ ಶರಪೋವಾ ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದಾರೆ. ಸದ್ಯ ಅವರು 147 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದರೆ, ಆಸ್ಟ್ರೇಲಿಯನ್ ಓಪನ್ಗಾಗಿ ವೈಲ್ಡ್ ಕಾರ್ಡ್ ನೀಡುವ ಮೂಲಕ ನೇರ ಪ್ರವೇಶ ನೀಡಲಾಗಿದೆ. ಮಾಜಿ ನಂಬರ್ ಒನ್ ಆಟಗಾರ್ತಿ ಶರಪೋವಾ ಅವರಿಗೆ ಕಳೆದ ವಾರ ಬ್ರಿಸ್ಬೇನ್ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ವೈಲ್ಡ್ ಕಾರ್ಡ್ ನೀಡಲಾಗಿತ್ತು. ಆದರೆ ಮೊದಲ ಸುತ್ತಿನಲ್ಲಿ ನಿರಾಸೆ ಹೊಂದಿದ್ದರು. ಮೆಲ್ಬೋರ್ನ್ ನಲ್ಲಿ ನಡೆಯಲಿರುವ ಗ್ರ್ಯಾನ್ ಸ್ಲ್ಯಾಮ್ ನಲ್ಲಿ ಇವರನ್ನು ಸಹ ಸ್ಟಾರ್ ಆಟಗಾರ್ತಿ ಎಂದು ಪರಿಗಣಿಸಲಾಗಿದೆ. ಟೂರ್ನಮೆಂಟ್ ವೆಬ್ಸೈಟ್ನಲ್ಲಿ ಶರಪೋವಾ ಅವರಿಗೆ ವೈಲ್ಡ್ ಕಾರ್ಡ್ ನೀಡಿದ್ದರ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ. ಭುಜದ ಗಾಯದಿಂದಾಗಿ ಶರಪೋವಾ ದೀರ್ಘಕಾಲದವರೆಗೆ ಟೆನಿಸ್ನಿಂದ ದೂರ ಉಳದಿದ್ದರು.