ಆಸ್ಟ್ರೇಲಿಯಾ ಓಪನ್:ಮೂರನೇ ಸುತ್ತಿಗೆ ಪ್ಲಿಸ್ಕೋವಾ-ಮೆಡ್ವೆಡೆವ್

ಮೆಲ್ಬೋರ್ನ್, ಜ 23,ಡೇನಿಯಲ್ ಮೆಡ್ವೆಡೆವ್ ಹಾಗೂ ಕರೋಲಿನಾ ಪ್ಲಿಸ್ಕೋವಾ ಅವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಪ್ರತ್ಯೇಕ ವಿಭಾಗಗಳಲ್ಲಿ ಮೂರನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ.ವಿಶ್ವದ ಎರಡನೇ ಶ್ರೇಯಾಂಕಿತೆ ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾ ಅವರು ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ 6-3, 6-3 ಅಂತರದಲ್ಲಿ ಲುರಾ ಸಿಗ್ಮಂಡ್ ವಿರುದ್ಧ ಗೆಲುವಿನ ನಗೆ ಬೀರಿದರು. ಆ ಮೂಲಕ ತಮ್ಮ ವೃತ್ತಿ ಜೀವನದ ಚೊಚ್ಚಲ ಗ್ರ್ಯಾನ್ ಸ್ಲ್ಯಾಮ್ ಪಯಣ ಮುಂದುವರಿಸಿದರು.

ಆರಂಭಿಕ ಸುತ್ತಿನ ಪಂದ್ಯದಲ್ಲಿ ಇವರು ಕ್ರಿಸ್ಟಿನಾ ಮ್ಲಾಡೆನೋವಿಚ್ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದರು. ಪುರುಷರ ಸಿಂಗಲ್ಸ್ ಎರಡನೇ ಸುತ್ತಿನ ಹಣಾಹಣಿಯಲ್ಲಿ ಕಠಿಣ ಹೋರಾಟ ನಡೆಸಿ 7-5, 6-1, 6-3 ಅಂತರದಲ್ಲಿ ಪೆಡ್ರೊ ಮಾರ್ಟಿನೆಜ್ ವಿರುದ್ಧ ಗೆದ್ದು ಬೀಗಿದರು. ಆ ಮೂಲಕ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದರು.ಮೊದಲ ಸೆಟ್ ನಲ್ಲಿ ಪೆಡ್ರೊ ವಿರುದ್ಧ ಕಠಿಣ ಸವಾಲು ಎದುರಿಸಿ ಗೆದ್ದಿದ್ದ ಮೆಡ್ವೆಡೆವ್ ಅವರಿಗೆ ಎರಡು ಹಾಗೂ ಅಂತಿಮ ಸೆಟ್ ಗಳಲ್ಲಿ ಸುಳಭವಾಗಿ ಗೆಲುವಿನ ನಗೆ ಬೀರಿದ್ದರು.ಇಂದು ತಡವಾಗಿ ಅಲೆಕ್ಸಾಂಡರ್ ಜ್ವೆರೆವ್, ರಫೆಲ್ ನಡಾಲ್ ಹಾಗೂ ಸಿಮೋನಾ ಹಲೆಪ್ ಅವರು ಎರಡನೇ ಸುತ್ತಿನ ಪ್ರತ್ಯೇಕ ಪಂದ್ಯಗಳಲ್ಲಿ ಸೆಣಸಲಿದ್ದಾರೆ. ಮಾರ್ಗರೇಟ್ ಅಂಗಳದಲ್ಲಿ ಸ್ಟ್ಯಾನ್ ವಾವ್ರಿಂಕ ಹಾಗೂ ಎಲೀನಾ ಸ್ಟಿಟೋಲಿನಾ ಇತರ ಪಂದ್ಯಗಳಲ್ಲಿ ಆಡಲಿದ್ದಾರೆ.