ನವದೆಹಲಿ, ಜೂನ್ 26, ಫಿಫಾ ಮಹಿಳಾ ಫುಟ್ಬಾಲ್ ವಿಶ್ವಕಪ್ 2023 ಪಂದ್ಯಾವಳಿಯನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿಯಾಗಿ ಆಯೋಜಿಸಲಿವೆ. ಫಿಫಾ ನಿರ್ಧಾರವನ್ನು ಎರಡೂ ದೇಶಗಳ ನಾಯಕರು ಸ್ವಾಗತಿಸಿದ್ದು, ಈ ನಿರ್ಧಾರವನ್ನು ಐತಿಹಾಸಿಕ ಎಂದು ಕರೆದಿದ್ದಾರೆ.ಮಹಿಳಾ ಫುಟ್ಬಾಲ್ ವಿಶ್ವಕಪ್ 2023 ಕ್ಕೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ಆತಿಥ್ಯ ವಹಿಸುವ ನಿರ್ಧಾರವನ್ನು ಪ್ರಕಟಿಸಿದ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ, ಜಂಟಿ ಆತಿಥ್ಯ ಪಂದ್ಯಾವಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಮತ್ತು ಮಹಿಳಾ ಫುಟ್ಬಾಲ್ ನ ಅಭಿವೃದ್ಧಿಗೆ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು.ಕೊಲಂಬಿಯಾ, ಜಪಾನ್, ಬ್ರೆಜಿಲ್ ಮತ್ತು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿಯಾಗಿ ಪಂದ್ಯಾವಳಿ ಆಯೋಜಿಸಲು ಮುಂದಾಗಿದ್ದವು. ಬ್ರೆಜಿಲ್ ಮೊದಲು ಸ್ಪರ್ಧೆಯಿಂದ ಹಿಂದೆ ಸರಿದೆತ್ತು. ಜಪಾನ್ ಸೋಮವಾರ ತನ್ನ ಹಕ್ಕನ್ನು ಹಿಂತೆಗೆದುಕೊಂಡಿತು. ಜಪಾನ್ ಹಿಂದೆ ಸರಿದ ನಂತರ, ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಮತ್ತು ಕೊಲಂಬಿಯಾ ನಡುವೆ ಬಿಡ್ ಸಂಕುಚಿತಗೊಂಡಿತು. ಶುಕ್ರವಾರ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಫಿಫಾ ಕೌನ್ಸಿಲ್ ಸಭೆಯಲ್ಲಿ, 2023 ರ ವಿಶ್ವಕಪ್‌ಗೆ ಆತಿಥ್ಯ ವಹಿಸಲು ಮತದಾನ ನಡೆಯಿತು, ಇದರಲ್ಲಿ ಉಭಯ ದೇಶಗಳು ಕೊಲಂಬಿಯಾವನ್ನು 22–13 ಅಂತರದಿಂದ ಸೋಲಿಸಿ ಜಂಟಿ ಆಇಥ್ಯ ಪಡೆದಿವೆ.ಫುಟ್ಬಾಲ್ ಫೆಡರೇಷನ್‌ಗಳನ್ನು ಹೊಂದಿರುವ ಎರಡು ದೇಶಗಳು ವಿಶ್ವಕಪ್‌ಗೆ ಆತಿಥ್ಯ ವಹಿಸುವುದು ಇತಿಹಾಸದಲ್ಲಿ ಇದೇ ಮೊದಲು. ಆಸ್ಟ್ರೇಲಿಯಾ ಏಷ್ಯನ್ ಫುಟ್ಬಾಲ್ ಫೆಡರೇಶನ್ (ಎಎಫ್‌ಸಿ) ಗೆ ಸೇರಿದ್ದು, ನ್ಯೂಜಿಲೆಂಡ್ ಒಸಿಯಾನಾ ಫುಟ್‌ಬಾಲ್ ಫೆಡರೇಶನ್ (ಒಎಫ್‌ಸಿ) ಯೊಂದಿಗೆ ಸಂಬಂಧ ಹೊಂದಿದೆ.
ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಅರ್ಡೆರ್ನ್ ಅವರು ಶುಕ್ರವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯು ಮಹಿಳಾ ಕ್ರೀಡೆಗಳ ವಿಷಯದಲ್ಲಿ ಫಿಫಾ ನಿರ್ಧಾರವನ್ನು ಐತಿಹಾಸಿಕ ಎಂದು ಹೇಳಿದೆ. ಜಂಟಿ ಹೇಳಿಕೆಯಲ್ಲಿ, ಉಭಯ ದೇಶಗಳ ನಾಯಕರು ಫುಟ್ಬಾಲ್ ಮಹಿಳಾ ವಿಶ್ವಕಪ್ ಅನ್ನು ಇದುವರೆಗಿನ ಅತಿದೊಡ್ಡ ವಿಶ್ವಕಪ್ ಸ್ಪರ್ಧೆಯನ್ನಾಗಿ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ, ಕೊರೊನಾ ವೈರಸ್ (COVID-19) ಸಾಂಕ್ರಾಮಿಕದಿಂದ ಚೇತರಿಸಿಕೊಳ್ಳುತ್ತಿರುವ ಉಭಯ ದೇಶಗಳು ಈ ಟೂರ್ನಿ ಜಂಟಿ ಆತಿಥ್ಯ ಪಡೆಯುವುದು ಫುಟ್ಬಾಲ್ ಪ್ರಿಯರಿಗೆ ಮತ್ತು ಕ್ರೀಡಾ ಉತ್ಸಾಹಿಗಳಿಗೆ ಒಳ್ಳೆಯ ಸುದ್ದಿ” ಎಂದಿದ್ದಾರೆ.