ಫಿಫಾ ಮಹಿಳಾ ವಿಶ್ವಕಪ್‌ಗೆ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಜಂಟಿ ಬಿಡ್‌ ಸಲ್ಲಿಕೆ

ಸಿಡ್ನಿ,13 ಮುಂಬರುವ 2023 ರ ಫಿಫಾ ಮಹಿಳಾ ವಿಶ್ವಕಪ್ ಆಯೋಜನೆಗೆ ಸಹ-ಆತಿಥ್ಯ ವಹಿಸುವ ಬಗ್ಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಶುಕ್ರವಾರ ಪ್ರಸ್ತಾಪ ಮುಂದಿಟ್ಟಿದೆ. ಜತೆಗೆ,ಎರಡೂ ರಾಷ್ಟ್ರಗಳು ಏಷ್ಯಾ ಮತ್ತು ಓಷಿಯಾನಿಯಾದ್ಯಂತ ಮಹಿಳಾ ಫುಟ್ಬಾಲ್‌ ಅನ್ನು ಬಲಗೊಳಿಸುವ ಭರವಸೆ ನೀಡಿವೆ. 32 ರಾಷ್ಟ್ರಗಳು ಭಾಗವಹಿಸುವ ಮಹಿಳಾ ಫಿಫಾ ವಿಶ್ವಕಪ್ ಟೂರ್ನಿಗೆ ಮೊಟ್ಟಮೊದಲ ಬಾರಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಜಂಟಿ ಬಿಡ್ ಅನ್ನು ಫಿಫಾ ಕೇಂದ್ರ ಕಚೇರಿಗೆ ಸಲ್ಲಿಸಿವೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.ಆಸ್ಟ್ರೇಲಿಯಾದ ಯುವ ಮತ್ತು ಕ್ರೀಡಾ ಸಚಿವ ರಿಚರ್ಡ್ ಕೋಲ್ಬೆಕ್ ಮಾತನಾಡಿ,  "ವಿಶ್ವ ದರ್ಜೆಯ ಸ್ಥಳಗಳನ್ನು ತಲುಪಿಸುವುದಲ್ಲದೆ, ಸ್ಥಳೀಯ ಪ್ರದೇಶದ ರೋಮಾಂಚಕ ಮತ್ತು ವೈವಿಧ್ಯಮಯ ಫುಟ್ಬಾಲ್ ಸಮುದಾಯಗಳನ್ನು ಮುನ್ನಡೆ ತರುವ ಪ್ರಯತ್ನ ಮಾಡಲಾಗುತ್ತದೆ," ಎಂದು ಹೇಳಿದರು. "ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ನಡೆಸುವ ಮತ್ತು ಸಹ-ಆತಿಥ್ಯ ವಹಿಸಿ ಯಶಸ್ವಿಯಾಗಿರುವ ಹಲವು ನಿದರ್ಶನಗಳಿವೆ. 2023ರ ಫಿಫಾ ಮಹಿಳಾ ವಿಶ್ವಕಪ್‌ ಗೆ ಅಗತ್ಯವಾದ   ಮೂಲಸೌಕರ್ಯ, ಪರಿಣಿತಿ ಮತ್ತು ಉತ್ಸಾಹವನ್ನು ನಾವು ಹೊಂದಿದ್ದೇವೆ." ಎಂದು ವಿವರಿಸಿದರು.ನ್ಯೂಜಿಲೆಂಡ್‌ನ ಕ್ರೀಡಾ ಮತ್ತು ಮನರಂಜನಾ ಸಚಿವ ಗ್ರಾಂಟ್ ರಾಬರ್ಟ್‌ಸನ್  ತಮ್ಮ ಹಾಗೂ ಆಸ್ಟ್ರೇಲಿಯಾದ ಪ್ರತಿವಾದಿ ಹೇಳಿಕೆಗಳನ್ನು ವಿಸ್ತರಿಸಿದರು. "ನಮ್ಮ ಉಭಯ ದೇಶಗಳಲ್ಲಿನ ಫುಟ್ಬಾಲ್ ಸಮುದಾಯ, ಕ್ರೀಡಾಂಗಣಗಳು, ಆತಿಥೇಯ ನಗರಗಳು ಮತ್ತು ರಾಜ್ಯಗಳು ಈ ಬಿಡ್ ಅನ್ನು ಸ್ವೀಕರಿಸುವುದರಲ್ಲಿ ಆಶ್ಚರ್ಯವೇನಿಲ್ಲ" ಎಂದು ಅವರು ಹೇಳಿದರು."ವಿಶ್ವಕಪ್‌ ಆಯೋಜನೆಯಾದಲ್ಲಿ ಮಹಿಳಾ ಫುಟ್ಬಾಲ್‌ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ ಮತ್ತು ಆಟದಲ್ಲಿ ಗಮನಾರ್ಹ ಹೂಡಿಕೆಯನ್ನು ಸೆಳೆಯಬಹುದು," ಎಂದು ಅಭಿಪ್ರಾಯಪಟ್ಟಿದ್ದಾರೆ.