ನವದೆಹಲಿ, ಮೇ 8, ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ರೈಲು ದುರಂತ, ಕಾರ್ಮಿಕರ ಸಾವಿಗೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಶೋಕ ವ್ತಕ್ತಪಡಿದ್ದಾರೆ. ಮಹಾರಾಷ್ಟ್ರದ ಔ ರಂಗಾಬಾದಿನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಪ್ರಾಣಹಾನಿಯಾಗಿರುವ ಬಗ್ಗೆ ದುಃಖಿತ ಕುಟುಂಬಗಳಿಗೆ ಸಂತಾಪ ಎಂದು ಉಪರಾಷ್ಟ್ರಪತಿ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಔರಂಗಾಬಾದ್‌ನಿಂದ 25 ಕಿ.ಮೀ ದೂರದಲ್ಲಿರುವ ಬದ್ನಾಪುರ ಮತ್ತು ಕರ್ಮದ್ ನಡುವೆ ಸರಕು ಸಾಗಣೆ ರೈಲು ಅಫಘಾತದಲ್ಲಿ ಕನಿಷ್ಠ 14 ವಲಸೆ ಕಾರ್ಮಿಕರನ್ನು ಸಾವಿಗೀಡಾಗಿದ್ದು, ಇತರೆ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಕಾರ್ಮಿಕರು ರೈಲು ಹಳಿಗಳ ಉದ್ದಕ್ಕೂ ನಡೆದುಕೊಂಡು ಹೋಗುತ್ತಿದ್ದರು ಮತ್ತು ಬಳಲಿಕೆಯಿಂದಾಗಿ ಹಳಿಗಳ ಮೇಲೆ ಮಲಗಿದ್ದರು.