ನವದೆಹಲಿ, ಮೇ 8, ಮಹಾರಾಷ್ಟ್ರದ ಔ ರಂಗಾಬಾದ್‌ನಲ್ಲಿ ಸಂಭವಿಸಿದ ರೈಲು ಅಪಘಾತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಪ್ರಧಾನಿ ದುಃಖ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಸಂಭವಿಸಿದ ರೈಲು ಅಪಘಾತದಿಂದ ಪ್ರಾಣಹಾನಿ ಕೇಳಿ ತೀವ್ರವಾಗಿ ದುಃಖಿವಾಗಿದೆ ಎಂದು ಹೇಳಿದ್ದಾರೆ. ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಮಾತನಾಡಿ ಅಗತ್ಯವಿರುವ ಎಲ್ಲ ಸಹಾಯ ಮಾಡುವಂತೆ ಎಂದು ಪ್ರಧಾನಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.ಔರಂಗಾಬಾದ್‌ನಿಂದ 25 ಕಿ.ಮೀ ದೂರದಲ್ಲಿರುವ ಬದ್ನಾಪುರ ಮತ್ತು ಕರ್ಮದ್ ನಡುವೆ ಸಂಭವಿಸಿದ ಸರಕು ಸಾಗಣೆ ಅಪಘಾತದಲ್ಲಿ 14 ಕಾರ್ಮಿಕರು ಮೃತಪಟ್ಟು ಇತರೆ ಹಲವರು ಗಾಯಗೊಂಡಿದ್ದಾರೆ.